
ಲಂಡನ್, ಏಪ್ರಿಲ್ 17: ಟಾಟಾ ಗ್ರೂಪ್ಗೆ ಸೇರಿದ ಆಗ್ರಟಾಸ್ ಎನರ್ಜಿ ಸ್ಟೋರೇಜ್ ಸಲ್ಯೂಶನ್ಸ್ ಸಂಸ್ಥೆ (Tata Sons’ subsidiary company) ಬ್ರಿಟನ್ನಲ್ಲಿ ಬೃಹತ್ ಬ್ಯಾಟರಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆರಂಭಿಸುತ್ತಿದೆ. ಇದಕ್ಕಾಗಿ ವಿವಿಧ ಬ್ಯಾಂಕುಗಳಿಂದ ಒಟ್ಟು 750 ಮಿಲಿಯನ್ ಪೌಂಡ್ (ಸುಮಾರು 8,500 ಕೋಟಿ ರೂ) ಸಾಲ ಪಡೆಯುತ್ತಿದೆ. ಸಾಲ ನೀಡಲು 15 ಬ್ಯಾಂಕುಗಳು ಸಹಿ ಹಾಕಿವೆ. ಹೀಗೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಅಥವಾ ಮಾಹಿತಿ ತಿಳಿದುಬಂದಿಲ್ಲ.
ಎರಡು ವರ್ಷದ ಅವಧಿಗೆ ನೀಡಲಾಗುತ್ತಿರುವ ಈ ಸಾಲಕ್ಕೆ ಬಡ್ಡಿದರ ಎಷ್ಟೆಂಬುದು ಸ್ಪಷ್ಟವಿಲ್ಲ. ಆದರೆ, ವರದಿ ಪ್ರಕಾರ ಸ್ಟರ್ಲಿಂಗ್ ಓವರ್ನೈಟ್ ಇಂಡೆಕ್ಸ್ ಆ್ಯವರೇಜ್ (SONA) ಪ್ರಕಾರ ಸಾಲ ವಿತರಣೆ ಆಗುತ್ತಿದೆ. ಸದ್ಯ ಈ ಸರಾಸರಿಯು ಶೇ. 4.46 ಇದೆ. ಟಾಟಾ ಸನ್ಸ್ಗೆ ಸಿಗುವ ಸಾಲಕ್ಕೆ ಬಡ್ಡಿಯನ್ನು ಇದೇ ಬೆಂಚ್ಮಾರ್ಕ್ ಪ್ರಕಾರ ವಿಧಿಸಬಹುದು ಎನ್ನಲಾಗಿದೆ.
ಟಾಟಾ ಸನ್ಸ್ಗೆ ಸಿಕ್ಕಿರುವ ಈ ಸಾಲದ ಹಣವು ಸ್ಟರ್ಲಿಂಗ್ ಪೌಂಡ್ ಕರೆನ್ಸಿಯದ್ದೇ ಇರಲಿದೆ. ಭಾರತೀಯ ಕಂಪನಿಗಳು ಪಡೆದ ಮೂರು ಅತಿದೊಡ್ಡ ಫಾರೀನ್ ಕರೆನ್ಸಿ ಲೋನ್ಗಳಲ್ಲಿ ಟಾಟಾ ಸನ್ಸ್ದೂ ಒಂದು ಎಂದು ಹೇಳಲಾಗಿದೆ. 15 ಬ್ಯಾಂಕುಗಳಿಂದ ಸಿಗುತ್ತಿರುವ 750 ಮಿಲಿಯನ್ ಪೌಂಡ್ ಸಾಲದ ಹಣ ಸ್ಯಾಂಕ್ಷನ್ ಆಗಿದ್ದು, ಹಂತ ಹಂತವಾಗಿ ವಿತರಣೆ ಆಗಬಹುದು.
ಇದನ್ನೂ ಓದಿ: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್ಗಳ ಸರದಿ
ಟಾಟಾ ಸನ್ಸ್ಗೆ ಸೇರಿದ ಆಗ್ರಟಾಸ್ ಕಂಪನಿ ಬ್ಯಾಟರಿ ಸೆಲ್ಗಳನ್ನು ತಯಾರಿಸುತ್ತದೆ. ಭಾರತ ಹಾಗೂ ಬ್ರಿಟನ್ ದೇಶದಲ್ಲಿ ಫ್ಯಾಕ್ಟರಿಗಳನ್ನು ಹೊಂದಿದೆ. ಬ್ರಿಟನ್ನಲ್ಲಿ ನಿರ್ಮಿಸಲಾಗುವ ಅದರ ಬ್ಯಾಟರಿ ಫ್ಯಾಕ್ಟರಿಯು ಬಹಳ ದೊಡ್ಡದಿರಲಿದೆ. ಆ ದೇಶದ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ಎನಿಸಲಿದೆ. ಬ್ರಿಟನ್ನ ವಾಹನ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಶೇ. 50 ಬ್ಯಾಟರಿ ಶಕ್ತಿಯನ್ನು ಈ ಘಟಕವು ಪೂರೈಸುವ ಸಾಮರ್ಥ್ಯ ಹೊಂದಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Thu, 17 April 25