ನವದೆಹಲಿ, ಜೂನ್ 16: ಭಾರತದಲ್ಲಿ ಷೇರು ಮಾರುಕಟ್ಟೆ (stock market) ದಿನೇದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಮತ್ತು ಹೂಡಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಭಾರತದ್ದೂ ಒಂದಾಗಿದೆ. ಷೇರು ಮಾರುಕಟ್ಟೆ ವಾರದಲ್ಲಿ ಶನಿವಾರ ಮತ್ತು ಭಾನುವಾರ ಹೀಗೆ ಎರಡು ದಿನ ಬಂದ್ ಆಗಿರುತ್ತದೆ. ಇದರ ಜೊತೆಗೆ ಕೆಲ ಆಯ್ದ ಹಬ್ಬ ಹರಿದಿನಗಳಲ್ಲೂ ಮಾರುಕಟ್ಟೆ ಮುಚ್ಚಿರುತ್ತದೆ. ಆ ದಿನಗಳಲ್ಲಂದು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ನಡೆಯುವುದಿಲ್ಲ. ಇದೇ ಸೋಮವಾರ ಜೂನ್ 17ರಂದು ಬಕ್ರೀದ್ ಹಬ್ಬ ಇದೆ. ಅಂದು ಮಾರುಕಟ್ಟೆಗೆ ರಜೆ ಇರುತ್ತದೆ. ಎನ್ಎಸ್ಇ ಮತ್ತು ಬಿಎಸ್ಇ ಎರಡೂ ಎಕ್ಸ್ಚೇಂಜ್ಗಳಲ್ಲಿ ಬಕ್ರೀದ್ ಹಬ್ಬಕ್ಕೆ (Bakri Id) ರಜೆ ಇದೆ.
ಜನವರಿಯಲ್ಲಿ ರಿಪಬ್ಲಿಕ್ ಡೆ, ಮಾರ್ಚ್ನಲ್ಲಿ ಶಿವರಾತ್ರಿ, ಹೋಳಿ ಮತ್ತು ಗುಡ್ ಫ್ರೈಡೆ, ಏಪ್ರಿಲ್ನಲ್ಲಿ ಈದ್ ಉಲ್ ಫಿತರ್, ರಾಮನವಮಿ, ಹಾಗೂ ಮೇ ತಿಂಗಳಲ್ಲಿ ಮಹಾರಾಷ್ಟ್ರ ದಿನಗಳಲ್ಲಂದು ಷೇರು ಮಾರುಕಟ್ಟೆಗೆ ರಜೆ ಇತ್ತು. ಎರಡೂ ಷೇರು ವಿನಿಮಯ ಕೇಂದ್ರಗಳು ಮುಂಬೈನಲ್ಲಿ ಇದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮುಂಬೈನಲ್ಲಿ ಮತದಾನ ನಡೆಯುವ ದಿನವೂ ರಜೆ ಕೊಡಲಾಗಿತ್ತು. ಜೂನ್ನಿಂದ ಡಿಸೆಂಬರ್ವರೆಗೆ ಷೇರು ಮಾರುಕಟ್ಟೆಗೆ ಯಾವ್ಯಾವ ದಿನ ರಜೆ ಇದೆ, ಪಟ್ಟಿ ಈ ಕೆಳಕಂಡಂತಿದೆ:
ಇವಲ್ಲದೇ ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿ, ಗಣೇಶ ಹಬ್ಬ, ದಸರಾ ಹಬ್ಬ, ಬಲಿಪಾಡ್ಯಮಿ ಹಬ್ಬಗಳಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಆದರೆ, ಈ ಹಬ್ಬಗಳು ಶನಿವಾರ ಮತ್ತು ಭಾನುವಾರಗಳಂದೇ ಈ ವರ್ಷ ಇವೆ. ಹೀಗಾಗಿ, ಹೆಚ್ಚುವರಿ ರಜೆ ಆಗಿರುವುದಿಲ್ಲ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಂದಿಲ್ಲವಾ? ಜೂನ್ 18ಕ್ಕೆ ಬಿಡುಗಡೆ ಆಗಲಿದೆ ಹಣ
ದೀಪಾವಳಿಯ ಧನಲಕ್ಷ್ಮೀ ಹಬ್ಬ ಇರುವ ನವೆಂಬರ್ 1, ಶುಕ್ರವಾರದಂದು ಷೇರು ಮಾರುಕಟ್ಟೆಗೆ ರಜೆ ಇದೆಯಾದರೂ ಅಂದು ಒಂದು ಗಂಟೆ ಮುಹೂರ್ತ ವ್ಯಾಪಾರ ನಡೆಯುತ್ತದೆ. ಹಣದ ಚಟುವಟಿಕೆ ಆದ್ದರಿಂದ ಧನಲಕ್ಷ್ಮೀ ಹಬ್ಬದ ದಿನದಂದು ವ್ಯಾಪಾರ ವಹಿವಾಟು ನಡೆಯುವುದು ಬಹಳ ಅದೃಷ್ಟ ತರುತ್ತದೆ ಎನ್ನುವ ನಂಬಿಕ ಮೊದಲಿಂದಲೂ ವ್ಯಾಪಾರಸ್ಥರಿಗೆ ಇದೆ. ಈ ಕಾರಣಕ್ಕೆ ಅಂದು ಮುಹೂರ್ತ ಟ್ರೇಡಿಂಗ್ ಇಟ್ಟುಕೊಂಡಿರುತ್ತಾರೆ.
ನವೆಂಬರ್ 1ರಂದು ಒಂದು ಗಂಟೆಯ ಅವಧಿಯವರೆಗೆ ಸ್ಪೆಷಲ್ ಟ್ರೇಡಿಂಗ್ ಸೆಷನ್ ಇರುತ್ತದೆ. ಆ ಬಳಿಕ ವಿನಿಮಯ ಕೇಂದ್ರಗಳು ಬಂದ್ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ