ಭಾರೀ ಏರಿಳಿತದಿಂದ ಕೂಡಿದ್ದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಏಪ್ರಿಲ್ 19ನೇ ತಾರೀಕಿನ ಮಂಗಳವಾರದಂದು ಇಳಿಕೆಯಲ್ಲೇ ಮುಕ್ತಾಯ ಕಂಡವು. ನಿಫ್ಟಿ 50 ಸೂಚ್ಯಂಕವು 17000 ಪಾಯಿಂಟ್ಸ್ಗಿಂತ ಕೆಳಗೆ ಇಳಿಯಿತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 703.59 ಪಾಯಿಂಟ್ಸ್ ಅಥವಾ ಶೇ 1.23 ಪಾಯಿಂಟ್ಸ್ ಕುಸಿತ ಕಂಡು, 56,463.15 ಪಾಯಿಂಟ್ಸ್ನಲ್ಲಿ ವ್ಯವಹಾರ ಚುಕ್ತಾ ಮಾಡಿತು. ಇನ್ನು ನಿಫ್ಟಿ 215 ಪಾಯಿಂಟ್ಸ್ ಅಥವಾ ಶೇ 1.25ರಷ್ಟು ನೆಲ ಕಚ್ಚಿ, 16,958.70 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿತು. ಇಂದಿನ ವಹಿವಾಟಿನಲ್ಲಿ 1111 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 2216 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಇನ್ನು 118 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ವಲಯವಾರು ಗಮನಿಸುವುದಾದರೆ, ತೈಲ ಮತ್ತು ಅನಿಲ ಹೊರತುಪಡಿಸಿದಂತೆ ಉಳಿದೆಲ್ಲ ವಲಯಗಳೂ ಇಳಿಕೆಯಲ್ಲೇ ಮುಗಿದವು. ಮಾಹಿತಿ ತಂತ್ರಜ್ಞಾನ, ವಿದ್ಯುತ್, ರಿಯಾಲ್ಟಿ ಮತ್ತು ಎಫ್ಎಂಸಿಜಿ ವಲಯಗಳು ತಲಾ ಶೇ 2ರಷ್ಟು ಕುಸಿತ ದಾಖಲಿಸಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಇಳಿಕೆ ಕಂಡವು.
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಅಪೋಲೋ ಹಾಸ್ಪಿಟಲ್ ಶೇ 5.75
ಕೋಲ್ ಇಂಡಿಯಾ ಶೇ 4.38
ರಿಲಯನ್ಸ್ ಶೇ 3.81
ಐಸಿಐಸಿಐ ಬ್ಯಾಂಕ್ ಶೇ 1.12
ಬಿಪಿಸಿಎಲ್ ಶೇ 1.10
ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಎಚ್ಡಿಎಫ್ಸಿ ಶೇ -5.45
ಎಚ್ಡಿಎಫ್ಸಿ ಲೈಫ್ ಶೇ -4.81
ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ -4.15
ಎಚ್ಡಿಎಫ್ಸಿ ಬ್ಯಾಂಕ್ ಶೇ -3.82
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -3.76
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್