ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್

Successful business secrets: ಇವತ್ತಿನ ಆಂಟ್ರಪ್ರನ್ಯೂರ್​ಗಳಿಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಕೆಲ ಉಪಯುಕ್ತ ಕಿವಿಮಾತುಗಳನ್ನು ಹೇಳಿದ್ದಾರೆ. ಸ್ಟಾರ್ಟಪ್ ಮಹಾಕುಂಭ್ ಕಾರ್ಯಕ್ರಮದಲ್ಲಿ ಇನ್ಫೋಎಡ್ಜ್ ಸಂಸ್ಥಾಪಕರ ಜೊತೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ದೀಪಿಂದರ್ ಗೋಯಲ್, ಒಂದು ಯಶಸ್ವಿ ಉದ್ದಿಮೆ ಸ್ಥಾಪಿಸಬೇಕೆನ್ನುವವರಿಗೆ ಹಣ ಮಾಡುವ ಉದ್ದೇಶ ಇರಬಾರದು. ಆ ಕಾರ್ಯದಲ್ಲಿ ಉತ್ಕಟತೆ ಹೊಂದಿದ್ದರೆ ಮಾತ್ರ ಕನಸಿನ ಕಂಪನಿ ಸ್ಥಾಪಿಸಬಹುದು ಎಂದು ಗೋಯಲ್ ಹೇಳಿದ್ದಾರೆ.

ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್
ದೀಪಿಂದರ್ ಗೋಯಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2024 | 3:16 PM

ನವದೆಹಲಿ, ಮಾರ್ಚ್ 18: ಇವತ್ತು ಉದ್ಯಮಿಗಳಿಗೆ ವಿಪುಲ ಅವಕಾಶಗಳಿವೆ. ಬಹಳಷ್ಟು ಸ್ಟಾರ್ಟಪ್​ಗಳು ಶುರುವಾಗುತ್ತಿವೆ. ಕೆಲವೇ ವರ್ಷಗಳಲ್ಲಿ ಯೂನಿಕಾರ್ನ್ ಆಗಿರುವ ಸ್ಟಾರ್ಟಪ್​ಗಳೂ ಉಂಟು. ಹಾಗೆಯೇ ಆರಂಭಗೊಂಡ ಭರಾಟೆಯಲ್ಲೇ ಮುರುಟಿಹೋದ ಸ್ಟಾರ್ಟಪ್​ಗಳೂ ಹಲವುಂಟು. ಸ್ವಂತ ಉದ್ದಿಮೆ ಸ್ಥಾಪಿಸಬೇಕೆಂದ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಹಣ ಮಾಡುವ ಉದ್ದೇಶವೇ ನಿಮ್ಮನ್ನು ಹೊಸ ಕಂಪನಿ ಸ್ಥಾಪನೆಗೆ ಪ್ರೇರೇಪಿಸುತ್ತಿದೆ ಎಂದರೆ ಅದು ಸೋಲಿಗೆ ಸೋಪಾನ ಹಾಕಿದಂತೆ ಎಂಬುದು ತಜ್ಞರ ಅನಿಸಿಕೆ. ಜೊಮಾಟೊ ಸಿಇಒ ದೀಪಿಂದರ್ ಗೋಯಲ್ (Deepinder goyal) ಈ ಮಾತನ್ನು ಅನುಮೋದಿಸುತ್ತಾರೆ. ಒಬ್ಬ ವ್ಯಕ್ತಿ ತನ್ನ ಕನಸಿನ ಕಂಪನಿಯನ್ನು ನಿರ್ಮಿಸಬೇಕಾದರೆ ಆ ವ್ಯವಹಾರ ನಿಮ್ಮ ಮನಸಿಗೆ ಹತ್ತಿರ (passionate) ಇರಬೇಕು. ಪ್ಯಾಶನ್ ಬೇಕು. ಹಣ ಮಾಡುವ ಉದ್ದೇಶ ಮಾತ್ರವೇ ಇದ್ದರೆ ಕೆಟ್ಟ ಆಡಳಿತ ನಿರ್ಧಾರಗಳಿಗೆ ಎಡೆಯಾಗುತ್ತದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.

ಸ್ಟಾರ್ಟಪ್ ಮಹಾಕುಂಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಗೋಯಲ್, ‘ಬಹಳಷ್ಟು ಜನರು ಕಂಪನಿಗಳನ್ನು ಸ್ಥಾಪಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಯಾಕೆ ಬಿಸಿನೆಸ್ ಆರಂಭಿಸಿದಿರಿ ಎಂದು ಅವರನ್ನು ಕೇಳಿದ್ದೇನೆ. ನಾನು ಬಹಳಷ್ಟು ಹಣ ಮಾಡಬೇಕು ಎಂಬ ಉತ್ತರ ಬರುತ್ತದೆ. ಹೀಗಾದರೆ ಪ್ರಯೋಜನಕ್ಕೆ ಬಾರುವುದಿಲ್ಲ. ಕೆಟ್ಟ ಆಡಳಿತ ನಿರ್ಧಾರಕ್ಕೆ ಎಡೆಯಾಗುತ್ತದೆ. ನೀವು ಒಂದು ಆರಂಭಿಸಲು ಅದು ಉದ್ದೇಶವಾಗಿರಬಾರದು.

ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ

‘ಒಂದು ಕೆಲಸದಲ್ಲಿ ನೀವು ಎಷ್ಟು ಉತ್ಕಟತೆ ಹೊಂದಿರಬೇಕೆಂದರೆ, ಅದರಲ್ಲಿ ನಿಮ್ಮ ಜೀವವನ್ನೇ ಪಣಕ್ಕಿಡಲು ಸಿದ್ದರಿರಬೇಕು. ಆಗ ಮಾತ್ರವೇ ನಿಮ್ಮ ಕನಸಿನ ಸಂಸ್ಥೆಯನ್ನು ಕಟ್ಟಲು ಸಾಧ್ಯ. ಪ್ಯಾಶನ್ ಇಟ್ಟುಕೊಂಡು ಮಾಡಬೇಕೆ ಹೊರತು ಹಣಕ್ಕಾಗಿ ಮಾಡಬೇಡಿ ಎಂಬುದೊಂದು ಸಲಹೆ ನೀಡಲು ಬಯಸುತ್ತೇನೆ,’ ಎಂದಿದ್ದಾರೆ ಜೊಮಾಟೊ ಸಿಇಒ.

ನಿರಂತರ ಆವಿಷ್ಕಾರ ಅಗತ್ಯ

ಎಲ್ಲಾ ಕಾಲಕ್ಕೂ ಸಲ್ಲಿಕೆಯಾಗುವ ಬಿಸಿನಸ್ ಮಾಡಲ್ ಇಲ್ಲ. ಬಿಸಿನೆಸ್​ನಲ್ಲಿ ಇನೋವೇಶನ್ ಬಹಳ ಮುಖ್ಯ. ಯಾವುದೇ ಬಿಸಿನೆಸ್ ಮಾಡಲ್ ಆದರೂ 10ಕ್ಕಿಂತ ಹೆಚ್ಚು ವರ್ಷ ಉಳಿಯಬೇಕಾದರೆ ನಿರಂತರ ಅವಿಷ್ಕಾರ ಬೇಕು ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್​ಗಳ ರಫ್ತು ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ; ಭಾರತಕ್ಕೆ 3ನೇ ಸ್ಥಾನ

ಖುಷಿಯಾಗಿರಲು ಮತ್ತು ಆರಾಮವಾಗಿರಲು ಬಿಸಿನೆಸ್ ಆರಂಭಿಸುತ್ತೇನೆಂದು ಹೋದರೆ ಅದು ತಪ್ಪು ಆಯ್ಕೆ. ನೀವು ಯಶಸ್ವಿಯಾಗಬೇಕಾದರೆ ಒತ್ತಡ ನಿಭಾಯಿಸುವುದನ್ನು ಕಲಿಯಬೇಕು ಎಂದು ಗೋಯಲ್ ಸಲಹೆ ನೀಡಿದ್ದಾರೆ.

ಸ್ಟಾರ್ಟಪ್ ಮಹಾಕುಂಭ್​ನಲ್ಲಿ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಜೊತೆ ಇನ್ಫೋ ಎಡ್ಜ್ ಸ್ಥಾಪಕ ಸಂಜೀವ್ ಬಿಖಚಂದಾನಿ ಅವರೂ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು