AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Fiber: ಜಿಯೋ ಫೈಬರ್ ಪೋಸ್ಟ್​ಪೇಯ್ಡ್ ಅಡಿಯಲ್ಲಿ ಹೊಸ ಮನರಂಜನಾ ಪ್ಲಾನ್; ದರಗಳ ವಿವರ ಇಲ್ಲಿದೆ

ಜಿಯೋ ಪೈಬರ್ ಬ್ರಾಡ್​ಬ್ಯಾಂಡ್​ನಿಂದ ಹೊಸ ಪೋಸ್ಟ್​ ಪೇಯ್ಡ್​ ಪ್ಲಾನ್ ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಈ ಲೇಖನದಲ್ಲಿ ಇವೆ.

Jio Fiber: ಜಿಯೋ ಫೈಬರ್ ಪೋಸ್ಟ್​ಪೇಯ್ಡ್ ಅಡಿಯಲ್ಲಿ ಹೊಸ ಮನರಂಜನಾ ಪ್ಲಾನ್; ದರಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 20, 2022 | 12:22 PM

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರ ಆದ ಜಿಯೋದಿಂದ (Jio) ಮಂಗಳವಾರ ಜಿಯೋಫೈಬರ್ ಪೋಸ್ಟ್‌ಪೇಯ್ಡ್ ವರ್ಗದ ಅಡಿಯಲ್ಲಿ ಹೊಸ ಪೋಸ್ಟ್‌ಪೇಯ್ಡ್ ಮನರಂಜನಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಕಂಪೆನಿಯ ಪ್ರಕಾರ, ಹೊಸ ಯೋಜನೆಗಳು ಏಪ್ರಿಲ್ 22ರಿಂದ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿವೆ. “ಬಳಕೆದಾರರು ಜಿಯೋಫೈಬರ್ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಆರಿಸಿದಾಗ ಶೂನ್ಯ ವೆಚ್ಚದಲ್ಲಿ ರೂ. 10,000 ಮೌಲ್ಯದ ಇಂಟರ್​ನೆಟ್ ಬಾಕ್ಸ್ (ಗೇಟ್‌ವೇ ರೂಟರ್), ಸೆಟ್-ಟಾಪ್ ಬಾಕ್ಸ್ ಮತ್ತು ಇನ್​ಸ್ಟಾಲೇಷನ್ ಪಡೆಯುತ್ತಾರೆ,” ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

“ತಿಂಗಳಿಗೆ ರೂ. 399ರಿಂದ ಪ್ರಾರಂಭವಾಗುವ ಅನಿಯಮಿತ ಹೈ-ಸ್ಪೀಡ್ ಇಂಟರ್​ನೆಟ್ ಅನ್ನು ಪಡೆಯುವುದನ್ನು ಬಳಕೆದಾರರು ಮುಂದುವರಿಸುತ್ತಾರೆ. ಹೆಚ್ಚುವರಿಯಾಗಿ ತಿಂಗಳಿಗೆ ಕೇವಲ 100 ಅಥವಾ 200 ರೂಪಾಯಿಗಳನ್ನು ಪಾವತಿಸುವ ಮೂಲಕ ಈಗ 14 OTT (ಓವರ್​ ದ ಟಾಪ್) ಅಪ್ಲಿಕೇಷನ್‌ಗಳ ಸಂಗ್ರಹದ ಮೂಲಕ ತಮ್ಮ ಆಯ್ಕೆಯ ಕಂಟೆಂಟ್​ಗಳ ಸಂಪರ್ಕ ಪಡೆಯಬಹುದು,” ಎಂದು ಅದು ಸೇರಿಸಿದೆ.

ಜಿಯೋ ಹೇಳಿಕೆ ಪ್ರಕಾರ, ಬಳಕೆದಾರರು ದೊಡ್ಡ ಪರದೆಯಲ್ಲಿ ಮತ್ತು ಸಣ್ಣ ಪರದೆಯಲ್ಲಿ 14 ಪ್ರಮುಖ ಮನರಂಜನಾ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ಪಡೆಯುತ್ತಾರೆ (ಬಹು ಸಾಧನಗಳು ಒಳಗೊಂಡಿರುತ್ತವೆ). “ಆ ಮೂಲಕ ಬಳಕೆದಾರರಿಗೆ ಅವರ ನೆಚ್ಚಿನ ಚಲನಚಿತ್ರಗಳು, ಟಿವಿ ಚಾನೆಲ್‌ಗಳು, ಮೂಲಗಳು, ಸುದ್ದಿ, ಪ್ರದರ್ಶನಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳಿಗೆ ಸಂಪರ್ಕವನ್ನು ನೀಡುತ್ತದೆ.” 14 ಅಪ್ಲಿಕೇಷನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, Sonyliv, Voot, ಸನ್​ನೆಕ್ಸ್ಟ್​, ಡಿಸ್ಕವರಿ+, Hoichoi, ಆಲ್ಟ್​ಬಾಲಾಜಿ, Eros Now, Lionsgate, ShemarooMe, Universal+, Voot Kids ಮತ್ತು ಜಿಯೋಸಿನಿಮಾ ಸೇರಿವೆ.

ಇದನ್ನೂ ಓದಿ: IPL 2022: ಐಪಿಎಲ್ 2022 ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಜಿಯೋದಿಂದ ಬಂಪರ್ ಆಫರ್ ಘೋಷಣೆ

ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ