ಕೇಂದ್ರ ಸರ್ಕಾರದ ಯೋಜನೆಯಾದ ಸ್ಪೆಷಲ್ ವಿಂಡೋ ಫಾರ್ ಅಫೋರ್ಡಬಲ್ ಅಂಡ್ ಮಿಡ್ ಇನ್ಕಮ್ ಹೌಸಿಂಗ್ (SWAMIH) ಫಂಡ್ ಅಡಿಯಲ್ಲಿ ಮೊದಲ ವಸತಿ ಯೋಜನೆಯನ್ನು ಗುರುವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನೆ ಖರೀದಿದಾರರಿಗೆ ಹಸ್ತಾಂತರಿಸಿದರು. ಇದು ಈ ಯೋಜನೆ ಅಡಿಯಲ್ಲಿ ಮುಕ್ತಾಯ ಆದ ಮೊದಲ ಯೋಜನೆ ಆಗಿದೆ. ವಸತಿ ಯೋಜನೆಯು ಮುಂಬೈ ಉಪನಗರದ ರಿವಾಲಿ ಪಾರ್ಕ್ನಲ್ಲಿದೆ. SWAMIH ನಿಧಿಯ ಅಡಿಯಲ್ಲಿ ಹಣಕಾಸು ನೆರವು ಪಡೆದ ಭಾರತದ ಮೊದಲ ವಸತಿ ಪ್ರಾಜೆಕ್ಟ್ ಇದಾಗಿದೆ. ವರ್ಚುವಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, SWAMIH ನಿಧಿ ಮೊದಲ ವಸತಿ ಯೋಜನೆ ಪೂರ್ಣಗೊಳಿಸಿರುವುದನ್ನು ನೋಡುವುದಕ್ಕೆ ನನಗೆ ಸಂತೋಷ ಆಗುತ್ತಿದೆ ಎಂದರು. ಕೋವಿಡ್-19ನಂಥ ಸಂಕಷ್ಟದ ಸಮಯದಲ್ಲೂ SWAMIH ನಿಧಿ ಕೆಲಸ ಮಾಡಿದೆಯಾದ್ದರಿಂದ ಇದು ಬಹಳ ಮುಖ್ಯವಾದ ಸಾಧನೆ ಎಂದರು.
ಒತ್ತಡದಲ್ಲಿ ಸಿಲುಕಿಕೊಂಡ ಕೈಗೆಟುಕುವ- ಮಧ್ಯಮ ಆದಾಯದ ಹೌಸಿಂಗ್ ಪ್ರಾಜೆಕ್ಟ್ಗಳಿಗೆ ಹಣಕಾಸು ನೆರವು ನೀಡಲು ಭಾರತ ಸರ್ಕಾರ ಮುಂದಾಯಿತು. ಆ ಮೂಲಕ ತಮ್ಮ ಶ್ರಮದ ಹಣ ಹಾಕಿದ ಮನೆ ಖರೀದಿದಾರರಿಗೆ ನಿರಾಳತೆ ದೊರೆತಿದೆ ಎಂದು ನಿರ್ಮಲಾ ಹೇಳಿದರು. ಇದರಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉದ್ಯೋಗ ಕೂಡ ದೊರೆಯುತ್ತದೆ. ಅದರ ಜತೆಗೆ ಕಟ್ಟಡ ನಿರ್ಮಾಣದ ಮೇಲೆ ಅವಲಂಬಿಸಿದ ಇತರ ಕೈಗಾರಿಕೆಗಳು ಚೇತರಿಸಿಕೊಳ್ಳುತ್ತವೆ. ಉದಾಹರಣೆಗೆ, ಕಬ್ಬಿಣ, ಸಿಮೆಂಟ್ ಇತ್ಯಾದಿ. ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳ ಪೋರ್ಟ್ಫೋಲಿಯೋ ಉತ್ತಮಗೊಳ್ಳುತ್ತದೆ. ಮತ್ತು ದೇಶದಲ್ಲಿ ಆರ್ಥಿಕವಾಗಿ ಸಕಾರಾತ್ಮಕ ಭಾವ ಮೂಡುತ್ತದೆ ಎಂದರು.
ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಗೃಹ ಮತ್ತು ನಗರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಮತ್ತಿತರರು ಹಾಜರಿದ್ದರು. ಅಂದಹಾಗೆ SWAMIH ನಿಧಿಯ ಅಡಿಯಲ್ಲಿ 72 ಪ್ರಾಜೆಕ್ಟ್ಗಳಿಗೆ ಅನುಮತಿ ನೀಡಲಾಗಿದೆ. ಅವು 44,100 ಮನೆಗಳನ್ನು ಪೂರ್ಣಗೊಳಿಸುತ್ತವೆ. 132 ಪ್ರಾಜೆಕ್ಟ್ಗಳು ಪ್ರಾಥಮಿಕ ಮಂಜೂರಾತಿ ಪಡೆದಿವೆ. ಅವುಗಳಿಂದ ಇನ್ನೂ 72,500 ಮನೆಗಳು ಪೂರ್ಣಗೊಳುತ್ತವೆ.
The #SWAMIH Fund has given final approval to 72 projects to complete 44,100 homes.
Another 132 projects received preliminary approval, to complete additional 72,500 homes.
The Fund shall complete an aggregate of 1,16,600 homes.#Homebuyers #Middleclass https://t.co/ME07G3vL3X
— Nirmala Sitharaman (@nsitharaman) May 13, 2021
ಇದನ್ನೂ ಓದಿ: ಕೊವಿಡ್ ವಿರುದ್ಧದ ಹೋರಾಟದಲ್ಲಿ ಬಳಸುವ ವಸ್ತುಗಳ ತೆರಿಗೆ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
(India’s first SWAMIH scheme funded residential project handed over to home buyers by Nirmala Sitharaman)
Published On - 12:00 am, Fri, 14 May 21