AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಷ್ಟದಲ್ಲಿರುವ ಸಂಸ್ಥೆಗಳ ಸಹಯೋಗ; ಟಾಟಾ ಪ್ಲೇ, ಏರ್ಟೆಲ್ ಡಿಟಿಎಚ್ ವಿಲೀನ ಒಪ್ಪಂದ ಅಂತಿಮ ಹಂತದಲ್ಲಿ

Tata Play and Airtel DTH merger: ದೇಶದಲ್ಲಿ ಡಿಟಿಎಚ್ ಸೇವೆಗಳಿಗೆ ಬೇಡಿಕೆ ಕಡಿಮೆ ಆಗುತ್ತಿದ್ದು, ಸಬ್​ಸ್ಕ್ರೈಬರ್ಸ್ ಪ್ರಮಾಣ ಇಳಿಮುಖವಾಗುತ್ತಿದೆ. ಈ ವ್ಯವಹಾರಗಳು ನಷ್ಟ ಕಾಣುತ್ತಿವೆ. ದೇಶದ ಟಾಪ್-2 ಡಿಟಿಎಚ್ ಸೇವೆ ನೀಡುಗರಾದ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ ವಿಲೀನಗೊಳ್ಳಲು ಹೊರಟಿವೆ. ಈಗಾಗಲೇ ವಿಲೀನ ಒಪ್ಪಂದ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನಷ್ಟದಲ್ಲಿರುವ ಸಂಸ್ಥೆಗಳ ಸಹಯೋಗ; ಟಾಟಾ ಪ್ಲೇ, ಏರ್ಟೆಲ್ ಡಿಟಿಎಚ್ ವಿಲೀನ ಒಪ್ಪಂದ ಅಂತಿಮ ಹಂತದಲ್ಲಿ
ಏರ್ಟೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 25, 2025 | 10:21 AM

Share

ನವದೆಹಲಿ, ಫೆಬ್ರುವರಿ 25: ನಷ್ಟದಲ್ಲಿರುವ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಜಿಟಲ್ ಟಿವಿ ವ್ಯವಹಾರಗಳನ್ನು ವಿಲೀನಗೊಳಿಸಲು (Tata Play and Airtel DTH merger) ಟಾಟಾ ಗ್ರೂಪ್ ಮತ್ತು ಏರ್ಟೆಲ್ ಭಾರ್ತಿ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ವಿಲೀನ ಒಪ್ಪಂದ ರೂಪಿಸಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಜಿಟಲ್ ಟಿವಿ ಎರಡೂ ಕೂಡ ಡಿಟಿಎಚ್ ಸೇವೆಗಳನ್ನು ನೀಡುವ ವ್ಯವಹಾರದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಜನರು ಡಿಟಿಎಚ್ ಬದಲು ಡಿಜಿಟಲ್ ಪ್ಲಾಟ್​ಫಾರ್ಮ್​ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ಟ್ರೆಂಡ್ ಇದೆ. ಹೀಗಾಗಿ, ಡಿಟಿಎಚ್ ಸರ್ವಿಸ್​ಗೆ ಬೇಡಿಕೆ ಕಡಿಮೆ ಆಗಿದೆ. ಇದು ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್​ಗಳಿಗೆ ನಷ್ಟವಾಗಲು ಪ್ರಮುಖ ಕಾರಣವಾಗಿದೆ.

ಇತ್ತೀಚಿನ ವಿಲೀನದ ಟ್ರೆಂಡ್ ಇನ್ನೂ ಮುಂದುವರಿಯುತ್ತಿರುವಂತೆ ತೋರುತ್ತಿದೆ. 2016ರಲ್ಲಿ ಡಿಶ್ ಟಿವಿ ಮತ್ತು ವಿಡಿಯೋಕಾನ್ ಡಿಟಿಎಚ್ ವಿಲೀನಗೊಂಡಿದ್ದವು. ಡಿಜಿಟಲ್ ಕ್ಷೇತ್ರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ನ ವಯಾಕಾಮ್18 ಮತ್ತು ವಾಲ್ಟ್ ಡಿಸ್ನಿಯ ಸ್ಟಾರ್ ಇಂಡಿಯಾ ವ್ಯವಹಾರಗಳ ವಿಲೀನವಾಗಿತ್ತು. ಈಗ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ ವಿಲೀನದ ಪ್ರಯತ್ನ ನಡೆದಿದೆ.

ಟಾಟಾ ಪ್ಲೇ ಸದ್ಯ ಭಾರತದ ಅತಿದೊಡ್ಡ ಡಿಟಿಎಚ್ ಸೇವೆಯ ಕಂಪನಿ ಎನಿಸಿದೆ. 1.90 ಕೋಟಿ ಮನೆಗಳಲ್ಲಿ ಟಾಟಾ ಪ್ಲೇ ಸೇವೆ ಚಾಲ್ತಿಯಲ್ಲಿದೆ. ಡಿಟಿಎಚ್ ಮಾರುಕಟ್ಟೆಯಲ್ಲಿ ಟಾಟಾ ಪ್ಲೇ ಶೇ. 32ರಷ್ಟು ಪಾಲು ಹೊಂದಿದೆ. ನಂತರದ ಸ್ಥಾನ ಏರ್ಟೆಲ್​ನದ್ದು. ಇದು ಶೇ. 29ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. 2023-24ರಲ್ಲಿ ಟಾಟಾ ಪ್ಲೇ ಆದಾಯ 4,327 ಕೋಟಿ ರೂ ಇದೆ. ಏರ್ಟೆಲ್ ಡಿಟಿಎಚ್ ಆದಾಯ 3,045 ಕೋಟಿ ರೂ ಇದೆ. ಆದರೆ, ಎರಡೂ ಸಂಸ್ಥೆಗಳು ನಷ್ಟ ಅನುಭವಿಸಿರುವುದು ಕ್ರಮವಾಗಿ 354 ಕೋಟಿ ರೂ ಹಾಗೂ 76 ಕೋಟಿ ರೂ. ಈಗ ಲಾಭದ ಹಳಿಗೆ ಬರಲು ಎರಡೂ ಸಂಸ್ಥೆಗಳಿಗೆ ವಿಲೀನದ ದಾರಿ ಸೂಕ್ತವೆನಿಸಿದಂತಿದೆ.

ಇದನ್ನೂ ಓದಿ: ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು

ಏರ್ಟೆಲ್ ಡಿಜಿಟಲ್ ಟಿವಿ ಸಂಸ್ಥೆ ಕೇವಲ ಡಿಟಿಎಚ್ ಸೇವೆ ಮಾತ್ರವಲ್ಲ, ಟೆಲಿಕಾಂ, ಬ್ರಾಡ್​ಬ್ಯಾಂಡ್ ಸೇವೆಗಳನ್ನೂ ನೀಡುತ್ತದೆ. ಈಗ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ ವಿಲೀನದ ನಂತರ ಡಿಜಿಟಲ್ ಟಿವಿ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಯ ಉದಯವಾದಂತಾಗುತ್ತದೆ. ವರದಿಗಳ ಪ್ರಕಾರ, ವಿಲೀನದ ಬಳಿಕ ಶುರುವಾಗುವ ಹೊಸ ಕಂಪನಿಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯ ಪಾಲು ಶೇ. 52-55ರಷ್ಟಿರಬಹುದು. ಟಾಟಾ ಗ್ರೂಪ್​ನ ಪಾಲು ಶೇ. 45-48ರಷ್ಟಿರಬಹುದು ಎನ್ನಲಾಗಿದೆ. ಏರ್ಟೆಲ್​ನ ಸೀನಿಯರ್ ಮ್ಯಾನೇಜ್ಮೆಂಟ್ ಈ ಹೊಸ ಕಂಪನಿಯ ಆಡಳಿತ ಚುಕ್ಕಾಣಿ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ