ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೆಪ್ಟೆಂಬರ್ 24, 2021ರ ಶುಕ್ರವಾರವೂ ಗೆಲುವಿನ ಓಟ ಮುಂದುವರಿಸಿದ್ದು, ದಿನಾಂತ್ಯದ ಹೊತ್ತಿಗೆ 60 ಸಾವಿರ ಪಾಯಿಂಟ್ಸ್ ದಾಟಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಎತ್ತರವಾದ 60,333 ಹಾಗೂ 17,947.65 ಪಾಯಿಂಟ್ಸ್ಗಳನ್ನು ಕ್ರಮವಾಗಿ ಇಂಟ್ರಾಡೇನಲ್ಲಿ ಮುಟ್ಟಿದವು. ದಿನದ ಕೊನೆಗೆ ಸೆನ್ಸೆಕ್ಸ್ 163.11 ಪಾಯಿಂಟ್ಸ್ ಅಥವಾ ಶೇ 0.27 ಏರಿಕೆಯಾಗಿ 60,048.47ರಲ್ಲಿ ಈ ವಾರದ ವ್ಯವಹಾರ ಕೊನೆ ಮಾಡಿದೆ. ಇನ್ನು ನಿಫ್ಟಿ 30.20 ಪಾಯಿಂಟ್ಸ್ ಅಥವಾ ಶೇ 0.17ರಷ್ಟು ಮೇಲೇರಿ 17,853.20 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ. ಈ ವಾರದಲ್ಲಿ (ಸೋಮವಾರದಿಂದ ಶುಕ್ರವಾರದ ತನಕ) ಸೆನ್ಸೆಕ್ಸ್ ಹಾಗೂ ನಿಫ್ಟಿ ತಲಾ ಶೇ 1.5ರಷ್ಟು ಹೆಚ್ಚಳ ಆಗಿವೆ.
“ಜಾಗತಿಕವಾಗಿ ದುರ್ಬಲ ಮಾರುಕಟ್ಟೆಯ ಪರಿಣಾಮವು ದೇಶೀಯವಾಗಿ ಮೇಲ್ಮುಖವಾದ ಚಲನೆಗೆ ಯಾವುದೇ ರೀತಿಯಲ್ಲಿ ಅಡೆತಡೆ ಆಗಲಿಲ್ಲ. ರಿಯಾಲ್ಟಿ ಹಾಗೂ ಐ.ಟಿ. ಸ್ಟಾಕ್ಗಳು ಏರಿಕೆ ಕಾಣುವ ಮೂಲಕ ದೇಶೀ ಮಾರುಕಟ್ಟೆಯ ಏರಿಕೆ ಓಟಕ್ಕೆ ಸಹಕಾರಿ ಆಯಿತು. ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಖ್ಯೆ ಏರಿಕೆ ಆಗುವ ಮೂಲಕ ಭಾರತವೂ ಜಾಗತಿಕ ಈಕ್ವಿಟಿ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೂ ಮಿಡ್-ಕ್ಯಾಪ್ ಹಾಗೂ ಸ್ಮಾಲ್-ಕ್ಯಾಪ್ ಷೇರುಗಳಲ್ಲಿ ಲಾಭದ ನಗದೀಕರಣ ಕಂಡುಬಂದಿದೆ. ಅವು ಒತ್ತಡದಲ್ಲಿವೆ. ಮತ್ತು ಅಲ್ಪಾವಧಿಯಲ್ಲಿ ಹಾಗೇ ಮುಂದುವರಿಯಬಹುದು,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಹಾಗೂ ಮುದ್ರಾಂಕ ಶುಲ್ಕದಲ್ಲಿ (ಕರ್ನಾಟಕ) ಇಳಿಕೆ ಈ ಕಾರಣಕ್ಕೆ ರಿಯಾಲ್ಟಿ ವಲಯಕ್ಕೆ ಉತ್ತೇಜನ ಸಿಕ್ಕಿದ್ದು, ಅದಕ್ಕೆ ಪೂರಕವಾದ ವಲಯಗಳಲ್ಲೂ ಏರಿಕೆ ಆಗಿದೆ ಎಂದು ತಿಳಿಸಲಾಗಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಏಷ್ಯನ್ ಪೇಂಟ್ಸ್ ಶೇ 3.85
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.77
ಈಷರ್ ಮೋಟಾರ್ಸ್ ಶೇ 2.59
ಎಚ್ಸಿಎಲ್ ಟೆಕ್ ಶೇ 2.25
ಎಚ್ಡಿಎಫ್ಸಿ ಬ್ಯಾಂಕ್ ಶೇ 2.01
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಟಾಟಾ ಸ್ಟೀಲ್ ಶೇ -3.53
ಜೆಎಸ್ಡಬ್ಲ್ಯು ಸ್ಟೀಲ್ ಶೇ -2.67
ಎಸ್ಬಿಐ ಶೇ -2.01
ಡಿವೀಸ್ ಲ್ಯಾಬ್ಸ್ ಶೇ -1.99
ಆಕ್ಸಿಸ್ ಬ್ಯಾಂಕ್ ಶೇ -1.74
ಇದನ್ನೂ ಓದಿ: Sensex Crosses 60,000: ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 60,000 ಪಾಯಿಂಟ್ಸ್ ಆಚೆಗೆ; 18 ಸಾವಿರದತ್ತ ನಿಫ್ಟಿ 50
ಅಲ್ಪಾವಧಿಗೆ ರಿಟರ್ನ್ಸ್ ಬಯಸುವವರು ಷೇರುಗಳಲ್ಲಿ ಹಣ ಹೂಡಲೇಬಾರದು ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್
(Stock Market Index Sensex And Nifty Closes At Record High On September 24 2021)