AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಗ್ರೂಪ್ ವಿರುದ್ಧ ಲಂಚ ಆರೋಪ; ಅಮೆರಿಕದಲ್ಲಿ ತನಿಖೆ; ಷೇರುಪೇಟೆಯಲ್ಲಿ ಮತ್ತೆ ಹಿನ್ನಡೆ

Adani Group Shares: ಅದಾನಿ ಗ್ರೂಪ್​ನ ಲಿಸ್ಟೆಡ್ ಕಂಪನಿಗಳ ಷೇರುಗಳು ಮಾರ್ಚ್ 18ರಂದು ಭಾರೀ ಹಿನ್ನಡೆ ಕಾಣುತ್ತಿವೆ. ಗ್ರೂಪ್​ನ ವಿವಿಧ ಡಾಲರ್ ಬಾಂಡ್​ಗಳೂ ಕೂಡ ಮೌಲ್ಯ ಕಳೆದುಕೊಳ್ಳುತ್ತಿವೆ. ಇಂಧನ ಯೋಜನೆಗಳ ಗುತ್ತಿಗೆ ಪಡೆಯಲು ಅಧಿಕಾರಿಗಳಿಗೆ ಅದಾನಿ ಗ್ರೂಪ್​ನಿಂದ ಲಂಚ ನೀಡಲಾಗಿದೆಯಾ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಕಾರಣಕ್ಕೆ ಅದಾನಿ ಗ್ರೂಪ್​ನ ಎಲ್ಲಾ ಷೇರುಗಳೂ ಕೂಡ ಕುಸಿತ ಕಂಡಿವೆ.

ಅದಾನಿ ಗ್ರೂಪ್ ವಿರುದ್ಧ ಲಂಚ ಆರೋಪ; ಅಮೆರಿಕದಲ್ಲಿ ತನಿಖೆ; ಷೇರುಪೇಟೆಯಲ್ಲಿ ಮತ್ತೆ ಹಿನ್ನಡೆ
ಅದಾನಿ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2024 | 12:51 PM

Share

ನವದೆಹಲಿ, ಮಾರ್ಚ್ 18: ಕಳೆದ ವರ್ಷ ಹಿಂಡನ್ಬರ್ಗ್ ವರದಿಯಿಂದ ಪಾತಾಳಕ್ಕೆ ಕುಸಿದು ಮತ್ತೆ ಚೇತರಿಸಿಕೊಳ್ಳುತ್ತಿದ್ದ ಅದಾನಿ ಗ್ರೂಪ್​ನ (Adani Group) ವಿವಿಧ ಷೇರುಗಳಿಗೆ ಮತ್ತೆ ದುರ್ದೆಸೆ ಶುರುವಾಗಿದೆ. ಅದಾನಿ ಗ್ರೂಪ್ ಹಾಗು ಗೌತಮ್ ಅದಾನಿ ವಿರುದ್ಧ ಎದುರಾಗಿರುವ ಲಂಚದ (bribery) ಆರೋಪ ಸಂಬಂಧ ಅಮೆರಿಕ ತನಿಖೆ ಚುರುಕುಗೊಳಿಸಿದ ಪರಿಣಾಮವಾಗಿ ಷೇರು ಪೇಟೆಯಲ್ಲಿ ಅದಾನಿ ಕಂಪನಿಗಳಿಗೆ ಭಾರೀ ಹಿನ್ನಡೆ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಗ್ರೂಪ್​ನ ಎಲ್ಲಾ 10 ಕಂಪನಿಗಳ ಷೇರುಗಳೂ ಕುಸಿತ ಕಂಡಿವೆ. ಸೋಮವಾರ ಬೆಳಗನ ವಹಿವಾಟಿನಲ್ಲೇ ಒಟ್ಟಾರೆ ಶೇ. 8ರಷ್ಟು ಷೇರುಬೆಲೆ ಕಡಿಮೆ ಆಗಿದೆ. ಅದಾನಿ ಗ್ರೂಪ್​ನ ಹಲವು ಡಾಲರ್ ಬಾಂಡ್​ಗಳೂ ಕೂಡ ಕುಸಿತ ಕಂಡಿವೆ.

ಅದಾನಿ ಗ್ರೀನ್ ಎನರ್ಜಿ ಶೇ. 8ರಷ್ಟು ಕಡಿಮೆ ಆಗಿದೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ಪವರ್, ಅದಾನಿ ವಿಲ್ಮರ್, ಎಸಿಸಿ ಸಿಮೆಂಟ್ಸ್, ಅಂಬುಜಾ ಸಿಮೆಂಟ್ಸ್, ಎನ್​ಡಿಟಿವಿ ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ಕೈಬಿಡುತ್ತಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್​ನ ವಿವಿಧ ಕಂಪನಿಗಳಲ್ಲಿ 2024-25ರಲ್ಲಿ 1.2 ಲಕ್ಷ ಕೋಟಿ ರೂ ಹೂಡಿಕೆ ಸಾಧ್ಯತೆ

ಅದಾನಿ ಗ್ರೂಪ್​ನ ವಿವಿಧ ಡಾಲರ್ ಬಾಂಡ್​ಗಳೂ ಹಿನ್ನಡೆ ಕಾಣುತ್ತಿವೆ. 2041ಕ್ಕೆ ಮೆಚ್ಯೂರ್ ಆಗು ಅದಾನಿ ಪೋರ್ಟ್ಸ್ ಡಾಲರ್ ಬಾಂಡ್ ಮೌಲ್ಯ ಬರೋಬ್ಬರಿ 2.4 ಸೆಂಟ್​ಗಳನ್ನು ಕುಸಿತ ಕಂಡಿದೆ. ಅದಾನಿ ರಿನಿವಬಲ್ ಎನರ್ಜಿ ಸಂಸ್ಥೆಯ ಡಾಲರ್ ಬಾಂಡ್ 2.3 ಸೆಂಟ್​ಗಳಷ್ಟು ಇಳಿಕೆ ಕಂಡಿದೆ.

ಅದಾನಿ ಗ್ರೂಪ್ ಮೇಲೆ ಅಮೆರಿಕದ ಕ್ರಮ ಏನು?

ಅದಾನಿ ಗ್ರೂಪ್​ನ ಯಾವುದಾದರೂ ಸಂಸ್ಥೆ ಅಥವಾ ವ್ಯಕ್ತಿಯು ಭಾರತದಲ್ಲಿ ಇಂಧನ ಯೋಜನೆಯ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಯೇ ಇಲ್ಲವಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ನ್ಯೂಯಾರ್ಕ್​ನ ಈಸ್ಟರ್ನ್ ಡಿಸ್ಟ್ರಿಕ್ಟ್ ಅಟಾರ್ನಿ ಅಫೀಸ್ ಮತ್ತು ವಾಷಿಂಗ್ಟನ್ ವಿಭಾಗದ ಜಸ್ಟಿಸ್ ಡಿಪಾರ್ಟ್ಮೆಂಟ್​ನ ಫ್ರಾಡ್ ಯೂನಿಟ್ ಈ ತನಿಖೆ ನಡೆಸುತ್ತಿವೆ.

ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ

ಇದು ಅದಾನಿ ಗ್ರೂಪ್​ನ ಬುಡವನ್ನು ಮತ್ತೊಮ್ಮೆ ಅಲುಗಾಡಿಸುತ್ತಿದೆ. ತನಿಖೆ ಈ ತನಿಖೆ ಬಗ್ಗೆ ಮಾಹಿತಿ ಇಲ್ಲ. ತನ್ನ ಆಡಳಿತ ಸಂಪೂರ್ಣ ಕಾನೂನು ಬದ್ಧವಾಗಿದೆ ಎಂದು ಅದಾನಿ ಗ್ರೂಪ್ ಹೇಳಿದೆಯಾದರೂ ಷೇರು ಮಾರುಕಟ್ಟೆಯಲ್ಲಿ ಅದರ ಪರಿಣಾಮ ಮಾತ್ರ ನಿಲ್ಲುವುದು ಅನುಮಾನ. ಹಿಂಡನ್ಬರ್ಗ ವರದಿ ಬಳಿಕ ಸಾಕಷ್ಟು ಷೇರುಸಂಪತ್ತು ಕಳೆದುಕೊಂಡಿದ್ದ ಸಂಸ್ಥೆ ಈಗ ಮತ್ತೊಮ್ಮೆ ಹಿನ್ನಡೆಯ ಹಾದಿಗೆ ನೂಕಲ್ಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ