ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 4ನೇ ತಾರೀಕಿನ ಮಂಗಳವಾರದಂದು ಏರಿಕೆ ದಾಖಲಿಸಿವೆ. ದಿನಾಂತ್ಯಕ್ಕೆ 672.71 ಪಾಯಿಂಟ್ಸ್ ಅಥವಾ ಶೇ 1.14ರಷ್ಟು ಏರಿಕೆ ಕಂಡು, 59,855.93 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 179.60 ಪಾಯಿಂಟ್ಸ್ ಅಥವಾ ಶೇ 1.02ರಷ್ಟು ಮೇಲೇರಿ, 17805.30 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಲೋಹ ಹಾಗೂ ಫಾರ್ಮಾ ಇವೆರಡು ವಲಯಗಳನ್ನು ಹೊರತುಪಡಿಸಿ, ಇನ್ನೆಲ್ಲವೂ ಏರಿಕೆಯಲ್ಲೇ ದಿನದ ವ್ಯವಹಾರವನ್ನು ಮುಗಿಸಿವೆ. ಬ್ಯಾಂಕ್, ತೈಲ ಹಾಗೂ ಅನಿಲ ಮತ್ತು ವಿದ್ಯುತ್ ವಲಯದ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಹೆಚ್ಚಳವಾಗಿವೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇ 0.39ರಷ್ಟು ಏರಿಕೆಯಾಗಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಎನ್ಟಿಪಿಸಿ ಶೇ 5.48
ಒಎನ್ಜಿಸಿ ಶೇ 3.32
ಪವರ್ಗ್ರಿಡ್ ಕಾರ್ಪೊರೇಷನ್ ಶೇ 2.73
ಎಸ್ಬಿಐ ಶೇ 2.70
ಟೈಟಾನ್ ಕಂಪೆನಿ ಶೇ 2.34
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಟಾಟಾ ಮೋಟಾರ್ಸ್ ಶೇ -1.61
ಕೋಲ್ ಇಂಡಿಯಾ ಶೇ -1.48
ಸನ್ ಫಾರ್ಮಾ ಶೇ -1.33
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -1.22
ಶ್ರೀ ಸಿಮೆಂಟ್ಸ್ ಶೇ -1.08
ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?