ಶಾಲಾ ಪರೀಕ್ಷೆಯಲ್ಲಿ ಫೇಲ್ ಆಗಿ ಊರು ಬಿಟ್ಟು ಹೋದ ಉಡುಪಿ ಹುಡುಗ ಇವತ್ತು ಉತ್ತರ ಭಾರತದ ದೋಸೆ ಕಿಂಗ್

|

Updated on: Apr 28, 2024 | 6:43 PM

Jayaram Banan success story: ಉಡುಪಿಯ ಕಾರ್ಕಳದಲ್ಲಿ ಹುಟ್ಟಿದ ಜಯರಾಮ್ ಬನನ್ ಇವತ್ತು ಉತ್ತರ ಭಾರತದ ದೋಸೆ ದೊರೆ ಎಂದು ಹೆಸರುವಾಸಿಯಾಗಿದ್ದಾರೆ. ಮನೆಯಲ್ಲಿ ಬಡತನ, ಪರೀಕ್ಷೆಯಲ್ಲಿ ಫೇಲ್, ಆದರೂ ದೃತಿಗೆಡದೆ ಊರು ಬಿಟ್ಟು ಮುಂಬೈ ಸೇರಿ ಹೋಟೆಲ್​ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿ ಸಂಪಾದನೆ ಶುರು ಮಾಡಿದ್ದ ಜಯರಾಮ್ ಇವತ್ತು 300 ಕೋಟಿ ರೂ ವಹಿವಾಟು ನಡೆಯುವ ಬಿಸಿನೆಸ್​ನ ಒಡೆಯರಾಗಿದ್ದಾರೆ. ಅವರ ಸಾಗರ್ ರತ್ನ, ಸ್ವಾಗರ್ ರೆಸ್ಟೋರೆಂಟ್​ಗಳು ಜಗತ್ತಿನಾದ್ಯಂತ ಹರಡಿವೆ.

ಶಾಲಾ ಪರೀಕ್ಷೆಯಲ್ಲಿ ಫೇಲ್ ಆಗಿ ಊರು ಬಿಟ್ಟು ಹೋದ ಉಡುಪಿ ಹುಡುಗ ಇವತ್ತು ಉತ್ತರ ಭಾರತದ ದೋಸೆ ಕಿಂಗ್
Vow ಮ್ಯಾಗಝಿನ್ ಪತ್ರಕರ್ತೆ ಹೇನಾ ಪಾಯಘಮ್ ಜೊತೆ ಜಯರಾಮ್ ಬನನ್ (pic credit: Hena Paygham twitter)
Follow us on

ಯಶಸ್ಸು ಗಳಿಸಲು ಓದು ಅನಿವಾರ್ಯತೆ ಅಲ್ಲ. ವಿದ್ಯಾಭ್ಯಾಸ ಇಲ್ಲದೇ ಇದ್ದರೂ ಜೀವನದಲ್ಲಿ ಯಶಸ್ಸು ಕಂಡ ಅನೇಕರಿದ್ದಾರೆ. ಶಾಲೆಯ ಓದು ತಲೆ ಹತ್ತದೇ ಫೇಲ್ ಆಗಿದ್ದ ಉಡುಪಿಯ ವ್ಯಕ್ತಿಯೊಬ್ಬರು ಇವತ್ತು ಬಿಸಿನೆಸ್​ನಲ್ಲಿ ಅದ್ಭುತ ಯಶಸ್ಸು ಗಳಿಸಿದ್ದಾರೆ. ಇವರೇ ಜಯರಾಮ್ ಬನನ್. ಉಡುಪಿಯ ಕಾರ್ಕಳದವರು. ರೆಸ್ಟೋರೆಂಟ್ ಬಿಸಿನೆಸ್​ನಲ್ಲಿ ಇವರು ಈಗ ಕಿಂಗ್ ಆಗಿದ್ದಾರೆ. ಮನೆಯಲ್ಲಿ ಕಷ್ಟ, ವಿದ್ಯೆ ತಲೆ ಹತ್ತದ ಸಂಕಷ್ಟ. ಹೇಗಾದರೂ ಹಣ ಸಂಪಾದಿಸಿ ಮನೆಯ ಆರ್ಥಿಕ ಸಂಕಷ್ಟ ತೊಲಗಿಸಬೇಕೆಂಬ ಸಂಕಲ್ಪ ತೊಟ್ಟು ಅವರು (Jayaram Banan) ಅಪ್ಪನ ಪರ್ಸ್​ನಿಂದ ಸ್ವಲ್ಪ ದುಡ್ಡು ತೆಗೆದುಕೊಂಡು ಊರು ಬಿಟ್ಟು ಹೋದವರು ಸಾಧನೆಯ ಹಾದಿ ಕಂಡುಕೊಂಡು ಹಿಂದಿರುಗಿ ನೋಡಲೇ ಇಲ್ಲ.

ಆಗ ಅರವತ್ತು, ಎಪ್ಪತ್ತು, ಎಂಬತ್ತರ ದಶಕ. ರಾಜ್ಯದಿಂದ ಹೊರಗೆ ಉದ್ಯೋಗ ಕನಸು ಹೊತ್ತವರನ್ನು ಕೈಬೀಸಿ ಕರೆಯುತ್ತಿದ್ದುದು ಮುಂಬೈ ನಗರಿ. ಜಯರಾಮ್ ಬನನ್ ಕೂಡ ಹೊಸ ಬದುಕಿಗೆ ದಾರಿ ಕೊಡುವ ಸಂಪಾದನೆಯ ಕನಸಿನೊಂದಿಗೆ ಪಾದ ಊರಿದ್ದು ಮುಂಬೈಗೆಯೇ. ಅಲ್ಲಿ ಹೋಟೆಲ್​ವೊಂದರಲ್ಲಿ ಪಾತ್ರೆ ತೊಡೆಯುವುದು ಇವರ ಮೊದಲ ಕೆಲಸ. ಸಂಬಳ ತಿಂಗಳಿಗೆ ಕೇವಲ 18 ರೂ. ತಮ್ಮ ಚುರುಕು ಕೆಲಸದಿಂದ ಗಮನ ಸೆಳೆಯುತ್ತಾ ಹೋದ ಇವರು ಅದೇ ಹೋಟೆಲ್​ಗೆ ಮ್ಯಾನೇಜರ್ ಆಗಿ ಹೋಗಿದ್ದರು. ಸಂಬಳ 200 ರೂ ಆಗಿತ್ತು.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ

1974ರಲ್ಲಿ ದೆಹಲಿಗೆ ಹೋಗಿ ಅಲ್ಲಿ ಕ್ಯಾಂಟೀನ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. 1986ರಲ್ಲಿ ಇವರು ರಾಷ್ಟ್ರರಾಜಧಾನಿಯಲ್ಲಿ ಸಾಗರ್ ರತ್ನ ಎಂಬ ಸ್ವಂತ ಹೋಟೆಲ್ ಆರಂಭಿಸಿದರು. ಆ ಹೋಟೆಲ್​ನ ಮೊದಲ ದಿನದ ಸಂಪಾದನೆ ಕೇವಲ 408 ರೂ ಮಾತ್ರವಂತೆ.

ಉತ್ತರ ಭಾರತದ ದೋಸೆ ಕಿಂಗ್

ಜಯರಾಮ್ ಬನನ್ ಅವರ ಸಾಗರ್ ರತ್ನ ಹೋಟೆಲ್ ಬಹಳ ಬೇಗ ಹೆಸರುವಾಸಿಯಾಯಿತು. ಅದರಲ್ಲೂ ಆ ಹೋಟೆಲ್​ನ ದೋಸೆ ರುಚಿ ಎಲ್ಲರಿಗೂ ಹಿಡಿಸತೊಡಗಿತು. ಬಿಸಿ ಇರುವ ಲೋಧಿ ಮಾರ್ಕೆಟ್​ನಲ್ಲಿದ್ದ ಇವರ ಈ ಹೋಟೆಲ್, ಮಾರುಕಟ್ಟೆಯಷ್ಟೇ ಗಿಜಿಗಿಜತೊಡಗಿತು.

ಸಾಗರ್ ರತ್ನ ಹೋಟೆಲ್

ಇದನ್ನೂ ಓದಿ: ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು

ಜಯರಾಮ್ ಬಿಸಿನೆಸ್ ದೆಹಲಿಗೆ ಸೀಮಿತವಾಗಲಿಲ್ಲ. ಕೆನಡಾ, ಸಿಂಗಾಪುರ್, ಬ್ಯಾಂಕಾಕ್ ನಗರಗಳಲ್ಲಿ ಇವರು ರೆಸ್ಟೋರೆಂಟ್ ತೆರೆದರು. 2002ರಲ್ಲಿ ಸ್ವಾಗರ್ ರೆಸ್ಟೋರೆಂಟ್ ಚೈನ್ ಸ್ಥಾಪಿಸಿ ತಮ್ಮ ಬಿಸಿನೆಸ್ ಅನ್ನು ಅಗಾಧವಾಗಿ ಬೆಳೆಸತೊಡಗಿದರು. ಇವತ್ತು ವಿಶ್ವಾದ್ಯಂತ 100 ರೆಸ್ಟೋರೆಂಟ್​ಗಳನ್ನು ಇವರು ನಡೆಸುತ್ತಿದ್ದಾರೆ. ಅವರ ವಾರ್ಷಿಕ ಬಿಸಿನೆಸ್ ವಹಿವಾಟು 300 ಕೋಟಿಗೂ ಹೆಚ್ಚಿದೆ. ಇದಪ್ಪಾ ಯಶಸ್ಸು ಎಂದರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ