
ನವದೆಹಲಿ, ಮೇ 19: ಹದಿನೈದು ವರ್ಷದಿಂದ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದ, ಮತ್ತು ಮೆಟಾದಲ್ಲಿ ಐದು ವರ್ಷದಿಂದ ಎಚ್ಆರ್ ಕೆಲಸ ಮಾಡುತ್ತಿದ್ದ ಮತ್ತು 2023ರ ಮಹಾ ಲೇ ಆಫ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿಕಾರ ಕೆನೆಡಿ (Chikara Kennedy) ತಾನೇ ಖುದ್ದಾಗಿ ಲೇ ಆಫ್ಗೆ ಬಲಿಪಶುವಾದ ಕಥೆ ಇದು. ಎಂಥವರಿಗಾದರೂ ಮಾನಸಿಕವಾಗಿ ಜರ್ಝರಿತಗೊಳಿಸಬಹುದಾದ ಈ ಲೇ ಆಫ್ ಕ್ರಮದ ಪರಿಣಾಮ ಈಕೆಯ ಜೀವನಕ್ಕೆ ಹೊಸ ತಿರುವು ಸಿಕ್ಕಿತ್ತು. ಈಗ ಈಕೆ ತನ್ನದೇ ಹೊಸ ಜೀವನ ಆರಂಭಿಸಿದ್ದಾಳೆ. ತಾನೇ ಸಿಇಒ ಆಗಿ ಬೆಳೆದಿದ್ದಾಳೆ. ಇದು ಸಂಕಷ್ಟ ಸಂದರ್ಭದಲ್ಲಿ ಹೇಗೆ ಹೊಸ ದಾರಿ ಹುಡುಕಬಹುದು ಎಂದು ತೋರಿಸುವ ಕಥೆ…
ಚಿಕಾರ ಕೆನೆಡಿ 2018ರಿಂದ ಮೆಟಾ ಕಂಪನಿಯಲ್ಲಿ ಎಚ್ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. 2023ರಲ್ಲಿ ಕಂಪನಿಯು 10,000 ಮಂದಿಯನ್ನು ಲೇ ಆಫ್ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿತು. ಉದ್ಯೋಗಿಗಳಿಗೆ ಘಾಸಿಯಾಗದ ರೀತಿಯಲ್ಲಿ ಲೇ ಆಫ್ ಹೇಗೆ ಮಾಡುವುದು ಎನ್ನುವ ಪ್ರಕ್ರಿಯೆಯನ್ನು ರೂಪಿಸಲು ನೆರವಾಗುವುದು ಅವರ ಕೆಲಸವಾಗಿತ್ತು. ಉದ್ಯೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಲೇ ಆಫ್ ಆಗಬೇಕು ಎಂಬುದು ಆಕೆಯ ನಿಲುವು. ನೋಡ ನೋಡುತ್ತಿದ್ದಂತೆಯೇ, ಆ ಲೇ ಆಫ್ ಭೂತಕ್ಕೆ ಖುದ್ದು ಚಿಕಾರ ಕೆನೆಡಿಯೇ ಬಲಿಯಾಗಿದ್ದಳು.
ಇದನ್ನೂ ಓದಿ: ಒಲಾ ಕೃತ್ರಿಮ್ ಉದ್ಯೋಗಿ ಆತ್ಮಹತ್ಯೆ; ಮ್ಯಾನೇಜರ್ ಕಾಟ, ಕೆಲಸದ ಒತ್ತಡಕ್ಕೆ ಬಲಿಯಾದನಾ ಯುವ ಎಂಜಿನಿಯರ್
ಲೇ ಆಫ್ ಆದ ಉದ್ಯೋಗಿಗಳ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಿದ್ದ ಚಿಕಾರಾಳಿಗೆ ತಾನೇ ಆ ಪರಿಸ್ಥಿತಿಗೆ ಸಿಲುಕಿದ್ದಳು. ಒಂದೆಡೆ, ಕೌಟುಂಬಿಕ ಸಮಸ್ಯೆ, ಮತ್ತೊಂದೆಡೆ ಉದ್ಯೋಗನಷ್ಟ. ಎಲ್ಲಾ ಕಂಪನಿಗಳೂ ಲೇ ಆಫ್ ಭರಾಟೆಯಲ್ಲಿದ್ದಾಗ ಮತ್ತೊಂದು ಕೆಲಸ ಎಲ್ಲಿ ಹುಡುಕುವುದು? ಚಿಕಾರ ಕೆನಡಿಗೆ ಯೋಜನೆ ಹತ್ತಿತ್ತು. ಆಕೆಯ ಮುಂದಿದ್ದುದು ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ?
ಚಿಕಾರಾ ಕೆನೆಡಿ ಕೆಲಸ ಕಳೆದುಕೊಂಡಾಗ ಎಲ್ಲವೂ ಗೊಂದಲದ ಗೂಡಾಗಿತ್ತು. ಅವರಿವರ ಸಲಹೆ ಕೇಳಿ ಗೊಂದಲ ಹೆಚ್ಚಿಸಿಕೊಳ್ಳುವ ಬದಲು ಮನದ ಮಾತು ಕೇಳಲು ಬಯಸುತ್ತಾಳೆ. ಕೊನೆಗೆ, ಬಾಲಿಗೆ ಟ್ರಿಪ್ ಹೋಗಿ ಏಕಾಂತದಲ್ಲಿ ಇರುವುದೆಂದು ನಿರ್ಧರಿಸಿ ಒಬ್ಬಳೇ ಹೊರಟುಬಿಡುತ್ತಾಳೆ. ವಾಷಿಂಗ್ಟನ್ ಡಿಸಿಯಿಂದ ಬಾಲಿಗೆ ಪ್ರಯಾಣ ಮಾಡುತ್ತಾಳೆ.
ಇದನ್ನೂ ಓದಿ: ಬಾಂಗ್ಲಾದೇಶದ ಅತಿದೊಡ್ಡ ಬ್ಯುಸಿನೆಸ್ಗೆ ಭಾರತದಿಂದ ಆಘಾತ; ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು ಬಾಂಗ್ಲಾ ಬಟ್ಟೆಗಳು
ಮೊಬೈಲ್, ಲ್ಯಾಪ್ಟಾಪ್ ಬಂದ್ ಮಾಡುತ್ತಾಳೆ. ಅಪರಿಚಿತರ ಜೊತೆ ಸಂಪರ್ಕದಲ್ಲಿರುತ್ತಾಳೆ. ಧ್ಯಾನ ಇತ್ಯಾದಿಯಲ್ಲಿ ನಿರತಲಾಗುತ್ತಾಳೆ. ಇದು ಆಕೆಗೆ ತನ್ನ ಒಳಮನಸ್ಸು ಅರಿಯಲು ಸಯಾಯವಾಗುತ್ತದೆ. ತನ್ನ ಗುರಿಗಳೇನು, ತನ್ನ ಶಕ್ತಿಗಳೇನು? ಖುಷಿ ನೀಡುವ ಕೆಲಸಗಳೇನು? ಇವೆಲ್ಲ ಪ್ರಶ್ನೆಗಳಿಗೆ ಈಕೆ ಬಾಲಿಯಲ್ಲಿ ಉತ್ತರ ಕಂಡುಕೊಳ್ಳುತ್ತಾಳೆ.
ಇದರ ಪರಿಣಾಮವಾಗಿ ಪವರ್ ಕೋಚಿಂಗ್ ಅಂಡ್ ಕನ್ಸಲ್ಟಿಂಗ್ ಎನ್ನುವ ಕಂಪನಿ ಕಟ್ಟುತ್ತಾಳೆ. ಇದು ಮಹಿಳೆಯರಿಗೆಂದು ಇರುವ ವೆಲ್ನೆಸ್ ರಿಟ್ರೀಟ್ ಕಂಪನಿ. ಇದೊಂದು ರೀತಿಯಲ್ಲಿ ಲೈಫ್ ಕೋಚ್ ಸೇವೆಯಂತೆ. ಜೀವನೋತ್ಸಾಹ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಚಿಕಾರಾ ಕೆನೆಡಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ