AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​​ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್​​ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ

Tata Sons to build UK's largest battery plant: ಟಾಟಾ ಸನ್ಸ್​​ನ ಮಾಲಕತ್ವದ ಆಗ್ರಟಾಸ್ ಎನರ್ಜಿ ಸ್ಟೋರೇಜ್ ಸಂಸ್ಥೆ ಬ್ರಿಟನ್​​​ನಲ್ಲಿ ಬ್ಯಾಟರಿ ತಯಾರಕಾ ಘಟಕ ನಿರ್ಮಿಸುತ್ತಿದೆ. ಇದಕ್ಕಾಗಿ ಬ್ರಿಟನ್​​ನ ವಿವಿಧ ಬ್ಯಾಂಕುಗಳು 750 ಮಿಲಿಯನ್ ಪೌಂಡ್​​ನಷ್ಟು ಸಾಲವನ್ನು ಎರಡು ವರ್ಷದ ಅವಧಿಗೆ ನೀಡುತ್ತಿವೆ. ಆಗ್ರಟಾಸ್ ಕಂಪನಿ ಈಗಾಗಲೇ ಭಾರತ ಹಾಗೂ ಬ್ರಿಟನ್​​​ನಲ್ಲಿ ಬ್ಯಾಟರಿ ಸೆಲ್ ತಯಾರಿಕೆಯ ಫ್ಯಾಕ್ಟರಿ ಹೊಂದಿದೆ.

ಬ್ರಿಟನ್​​ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್​​ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ
ಬ್ಯಾಟರಿ ಫ್ಯಾಕ್ಟರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 17, 2025 | 7:04 PM

ಲಂಡನ್, ಏಪ್ರಿಲ್ 17: ಟಾಟಾ ಗ್ರೂಪ್​​ಗೆ ಸೇರಿದ ಆಗ್ರಟಾಸ್ ಎನರ್ಜಿ ಸ್ಟೋರೇಜ್ ಸಲ್ಯೂಶನ್ಸ್ ಸಂಸ್ಥೆ (Tata Sons’ subsidiary company) ಬ್ರಿಟನ್​ನಲ್ಲಿ ಬೃಹತ್ ಬ್ಯಾಟರಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆರಂಭಿಸುತ್ತಿದೆ. ಇದಕ್ಕಾಗಿ ವಿವಿಧ ಬ್ಯಾಂಕುಗಳಿಂದ ಒಟ್ಟು 750 ಮಿಲಿಯನ್ ಪೌಂಡ್ (ಸುಮಾರು 8,500 ಕೋಟಿ ರೂ) ಸಾಲ ಪಡೆಯುತ್ತಿದೆ. ಸಾಲ ನೀಡಲು 15 ಬ್ಯಾಂಕುಗಳು ಸಹಿ ಹಾಕಿವೆ. ಹೀಗೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಅಥವಾ ಮಾಹಿತಿ ತಿಳಿದುಬಂದಿಲ್ಲ.

ಎರಡು ವರ್ಷದ ಅವಧಿಗೆ ನೀಡಲಾಗುತ್ತಿರುವ ಈ ಸಾಲಕ್ಕೆ ಬಡ್ಡಿದರ ಎಷ್ಟೆಂಬುದು ಸ್ಪಷ್ಟವಿಲ್ಲ. ಆದರೆ, ವರದಿ ಪ್ರಕಾರ ಸ್ಟರ್ಲಿಂಗ್ ಓವರ್​​ನೈಟ್ ಇಂಡೆಕ್ಸ್ ಆ್ಯವರೇಜ್ (SONA) ಪ್ರಕಾರ ಸಾಲ ವಿತರಣೆ ಆಗುತ್ತಿದೆ. ಸದ್ಯ ಈ ಸರಾಸರಿಯು ಶೇ. 4.46 ಇದೆ. ಟಾಟಾ ಸನ್ಸ್​​ಗೆ ಸಿಗುವ ಸಾಲಕ್ಕೆ ಬಡ್ಡಿಯನ್ನು ಇದೇ ಬೆಂಚ್​​ಮಾರ್ಕ್ ಪ್ರಕಾರ ವಿಧಿಸಬಹುದು ಎನ್ನಲಾಗಿದೆ.

ಟಾಟಾ ಸನ್ಸ್​​ಗೆ ಸಿಕ್ಕಿರುವ ಈ ಸಾಲದ ಹಣವು ಸ್ಟರ್ಲಿಂಗ್ ಪೌಂಡ್ ಕರೆನ್ಸಿಯದ್ದೇ ಇರಲಿದೆ. ಭಾರತೀಯ ಕಂಪನಿಗಳು ಪಡೆದ ಮೂರು ಅತಿದೊಡ್ಡ ಫಾರೀನ್ ಕರೆನ್ಸಿ ಲೋನ್​​ಗಳಲ್ಲಿ ಟಾಟಾ ಸನ್ಸ್​ದೂ ಒಂದು ಎಂದು ಹೇಳಲಾಗಿದೆ. 15 ಬ್ಯಾಂಕುಗಳಿಂದ ಸಿಗುತ್ತಿರುವ 750 ಮಿಲಿಯನ್ ಪೌಂಡ್ ಸಾಲದ ಹಣ ಸ್ಯಾಂಕ್ಷನ್ ಆಗಿದ್ದು, ಹಂತ ಹಂತವಾಗಿ ವಿತರಣೆ ಆಗಬಹುದು.

ಇದನ್ನೂ ಓದಿ
Image
ಭಾರತದಿಂದ ಆಹಾರವಸ್ತುಗಳ ರಫ್ತಿನಲ್ಲಿ ದಾಖಲೆ ಏರಿಕೆ
Image
ಅಮೆರಿಕಕ್ಕೆ ಭಾರತದ ರಫ್ತಿನಲ್ಲಿ ಹೆಚ್ಚಳ
Image
ಮಾರ್ಚ್​​​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿಕೆ
Image
ಹೋಲ್​​​ಸೇಲ್ ಹಣದುಬ್ಬರ ಶೇ 2.05ಕ್ಕೆ ಇಳಿಕೆ

ಇದನ್ನೂ ಓದಿ: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

ಟಾಟಾ ಸನ್ಸ್​​ಗೆ ಸೇರಿದ ಆಗ್ರಟಾಸ್ ಕಂಪನಿ ಬ್ಯಾಟರಿ ಸೆಲ್​​ಗಳನ್ನು ತಯಾರಿಸುತ್ತದೆ. ಭಾರತ ಹಾಗೂ ಬ್ರಿಟನ್ ದೇಶದಲ್ಲಿ ಫ್ಯಾಕ್ಟರಿಗಳನ್ನು ಹೊಂದಿದೆ. ಬ್ರಿಟನ್​​ನಲ್ಲಿ ನಿರ್ಮಿಸಲಾಗುವ ಅದರ ಬ್ಯಾಟರಿ ಫ್ಯಾಕ್ಟರಿಯು ಬಹಳ ದೊಡ್ಡದಿರಲಿದೆ. ಆ ದೇಶದ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ಎನಿಸಲಿದೆ. ಬ್ರಿಟನ್​​ನ ವಾಹನ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಶೇ. 50 ಬ್ಯಾಟರಿ ಶಕ್ತಿಯನ್ನು ಈ ಘಟಕವು ಪೂರೈಸುವ ಸಾಮರ್ಥ್ಯ ಹೊಂದಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Thu, 17 April 25

ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು
ಡಿಸ್ನಿ ಲ್ಯಾಂಡ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿದ ರೈತ ಮಹಿಳೆಯರು
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು