AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಮೋಟಾರ್ಸ್ ದಾಖಲೆ; ಒಂದೇ ವರ್ಷದಲ್ಲಿ 250 ಪೇಟೆಂಟ್, 148 ಡಿಸೈನ್ ಅಪ್ಲಿಕೇಶನ್ಸ್ ದಾಖಲು

Tata Motors files 250 patents and 148 design applications: ಟಾಟಾ ಮೋಟಾರ್ಸ್ ಸಂಸ್ಥೆ 2024-25ರಲ್ಲಿ 250 ಪೇಟೆಂಟ್ ಮತ್ತು 148 ಡಿಸೈನ್ ಅಪ್ಲಿಕೇಶನ್ಸ್ ದಾಖಲಿಸಿದೆ. ಯಾವುದೇ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪೇಟೆಂಟ್ ಮತ್ತು ಡಿಸೈನ್ ಅಪ್ಲಿಕೇಶನ್ಸ್ ಸಲ್ಲಿಕೆ ಆಗಿರುವುದು. ಹೈಡ್ರೋಜನ್ ಶಕ್ತ ವಾಹನ, ಫೂಯಲ್ ಸೆಲ್, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್ ಇತ್ಯಾದಿ ತಂತ್ರಜ್ಞಾನದಲ್ಲಿ ಟಾಟಾ ಮೋಟಾರ್ಸ್ ಪೇಟೆಂಟ್ ಮತ್ತು ಡಿಸೈನ್ ಸಲ್ಲಿಸಿದೆ.

ಟಾಟಾ ಮೋಟಾರ್ಸ್ ದಾಖಲೆ; ಒಂದೇ ವರ್ಷದಲ್ಲಿ 250 ಪೇಟೆಂಟ್, 148 ಡಿಸೈನ್ ಅಪ್ಲಿಕೇಶನ್ಸ್ ದಾಖಲು
ಟಾಟಾ ಮೋಟಾರ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 17, 2025 | 12:12 PM

ನವದೆಹಲಿ, ಏಪ್ರಿಲ್ 17: ಭಾರತದ ಅತಿದೊಡ್ಡ ಆಟೊಮೊಬೈಲ್ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ಮೈಲಿಗಲ್ಲು ಮುಟ್ಟಿದೆ. 2024-25ರ ಹಣಕಾಸು ವರ್ಷದಲ್ಲಿ ಈ ಸಂಸ್ಥೆ ಬರೋಬ್ಬರಿ 250 ಪೇಟೆಂಟ್ ಮತ್ತು 148 ಡಿಸೈನ್ ಅಪ್ಲಿಕೇಶನ್ಸ್ (Design Application) ದಾಖಲಿಸಿದೆ. ಟಾಟಾ ಮೋಟಾರ್ಸ್ ಯಾವುದೇ ವರ್ಷದಲ್ಲೂ ಇಷ್ಟೊಂದು ಪೇಟೆಂಟ್ ಮತ್ತು ಡಿಸೈನ್ ಅಪ್ಲಿಕೇಶನ್ಸ್ ಸಲ್ಲಿಸಿರಲಿಲ್ಲ. ಆ ಮಟ್ಟಿಗೆ ಸಂಸ್ಥೆಗೆ ಇದು ಮಹತ್ವದ ಮೈಲಿಗಲ್ಲಾಗಿದೆ. ಕನೆಕ್ಟಿವಿಟಿ, ವಿದ್ಯುದೀಕರಣ, ಸುಸ್ಥಿರತೆ, ಮತ್ತು ಸುರಕ್ಷತೆ (ಸಿಇಎಸ್ಎಸ್) ಹಾಗೂ ಹೈಡ್ರೋಜನ್ ಆಧಾರಿತ ವಾಹನಗಳು ಮತ್ತು ಇಂಧನ ಕೋಶಗಳಂತಹ (Fuel Cell) ಹೊಸ ತಂತ್ರಜ್ಞಾನಗಳ ಮೇಲೆ ಈ ಪೇಟೆಂಟ್ ಮತ್ತು ಡಿಸೈನ್​​ಗಳನ್ನು ಹೊಂದಿರುವುದು ವಿಶೇಷವಾಗಿದೆ.

ಜೊತೆಗೆ ಈ ಸಾಲಿನಲ್ಲಿ ಬ್ಯಾಟರಿ, ಪವರ್‌ ಟ್ರೇನ್, ಬಾಡಿ ಆಂಡ್ ಟ್ರಿಮ್, ಸಸ್ಪೆನ್ಷನ್, ಬ್ರೇಕ್‌, ಎಚ್​​ವಿಎಸಿ, ಮತ್ತು ಎಮಿಷನ್ ಕಂಟ್ರೋಲ್ ಮುಂತಾದ ಹಲವಾರು ವಾಹನ ವ್ಯವಸ್ಥೆಗಳು ಇವೆ. ಕಂಪನಿಯು 81 ಕಾಪಿರೈಟ್ ಅರ್ಜಿಗಳನ್ನು ದಾಖಲಿಸಿದೆ ಮತ್ತು ಈ ವರ್ಷ 68 ಪೇಟೆಂಟ್‌ಗಳನ್ನು ಪಡೆದಿದೆ. ಈ ಮೂಲಕ ಸಂಸ್ಥೆಯು ಒಟ್ಟು 918 ಪೇಟೆಂಟ್‌ಗಳನ್ನು ಹೊಂದಿದೆ.

ಸಾರಿಗೆ ಕ್ಷೇತ್ರದ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಟಾಟಾ ಮೋಟಾರ್ಸ್ ತನ್ನ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸುಸ್ಥಿರ ಉತ್ಪನ್ನಗಳ ಮೂಲಕ ಆಟೋಮೊಬೈಲ್ ಕ್ಷೇತ್ರದ ವಿನೂತನ ಆವಿಷ್ಕಾರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡುತ್ತಿವೆ. ಆರ್ಥಿಕ ವರ್ಷ 25 ರಲ್ಲಿ ದಾಖಲಾದ ದಾಖಲೆಯ ಸಂಖ್ಯೆಯ ಪೇಟೆಂಟ್​​ಗಳು ಮತ್ತು ಡಿಸೈನ್ ದಾಖಲಾತಿಗಳು ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಕಂಪನಿಯ ಬದ್ಧತೆಯನ್ನು ತೋರಿಸುತ್ತವೆ.

ಇದನ್ನೂ ಓದಿ
Image
ಟಾಟಾ ಪಂಚ್ ಅಥವಾ ಹುಂಡೈ ಎಕ್ಸ್​ಟೆರ್: CNG ನಲ್ಲಿ ಯಾವ ಕಾರು ಉತ್ತಮ?
Image
ಟೆಸ್ಲಾ ಬಂದರೆ ಇವಿ ಮಾರುಕಟ್ಟೆ ಹಿಗ್ಗುತ್ತೆ: ಬಿಎಂಡಬ್ಲ್ಯು
Image
ಏಪ್ರಿಲ್‌ನಲ್ಲಿ ಅಟೋ ಮಾರುಕಟ್ಟೆಗೆ ಬರಲಿದೆ ಸಾಲು ಸಾಲು ವಾಹನಗಳು
Image
ಫ್ರಾಂಕ್ಸ್ ಅಥವಾ ಪಂಚ್?: CNG ನಲ್ಲಿ ಯಾವ ಕಾರು ಹೆಚ್ಚು ಮೈಲೇಜ್ ನೀಡುತ್ತದೆ?

ಇದನ್ನೂ ಓದಿ: ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?

ಈ ಪ್ರಯತ್ನಗಳು ಸಾರಿಗೆ ಕ್ಷೇತ್ರದ ಭವಿಷ್ಯದ ಸವಾಲುಗಳನ್ನು ಎದುರಿಸುವುದರ ಜೊತೆಗೆ ಸ್ಮಾರ್ಟ್, ಹಸಿರು, ಮತ್ತು ಕನೆಕ್ಟೆಡ್ ಜಗತ್ತನ್ನು ರೂಪಿಸುವ ಟಾಟಾ ಮೋಟಾರ್ಸ್​​ನ ದೃಷ್ಟಿಗೆ ಹೊಂದಿಕೆಯಾಗುತ್ತವೆ. ಈ ಸಾಧನೆಗಳು ಟಾಟಾ ಮೋಟಾರ್ಸ್‌ ಅನ್ನು ಜಾಗತಿಕ ಆಟೋಮೊಬೈಲ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರಿಸಿವೆ. 2024-25 ರಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಉತ್ಕೃಷ್ಟತೆಗಾಗಿ ಟಾಟಾ ಮೋಟಾರ್ಸ್ ಭಾರತ ಮತ್ತು ವಿದೇಶಗಳಲ್ಲಿ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ.

ಈ ಸಾಧನೆಯ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್​​ನ ಚೀಫ್ ಟೆಕ್ನಾಲಜಿ ಆಫೀಸರ್ ಮತ್ತು ಅಧ್ಯಕ್ಷರಾದ ರಾಜೇಂದ್ರ ಪೆಟ್ಕರ್ ಅವರು, “ನಮ್ಮ ವಿನೂತನ ಸಂಶೋಧನಾ ತಂತ್ರವು ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ಒದಗಿಸುವುದರ ಜೊತೆಗೆ ಉದ್ಯಮದ ಬದಲಾವಣೆ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುವ ಕಡೆಗೆ ಗಮನ ಹರಿಸುತ್ತದೆ. ಈ ಮೈಲಿಗಲ್ಲು ಸಾಧೆಯು ಆಟೋಮೊಬೈಲ್ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಮ್ಮ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ಹಸಿರು ವಾಹನ, ಸುರಕ್ಷಿತ, ಮತ್ತು ದಕ್ಷ ವಾಹನಗಳನ್ನು ತಯಾರಿಸುವ ನಮ್ಮ ದೀರ್ಘಕಾಲೀನ ದೃಷ್ಟಿಗೆ ಬಲ ತುಂಬಿದೆ” ಎಂದಿದ್ದಾರೆ.

ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ

‘ಅತ್ಯಾಧುನಿಕ ಉತ್ಪನ್ನಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ಮತ್ತು ಸಮುದಾಯಗಳ ಬದಲಾಗುತ್ತಿರುವ ಆದ್ಯತೆಗಳಿಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ಸಾರಿಗೆ ಕ್ಷೇತ್ರದ ಭವಿಷ್ಯವನ್ನು ರೂಪಿಸಲು ನಮ್ಮ ಪ್ರಯತ್ನ ನಿರಂತರವಾಗಿರುತ್ತವೆ’ ಎಂದವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Thu, 17 April 25