AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Ports: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್​ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ

APSEZ acquires coal export port terminal from Adani family: ಅದಾನಿ ಕುಟುಂಬ ಒಡೆತನದ CRPSHPL ಸಂಸ್ಥೆಯಿಂದ ಅಬ್ಬಾಟ್ ಪಾಯಿಂಟ್ ಪೋರ್ಟ್ ಹೋಲ್ಡಿಂಗ್ಸ್ ಅನ್ನು ಅದಾನಿ ಪೋರ್ಟ್ಸ್ ಖರೀದಿಸಿದೆ. ಇದರೊಂದಿಗೆ, ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್​​ನಲ್ಲಿರುವ ಅಬ್ಬಾಟ್ ಪಾಯಿಂಟ್ ಬಂದರಿನ NQXT ಕಲ್ಲಿದ್ದಲು ಟರ್ಮಿನಲ್ ಈಗ ಅದಾನಿ ಪೋರ್ಟ್ಸ್​​ನ ಸುಪರ್ದಿಗೆ ಹೋಗಿದೆ. 2011ರಲ್ಲಿ ಇದೇ ಟರ್ಮಿನಲ್ ಅನ್ನು ಅದಾನಿ ಪೋರ್ಟ್ಸ್ ಸಂಸ್ಥೆ ಅದಾನಿ ಕುಟುಂಬಕ್ಕೆ ವರ್ಗಾಯಿಸಿತ್ತು. ಈಗ ಅದನ್ನು ಮರಳಿ ಪಡೆದಿದೆ.

Adani Ports: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್​ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ
ಅದಾನಿ ಪೋರ್ಟ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2025 | 11:56 AM

Share

ಮೆಲ್ಬೋರ್ನ್, ಏಪ್ರಿಲ್ 18: ಗೌತಮ್ ಅದಾನಿ ಮಾಲಕತ್ವದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ (APSEZ) ಸಂಸ್ಥೆ ಆಸ್ಟ್ರೇಲಿಯಾದಲ್ಲಿ ಕೋಲ್ ಎಕ್ಸ್​​ಪೋರ್ಟ್ ಟರ್ಮಿನಲ್​​ವೊಂದನ್ನು ಖರೀದಿಸಿದೆ. 2.4 ಬಿಲಿಯನ್ ಡಾಲರ್ ಮೌಲ್ಯದ ಷೇರು ವಿನಿಮಯ ಮೂಲಕ ಈ ಡೀಲ್ ನಡೆದಿದೆ. ಇದು ಅದಾನಿ ಗ್ರೂಪ್ ಮಧ್ಯೆ ನಡೆದಿರುವ ರಿಲೇಟೆಡ್ ಪಾರ್ಟಿ ಡೀಲ್ ಆಗಿದೆ. ಇದರೊಂದಿಗೆ ಅಸ್ಟ್ರೇಲಿಯಾದ ಪೂರ್ವ ಕರಾವಳಿ ಭಾಗದ ಕ್ವೀನ್ಸ್​​ಲ್ಯಾಂಡ್​​ ರಾಜ್ಯದಲ್ಲಿರುವ ಅಬ್ಬಾಟ್ ಪಾಯಿಂಟ್ ಪೋರ್ಟ್​​ನಲ್ಲಿನ NQXT ಟರ್ಮಿನಲ್ ಅದಾನಿ ಪೋರ್ಟ್ಸ್​​ನ ಪಾಲಾಗಿದೆ. ಈ ಪೋರ್ಟ್ ಕಲ್ಲಿದ್ದಲು ರಫ್ತಿಗೆ ಮುಡಿಪಾಗಿದೆ. ವರ್ಷಕ್ಕೆ 50 ಮಿಲಿಯನ್ ಟನ್ ಕಲ್ಲಿದ್ದಲು ಸಾಗಣೆ ಸಾಮರ್ಥ್ಯ ಈ ಪೋರ್ಟ್​​ಗೆ ಇದೆ.

ಅಬ್ಬಾಟ್ ಪಾಯಿಂಟ್ ಪೋರ್ಟ್ ಹೋಲ್ಡಿಂಗ್ಸ್ (APPH) ಎನ್ನುವ ಸಂಸ್ಥೆಯು ನಾರ್ತ್ ಕ್ವೀನ್ಸ್​​ಲ್ಯಾಂಡ್ ಎಕ್ಸ್​​ಪೋರ್ಟ್ ಟರ್ಮಿನಲ್​​ನ (NQXT) ಮಾಲಕತ್ವ ಹೊಂದಿದೆ. ಇದರ ಮಾಲಕತ್ವವು ಕಾರ್​​ಮೈಕೇಲ್ ರೇಲ್ ಅಂಡ್ ಪೋರ್ಟ್ ಸಿಂಗಾಪುರ್ ಹೋಲ್ಡಿಂಗ್ಸ್ (CRPSHPL) ಸಂಸ್ಥೆಗೆ ಸೇರಿದೆ. ಇಲ್ಲಿ CRPSHPL ಸಂಸ್ಥೆಯು ಗೌತಮ್ ಅದಾನಿ ಕುಟುಂಬಕ್ಕೆ ಸೇರಿದ್ದಾಗಿದೆ.

ಈಗ ನಡೆದಿರುವ ಡೀಲಿಂಗ್ ಅದಾನಿ ಗ್ರೂಪ್​​ನ ಆಂತರಿಕ ವ್ಯವಹಾರ. ಅದಾನಿ ಕುಟುಂಬಕ್ಕೆ ಸೇರಿದ CRPSHPL ಸಂಸ್ಥೆಯು APPH ಕಂಪನಿಯನ್ನು ಪೂರ್ಣವಾಗಿ ಅದಾನಿ ಪೋರ್ಟ್ಸ್​​ಗೆ ಮಾರಿದೆ. ಇದಕ್ಕೆ ಬದಲಾಗಿ ಅದಾನಿ ಪೋರ್ಟ್ಸ್ ಕಂಪನಿಯ 2.4 ಬಿಲಿಯನ್ ಡಾಲರ್ ಮೌಲ್ಯದ 14.38 ಕೋಟಿ ಹೊಸ ಈಕ್ವಿಟಿ ಷೇರುಗಳನ್ನು CRPSHPLಗೆ ನೀಡಲಿದೆ. ಈ ಮೂಲಕ ಅದಾನಿ ಪೋರ್ಟ್ಸ್​​​ನಲ್ಲಿ ಪ್ರೊಮೋಟರ್ಸ್​​ನ ಪಾಲು ಶೇ. 2.13ರಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ
Image
ಟಾಟಾ ಸನ್ಸ್​​ನಿಂದ ಬ್ರಿಟನ್​​ನಲ್ಲಿ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ
Image
ಭಾರತದಿಂದ ಆಹಾರವಸ್ತುಗಳ ರಫ್ತಿನಲ್ಲಿ ದಾಖಲೆ ಏರಿಕೆ
Image
ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಭಾರತದ ಗಂಭೀರ ಹೆಜ್ಜೆ
Image
ಒಂದು ವರ್ಷದಲ್ಲಿ 250 ಪೇಟೆಂಟ್ ದಾಖಲಿಸಿದ ಟಾಟಾ ಮೋಟಾರ್ಸ್

ಇದನ್ನೂ ಓದಿ: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

14 ವರ್ಷದ ಹಿಂದೆಯೆ ಟರ್ಮಿನಲ್ ಖರೀದಿಸಿದ್ದ ಅದಾನಿ ಪೋರ್ಟ್ಸ್

ಅದಾನಿ ಪೋರ್ಟ್ಸ್ ಸಂಸ್ಥೆ 2011ರಲ್ಲಿ NQXT ಟರ್ಮಿನಲ್ ಅನ್ನು 2 ಬಿಲಿಯನ್ ಡಅಲರ್​​ಗೆ ಖರೀದಿಸಿತ್ತು. 2013ರಲ್ಲಿ ಅದಾನಿ ಕುಟುಂಬಕ್ಕೆ ಇದೇ ಬೆಲೆಗೆ ಇದನ್ನು ವರ್ಗಾಯಿಸಿತ್ತು. ಭಾರತದಲ್ಲಿ ಬ್ಯುಸಿನೆಸ್ ವಿಸ್ತರಿಸುವತ್ತ ಗಮನ ಕೊಡಲು ಎಪಿಎಸ್​​ಇಝಡ್ ಆ ನಿರ್ಧಾರ ತೆಗೆದುಕೊಂಡಿತ್ತು. ಈಗ ಅದಾನಿ ಪೋರ್ಟ್ಸ್ ಸಾಕಷ್ಟು ಬಲವೃದ್ಧಿ ಕಂಡಿದ್ದು, ಜಾಗತಿಕವಾಗಿ ಬ್ಯುಸಿನೆಸ್ ವಿಸ್ತರಣೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯಾದ ಈ ಕಲ್ಲಿದ್ದಲು ಟರ್ಮಿನಲ್ ಅನ್ನು ಮತ್ತೆ ಸುಪರ್ದಿಗೆ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?