ಭಾರತದ ಷೇರು ಮಾರುಕಟ್ಟೆಗಳೆನಿಸಿದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗಳು 2025ಕ್ಕೆ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿವೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಇತರೆ 14 ದಿನಗಳ ರಜೆಗಳು 2025ರ ವರ್ಷದಲ್ಲಿ ಇವೆ. ಬಿಎಸ್ಇ ಮತ್ತು ಎನ್ಎಸ್ಇ ಎರಡೂ ಕೂಡ ಏಕರೀತಿಯ ರಜಾದಿನಗಳ ಕ್ಯಾಲಂಡರ್ ಹೊಂದಿವೆ. ಫೆಬ್ರುವರಿ 26ರಂದು ಮಹಾಶಿವರಾತ್ರಿಯಿಂದ ಆರಂಭಿಸಿ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದವರೆಗೆ 14 ದಿನಗಳ ಕಾಲ ಟ್ರೇಡಿಂಗ್ಗೆ ರಜೆ ಇರುತ್ತದೆ.
ಇದನ್ನೂ ಓದಿ: ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ
ಇಲ್ಲಿ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ ಮೂರು ದಿನಗಳು ಷೇರು ಮಾರುಕಟ್ಟೆ ಬಂದ್ ಆಗುತ್ತವೆ. 2025ರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳನ್ನೂ ಸೇರಿಸಿದರೆ ಒಟ್ಟಾರೆ 118 ದಿನ ಟ್ರೇಡಿಂಗ್ಗೆ ರಜೆ ಇದ್ದಂತಾಗುತ್ತದೆ. ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ರಜೆ ಇರುತ್ತಿದ್ದ ಕೆಲ ಹಬ್ಬಗಳು 2025ರಲ್ಲಿ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಪ್ರತ್ಯೇಕ ರಜೆ ನೀಡಲಾಗಿಲ್ಲ. ಗಣರಾಜ್ಯೋತ್ಸವ, ಶ್ರೀರಾಮನವಮಿ, ಬಕ್ರೀದ್ ಮತ್ತು ಮೊಹರಂ ಹಬ್ಬಗಳು ಶನಿವಾರ ಮತ್ತು ಭಾನುವಾರ ದಿನಗಳಂದು ಇವೆ.
ಅಕ್ಟೋಬರ್ 21ರಂದು ಧನತ್ರಯೋದಶಿ ಅಥವಾ ಧನಲಕ್ಷ್ಮೀ ಪೂಜೆ ಇರುವುದರಿಂದ ಅಂದು ವ್ಯಾಪಾರವಾದರೆ ಇಡೀ ವರ್ಷ ಸಮೃದ್ಧಿ ನೆಲಸುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಪ್ರತೀ ವರ್ಷ ಆ ದಿವಸದಂದು ಷೇರು ಮಾರುಕಟ್ಟೆ ರಜೆ ಇದ್ದರೂ ಸುಮಾರು ಒಂದು ಗಂಟೆ ಕಾಲ ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ.
ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ
ಏಪ್ರಿಲ್ 10ರಿಂದ 14ರವರೆಗಿನ ಐದು ದಿನಗಳಲ್ಲಿ ನಾಲ್ಕು ದಿನ ಮಾರುಕಟ್ಟೆ ಬಂದ್ ಇರುತ್ತದೆ. ಹಾಗೆಯೇ, ಅಕ್ಟೋಬರ್ ತಿಂಗಳಲ್ಲೂ 18ರಿಂದ 22ರವರೆಗೆ ಐದು ದಿನದಲ್ಲಿ ನಾಲ್ಕು ದಿನ ಪೇಟೆ ಬಂದ್ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ