ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ

|

Updated on: Oct 05, 2023 | 11:07 AM

Swiggy Loans To Restaurants: 2017ರಲ್ಲಿ ಸ್ವಿಗ್ಗಿಯಿಂದ ಕ್ಯಾಪಿಟಲ್ ಅಸಿಸ್ಟ್ ಯೋಜನೆ ಆರಂಭವಾಗಿದ್ದು, ಕಳೆದ ವರ್ಷ (2022ರಲ್ಲಿ) ಸಾಕಷ್ಟು ಹೋಟೆಲ್​ಗಳು ಈ ಸಾಲ ಸೌಲಭ್ಯ ಪಡೆದಿದ್ದವು. ಆರು ವರ್ಷದಲ್ಲಿ ಸ್ವಿಗ್ಗಿಯಿಂದ ಸಾಲ ಪಡೆದ 8,000 ಹೋಟೆಲ್ ಮಾಲೀಕರ ಪೈಕಿ 3,000 ಮಂದಿ 2022ರಲ್ಲಿ ಸಾಲ ಪಡೆದಿದ್ದಾರೆ. ಈವರೆಗೆ ಒಟ್ಟು 450 ಕೋಟಿ ರೂ ಮೊತ್ತದಷ್ಟು ಹಣವನ್ನು ಸಾಲವಾಗಿ ವಿತರಿಸಲಾಗಿದೆ. ಇದಕ್ಕಾಗಿ ಇಂಡಿಫಿ, ಇನ್​ಕ್ರೆಡ್, ಎಫ್​ಟಿ ಕ್ಯಾಶ್, ಪೇಯು ಫೈನಾನ್ಸ್, ಐಐಎಫ್​ಎಲ್ ಮೊದಲಾದ ಹಣಕಾಸು ಸಂಸ್ಥೆಗಳ ಜೊತೆ ಸ್ವಿಗ್ಗಿ ಒಪ್ಪಂದ ಮಾಡಿಕೊಂಡಿದೆ.

ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್​ಗಳಿಗೆ 450 ಕೋಟಿ ರೂ ಸಾಲ ವಿತರಣೆ
ಸ್ವಿಗ್ಗಿ
Follow us on

ನವದೆಹಲಿ, ಅಕ್ಟೋಬರ್ 5: ಆನ್​ಲೈನ್ ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್ ಆದ ಸ್ವಿಗ್ಗಿ (swiggy) ತನ್ನ ರೆಸ್ಟೋರೆಂಟ್ ಪಾರ್ಟ್ನರ್​ಗಳನ್ನು ಬಲಪಡಿಸುವ ಉದ್ದೇಶದಿಂದ ಸಾಲದ ನೀಡತ್ತಿದೆ. ಅದರ ಕ್ಯಾಪಿಟಲ್ ಅಸಿಸ್ಟ್ ಯೋಜನೆ (capital assist program) ಅಡಿಯಲ್ಲಿ ಈವರೆಗೆ 8,000 ಹೋಟೆಲ್ ಮಾಲೀಕರಿಗೆ 450 ಕೋಟಿ ರೂ ಮೊತ್ತದಷ್ಟು ಸಾಲ ವಿತರಣೆ ಆಗಿರುವುದು ತಿಳಿದುಬಂದಿದೆ. 2017ರಲ್ಲಿ ಸ್ವಿಗ್ಗಿಯಿಂದ ಕ್ಯಾಪಿಟಲ್ ಅಸಿಸ್ಟ್ ಯೋಜನೆ ಆರಂಭವಾಗಿದ್ದು, ಕಳೆದ ವರ್ಷ (2022ರಲ್ಲಿ) ಸಾಕಷ್ಟು ಹೋಟೆಲ್​ಗಳು ಈ ಸಾಲ ಸೌಲಭ್ಯ ಪಡೆದಿದ್ದವು. ಆರು ವರ್ಷದಲ್ಲಿ ಸ್ವಿಗ್ಗಿಯಿಂದ ಸಾಲ ಪಡೆದ 8,000 ಹೋಟೆಲ್ ಮಾಲೀಕರ ಪೈಕಿ 3,000 ಮಂದಿ 2022ರಲ್ಲಿ ಸಾಲ ಪಡೆದಿದ್ದಾರೆ.

ಕ್ಯಾಪಿಟಲ್ ಅಸಿಸ್ಟ್ ಪ್ರೋಗ್ರಾಂ ಅಡಿಯಲ್ಲಿ ಅವಧಿ ಸಾಲ, ಕ್ರೆಡಿಟ್ ಲೈನ್ ಇತ್ಯಾದಿ ರೀತಿಯ ಧನಸಹಾಯವನ್ನು ಸ್ವಿಗ್ಗಿ ಒದಗಿಸುತ್ತದೆ. ಇದಕ್ಕಾಗಿ ಇಂಡಿಫಿ, ಇನ್​ಕ್ರೆಡ್, ಎಫ್​ಟಿ ಕ್ಯಾಶ್, ಪೇಯು ಫೈನಾನ್ಸ್, ಐಐಎಫ್​ಎಲ್ ಮೊದಲಾದ ಹಣಕಾಸು ಸಂಸ್ಥೆಗಳ ಜೊತೆ ಸ್ವಿಗ್ಗಿ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ

ಸ್ವಿಗ್ಗಿಯ ಮುಖ್ಯ ವ್ಯವಹಾರವು ರೆಸ್ಟೋರೆಂಟ್​ಗಳಿಂದ ಆಹಾರವನ್ನು ಗ್ರಾಹಕರಿಗೆ ತಲುಪಿಸುವುದು. ಹೀಗಾಗಿ ರೆಸ್ಟೋರೆಂಟ್​​ಗಳು ಆರೋಗ್ಯದಿಂದಿರುವುದು ಸ್ವಿಗ್ಗಿಗೆ ಮುಖ್ಯ. ರೆಸ್ಟೋರೆಂಟ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಬಂದ್ ಮಾಡಿದರೆ ಅದರ ಪರಿಣಾಮ ಸ್ವಿಗ್ಗಿ ಮೇಲೂ ಆಗುತ್ತದೆ. ಈ ಕಾರಣಕ್ಕೆ ಸ್ವಿಗ್ಗಿ 2017ರಲ್ಲಿ ಕ್ಯಾಪಿಟಲ್ ಅಸಿಸ್ಟ್ ಪ್ರೋಗ್ರಾಂ ಆರಂಭಿಸಿ, ರೆಸ್ಟೋರೆಂಟ್​ಗಳಿಗೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕವಾಗಿ ಬಲ ತುಂಬುವ ಕೆಲಸ ಮಾಡುತ್ತಿದೆ.

‘ಎನ್​ಬಿಎಫ್​ಸಿಗಳು ನಮ್ಮ ಪಾರ್ಟ್ನರುಗಳಿಗೆ (ಹೋಟೆಲ್) ಪ್ರೀ ಅಪ್ರೂವ್ಡ್ ಲೋನ್​ಗಳನ್ನು ತ್ವರಿತವಾಗಿ ವಿತರಿಸುತ್ತವೆ. ಇದರಿಂದ ಹೋಟೆಲ್​ಗಳ ವ್ಯವಹಾರ ಬಲಪಡಿಸುತ್ತಿವೆ,’ ಎಂದು ಸ್ವಿಗ್ಗಿ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಸ್ವಪ್ನಿಲ್ ಬಾಜಪೇಯ್ ಹೇಳುತ್ತಾರೆ.

ಇದನ್ನೂ ಓದಿ: ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆಗೆ ಸರ್ಕಾರದಿಂದ ಅಧಿಸೂಚನೆ; ಈ ಮಂಡಳಿ ಯಾಕೆ ಮುಖ್ಯ? ಇಲ್ಲಿದೆ ಡೀಟೇಲ್ಸ್

ನಾವು ಮೂರು ಸುತ್ತುಗಳ ಫೈನಾನ್ಸಿಂಗ್ ಪಡೆದಿದ್ದೇವೆ. ಅರ್ಜಿ ಸಲ್ಲಿಸುವುದರಿಂದ ಹಿಡಿದು, ಸಾಲ ಪಡೆಯುವವರೆಗೆ ಇಡೀ ಪ್ರಕ್ರಿಯೆ ಬಹಳ ವೇಗ ಹಾಗು ಪಾರದರ್ಶಕವಾಗಿದೆ ಎಂದು ಬೆಂಗಳೂರಿನ ಹೋಟೆಲ್​ವೊಂದರ ಮಾಲಕರಾದ ಆರತಿ ಮತ್ತು ಸುಮಿತ್ ರಸ್ತೋಗಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ