Tata Record: 30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್

|

Updated on: Feb 06, 2024 | 5:32 PM

Largest Market Cap: ಟಾಟಾ ಗ್ರೂಪ್​ನ ವಿವಿಧ ಲಿಸ್ಟೆಟ್ ಕಂಪನಿಗಳ ಒಟ್ಟಾರೆ ಮಾರ್ಕೆಟ್ ಕ್ಯಾಪ್ 30 ಲಕ್ಷ ಕೋಟಿ ರೂ ದಾಟಿದೆ. ಈ ಮೈಲಿಗಲ್ಲು ಮುಟ್ಟಿದ ಭಾರತದ ಮೊದಲ ಬಿಸಿನೆಸ್ ಗ್ರೂಪ್ ಆಗಿದೆ ಟಾಟಾ. ವೈಯಕ್ತಿಕ ಕಂಪನಿಗಳ ಪೈಕಿ ಭಾರತದಲ್ಲಿ ಅತಿಹೆಚ್ಚು ಷೇರುಸಂಪತ್ತು ಹೊಂದಿರುವುದು ರಿಲಾಯನ್ಸ್ ಇಂಡಸ್ಟ್ರೀಸ್.

Tata Record: 30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್
ಟಾಟಾ ಗ್ರೂಪ್
Follow us on

ನವದೆಹಲಿ, ಫೆಬ್ರುವರಿ 6: ಭಾರತದ ಪ್ರಮುಖ ಬಿಸಿನೆಸ್ ಗ್ರೂಪ್​ಗಳಲ್ಲಿ ಒಂದಾದ ಟಾಟಾ ಗ್ರೂಪ್ (Tata Group) ಹೊಸ ಮೈಲಿಗಲ್ಲು ಮುಟ್ಟಿದೆ. 30 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು (Market Cap) ಹೊಂದಿದ ಭಾರತದ ಮೊದಲ ಕಂಪನಿ ಎಂಬ ದಾಖಲೆಗೆ ಟಾಟಾ ಗ್ರೂಪ್ ಬಾಜನವಾಗಿದೆ. ಟಾಟಾ ಗ್ರೂಪ್​ಗೆ ಸೇರಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಟಾಟಾ ಪವರ್, ಟಾಟಾ ಮೋಟಾರ್ಸ್ ಮೊದಲಾದ ಕಂಪನಿಗಳ ಷೇರುಬೆಲೆ ಈ ವರ್ಷ ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಟಾಟಾ ಗ್ರೂಪ್​ನ ಈ ಎಲ್ಲಾ ಕಂಪನಿಗಳ ಒಟ್ಟಾರೆ ಮಾರ್ಕೆಟ್ ಕ್ಯಾಪ್ 30 ಲಕ್ಷ ಕೋಟಿ ರೂ ಗಡಿ ದಾಟಿದೆ.

ಟಾಟಾ ಗ್ರೂಪ್​ಗೆ ಸೇರಿದ 40ಕ್ಕೂ ಹೆಚ್ಚು ಕಂಪನಿಗಳಿವೆ. ಎಲ್ಲವೂ ಸೇರಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ಈ ಗ್ರೂಪ್​ನ 24 ಕಂಪನಿಗಳು ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿವೆ. ಇಷ್ಟೂ ಕಂಪನಿಗಳ ಷೇರುಮೊತ್ತ 30 ಲಕ್ಷ ಕೋಟಿ ರೂ ಗಡಿ ದಾಟಿರುವುದು ವಿಶೇಷ. ಟಾಟಾ ಕೆಮಿಕಲ್ಸ್, ತೇಜಸ್ ನೆಟ್ವರ್ಕ್, ಟಾಟಾ ಎಲ್​ಕ್ಸಿ ಷೇರು ಬಿಟ್ಟರೆ ಉಳಿದ ಷೇರುಗಳು ಈ ವರ್ಷ ಸಕಾರಾತ್ಮಕವಾಗಿ ಬೇಡಿಕೆ ಪಡೆದಿವೆ. ಅದರಲ್ಲೂ ಟಾಟಾ ಮೋಟಾರ್ಸ್, ಟಾಟಾ ಪವರ್ ಮತ್ತು ಇಂಡಿಯನ್ ಹೋಟೆಲ್ಸ್ ಕಂಪನಿ ಷೇರುಗಳು ಶೇ. 16ರಿಂದ 20ರವರೆಗೆ ಬೆಳೆದಿವೆ.

ಇದನ್ನೂ ಓದಿ: ಪೇಟಿಎಂ ವ್ಯಾಲಟ್ ವ್ಯವಹಾರ ಖರೀದಿಸಲು ಮುಂದಾದರಾ ಮುಕೇಶ್ ಅಂಬಾನಿ; ಇಲ್ಲಿದೆ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನೀಡಿದ ಹೇಳಿಕೆ

ಟಾಟಾ ಗ್ರೂಪ್ ಕಂಪನಿಗಳ ಪೈಕಿ ಟಿಸಿಎಸ್ ಅಥವಾ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯದ್ದೊಂದೇ ಷೇರುಸಂಪತ್ತು 180.22 ಬಿಲಿಯನ್ ಡಾಲರ್ ಇದೆ. ಅಂದರೆ 15 ಲಕ್ಷ ಕೋಟಿ ರೂ ಆಗುತ್ತದೆ. ವೈಯಕ್ತಿಕ ಕಂಪನಿಯ ಷೇರುಮೊತ್ತ ಪರಿಗಣಿಸಿದರೆ ವಿಶ್ವದಲ್ಲಿ ಟಿಸಿಎಸ್​ಗೆ 65ನೇ ಸ್ಥಾನ ಸಿಗುತ್ತದೆ. ಎಲ್ಲ ಟಾಟಾ ಕಂಪನಿಗಳದ್ದನ್ನು ಸೇರಿಸಿದರೆ 360 ಬಿಲಿಯನ್ ಡಾಲರ್​ಗೂ ಹೆಚ್ಚಾಗುತ್ತದೆ. ಇದು ರಿಲಾಯನ್ಸ್ ಗ್ರೂಪ್​ನ ಒಟ್ಟು ಷೇರುಸಂಪತ್ತನ್ನು ಮೀರಿಸಿದಂತಾಗುತ್ತದೆ. ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಮೊತ್ತ 232.70 ಬಿಲಿಯನ್ ಡಾಲರ್ ಇದೆ. ಜಾಗತಿಕವಾಗಿ 42ನೇ ಸ್ಥಾನದಲ್ಲಿದೆ.

ಮೈಕ್ರೋಸಾಫ್ಟ್ ಮತ್ತು ಆ್ಯಪಲ್ ಕಂಪನಿಗಳ ಮಾರ್ಕೆಟ್ ಕ್ಯಾಪ್ 3 ಟ್ರಿಲಿಯನ್ ಡಾಲರ್ ಇದ್ದು ಮೊದಲೆರಡು ಸ್ಥಾನದಲ್ಲಿವೆ. ಸೌದಿ ಅರಾಮ್ಕೋ, ಆಲ್ಫಬೆಟ್ (ಗೂಗಲ್), ಅಮೇಜಾನ್, ಎನ್​ವಿಡಿಯಾ ಮತ್ತು ಮೆಟಾ ಪ್ಲಾಟ್​ಫಾರ್ಮ್ಸ್ (ಫೇಸ್​ಬುಕ್) ಕಂಪನಿಗಳ ಷೇರುಸಂಪತ್ತು ಟ್ರಿಲಿಯನ್ ಡಾಲರ್​ಗಿಂತ ಹೆಚ್ಚಿದೆ.

ಇದನ್ನೂ ಓದಿ: ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯಾ? ತೆರಿಗೆ ಹಂಚಿಕೆ ವಿಧಾನ ಹೇಗಿದೆ? ಇಲ್ಲಿದೆ ವಿವರ

ಟಾಟಾ ಗ್ರೂಪ್​ನ ಒಟ್ಟಾರೆ ಷೇರುಸಂಪತ್ತನ್ನು ಈ ಪಟ್ಟಿಗೆ ಸೇರಿಸಿದರೆ 24ನೇ ಸ್ಥಾನ ಸಿಗುತ್ತದೆ. ಒರೆಕಲ್, ಟೆನ್ಸೆಂಟ್, ಎಎಂಡಿ, ಅಡೋಬ್ ಮೊದಲಾದವುಗಳ ಮಾರ್ಕೆಟ್ ಕ್ಯಾಪ್​ಗಿಂತ ಹೆಚ್ಚಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ