ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 20ನೇ ತಾರೀಕಿನ ಬುಧವಾರದಂದು ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 574.35 ಪಾಯಿಂಟ್ಸ್ ಅಥವಾ ಶೇ 1.02ರಷ್ಟು ಏರಿಕೆಯಾದರೆ, ನಿಫ್ಟಿ 50 ಸೂಚ್ಯಂಕವು 177.80 ಪಾಯಿಂಟ್ಸ್ ಅಥವಾ ಶೇ 1.05ರಷ್ಟು ಮೇಲೇರಿ 17,136.50 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇಂದಿನ ವಹಿವಾಟಿನಲ್ಲಿ 1716 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 1593 ಕಂಪೆನಿ ಷೇರುಗಳು ಇಳಿಕೆ ಕಂಡವು. 111 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ವಾಹನ, ಫಾರ್ಮಾಸ್ಯುಟಿಕಲ್ಸ್, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 1ರಿಂದ 2ರಷ್ಟು ಹೆಚ್ಚಳ ಕಂಡವು.
ಇನ್ನು ಲೋಹ ಮತ್ತು ಬ್ಯಾಂಕಿಂಗ್ ಸ್ಟಾಕ್ಗಳಲ್ಲಿ ಮಾರಾಟ ಕಂಡುವಂತು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯವಾದವು ಈ ದಿನದ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣದ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಿಪಿಸಿಎಲ್ ಶೇ 3.75
ಟಾಟಾ ಮೋಟಾರ್ಸ್ ಶೇ 3.67
ಶ್ರೀ ಸಿಮೆಂಟ್ಸ್ ಶೇ 3.43
ಅಲ್ಟ್ರಾ ಟೆಕ್ ಸಿಮೆಂಟ್ ಶೇ 3.36
ಐಷರ್ ಮೋಟಾರ್ಸ್ ಶೇ 3.34
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಫೈನಾನ್ಸ್ ಶೇ -3.13
ಐಸಿಐಸಿಐ ಬ್ಯಾಂಕ್ ಶೇ -1.40
ಬಜಾಜ್ ಫಿನ್ಸರ್ವ್ ಶೇ -1.34
ಜೆಎಸ್ಡಬ್ಲ್ಯು ಸ್ಟೀಲ್ ಶೇ -1.01
ಒಎನ್ಜಿಸಿ ಶೇ -0.93
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ