ನವದೆಹಲಿ: 2022ರ ವಿಶ್ವದ ಅತ್ಯಂತ ಮೌಲ್ಯಯುತ 100 ಬ್ರ್ಯಾಂಡ್ಗಳ ಪಟ್ಟಿಯನ್ನು (Most Valuable Brands) ‘ಆ್ಯನುವಲ್ ಗ್ಲೋಬಲ್ 500’ ಬಿಡುಗಡೆ ಮಾಡಿದ್ದು ಭಾರತದ ಏಕೈಕ ಕಂಪನಿ ಸ್ಥಾನ ಪಡೆದುಕೊಂಡಿದೆ. ಟಾಟಾ ಗ್ರೂಪ್ (Tata Group) ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ತಂತ್ರಜ್ಞಾನ ಕಂಪನಿಗಳಾದ ಆ್ಯಪಲ್, ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಹಾಗೂ ಫೇಸ್ಬುಕ್ಗಳು ಅಗ್ರ 5 ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ. 260.2 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಆ್ಯಪಲ್ ಅಗ್ರ ಸ್ಥಾನದಲ್ಲಿದೆ. 207.5 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಗೂಗಲ್ ನಂತರದ ಸ್ಥಾನದಲ್ಲಿದೆ.
ಆಟೊಮೊಬೈಲ್ ಉದ್ಯಮದಲ್ಲಿ ವಿಶೇಷ ಪ್ರಗತಿ ಸಾಧಿಸುವ ಮೂಲಕ ಟಾಟಾ ಗ್ರೂಪ್ ಇತ್ತೀಚೆಗೆ ಭಾರತದಲ್ಲಿ ಭಾರಿ ಪ್ರಸಿದ್ಧಿ ಪಡೆದಿದೆ. ವಿವಿಧ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿಯೂ ಕಂಪನಿ ಮುಂಚೂಣಿಯಲ್ಲಿದೆ. ಟಾಟಾ ಗ್ರೂಪ್ನ ಬ್ರ್ಯಾಂಡ್ ಆಗಿರುವ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಟಾಪ್ 10 ಮೌಲ್ಯಯುತ ಬ್ರ್ಯಾಂಡ್ಗಳು, ಮೌಲ್ಯ
ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಮಾರಾಟ: ಅಗ್ರಸ್ಥಾನದಲ್ಲಿ ಮುಂದುವರೆದ ಟಾಟಾ ಮೋಟಾರ್ಸ್
ಟಾಪ್ 100 ಕ್ಲಬ್ ಸೇರಿದ ಟಾಟಾ ಗ್ರೂಪ್
ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕಂಪನಿ ಟಾಟಾ ಗ್ರೂಪ್. ಈ ವರ್ಷ ಟಾಟಾ ಗ್ರೂಪ್ ಪಟ್ಟಿಯಲ್ಲಿ 77ನೇ ಸ್ಥಾನ ಪಡೆದಿದೆ. ಈ ಬ್ರ್ಯಾಂಡ್ ಶೇಕಡಾ 12.4ರ ಬೆಳವಣಿಗೆ ದಾಖಲಿಸಿದೆ. 23.9 ಶತಕೋಟಿ ಮೌಲ್ಯ ಹೊಂದಿರುವ ಟಾಟಾ ಗ್ರೂಪ್, ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಬ್ರ್ಯಾಂಡ್ ಆಗಿದೆ.
ಅತಿಹೆಚ್ಚು ಗಳಿಸುವ ಸಾಮಾಜಿಕ ಮಾಧ್ಯಮ ಆ್ಯಪ್ ಟಿಕ್ಟಾಕ್
ಐಪ್ಯಾಡ್ ಹೊರತುಪಡಿಸಿ ಆ್ಯಂಡ್ರಾಯ್ಡ್ ಮತ್ತು ಐಫೋನ್ ಸಾಧನಗಳಲ್ಲಿ ಖರೀದಿ ಹಾಗೂ ಸಬ್ಸ್ಕ್ರೈಬ್ ಮೂಲಕ ಟಿಕ್ಟಾಕ್ ಆ್ಯಪ್ ದಿನಕ್ಕೆ 25 ಲಕ್ಷ ಡಾಲರ್ ಗಳಿಸುತ್ತಿದೆ. ತಿಂಗಳ ಅವಧಿಯಲ್ಲಿ ಈ ಸಾಮಾಜಿಕ ಮಾಧ್ಯಮ ಆ್ಯಪ್ 75.8 ದಶಲಕ್ಷ ಡಾಲರ್ ಸಂಚಿತ ಆದಾಯ ಗಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ