ಬೆಂಗಳೂರು, ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ಕಾರಿಡಾರ್: ತೆಲಂಗಾಣ ಸಚಿವ ಕೆಟಿಆರ್ ಪ್ರಸ್ತಾಪ

KT Rama Rao Speaks: ಹೈದರಾಬಾದ್ ಮತ್ತು ಬೆಂಗಳೂರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿವೆ. ನನಗೆ ಹೈದರಾಬಾದ್​ನಷ್ಟೇ ಬೆಂಗಳೂರೂ ಇಷ್ಟ. ನಾವು ಸಹಭಾಗಿತ್ವ ಸಾಧಿಸಿ ಒಗ್ಗೂಡಿದರೆ ಒಟ್ಟಿಗೆ ಬೆಳೆದು ದೇಶದ ಉನ್ನತಿಗೆ ಕಾರಣವಾಗಬಹುದು ಎಂದು ಕೆಟಿ ರಾಮರಾವ್ ಹೇಳಿದ್ದಾರೆ. ಬಯೋಲಜಿ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ಮುಂದಿರುವ ಈ ಎರಡು ನಗರಗಳ ಮಧ್ಯೆ ಜೀವ ವಿಜ್ಞಾನ ತಂತ್ರಜ್ಞಾನದ ಕಾರಿಡಾರ್ ಆದರೆ ಉತ್ತಮ ಎಂದೂ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರು, ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ಕಾರಿಡಾರ್: ತೆಲಂಗಾಣ ಸಚಿವ ಕೆಟಿಆರ್ ಪ್ರಸ್ತಾಪ
ಕೆಟಿ ರಾಮರಾವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 6:53 PM

ಹೈದರಾಬಾದ್, ಸೆಪ್ಟೆಂಬರ್ 14: ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಮಧ್ಯೆ ಲೈಫ್ ಸೈನ್ಸಸ್ ತಂತ್ರಜ್ಞಾನ ಕಾರಿಡಾರ್ (Life Sciences Technology Corridor) ನಿರ್ಮಿಸುವ ಪ್ರಸ್ತಾಪವನ್ನು ತೆಲಂಗಾಣ ಸಚಿವ ಕೆಟಿ ರಾಮರಾವ್ ಮುಂದಿಟ್ಟಿದ್ದಾರೆ. ಇಲ್ಲಿಯ ಜಿನೋಮ್ ವ್ಯಾಲಿಯಲ್ಲಿ ನಡೆದ ಸಿನ್​ಜೀನ್ ಸೈಂಟಿಫಿಕ್ ಸಲ್ಯೂಶನ್ಸ್ ರಿಸರ್ಚ್ ಲ್ಯಾಬ್​ನ (Syngene Scientific Solutions Research Lab) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ತೆಲಂಗಾಣ ಉದ್ಯಮ ಸಚಿವ ಕೆಟಿಆರ್, ಜೀವಶಾಸ್ತ್ರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ತಂತ್ರಜ್ಞಾನದ ಕಾರಿಡಾರ್ ಸ್ಥಾಪನೆಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿವೆ. ನನಗೆ ಹೈದರಾಬಾದ್​ನಷ್ಟೇ ಬೆಂಗಳೂರೂ ಇಷ್ಟ. ನಾವು ಸಹಭಾಗಿತ್ವ ಸಾಧಿಸಿ ಒಗ್ಗೂಡಿದರೆ ಒಟ್ಟಿಗೆ ಬೆಳೆದು ದೇಶದ ಉನ್ನತಿಗೆ ಕಾರಣವಾಗಬಹುದು ಎಂದು ಕೆಟಿ ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಕಳೆದ ಎರಡು ವರ್ಷದಲ್ಲೇ ತೆಲಂಗಾಣದಲ್ಲಿ ಲೈಫ್ ಸೈನ್ಸಸ್ ವಲಯ ಶೇ. 23ರಷ್ಟು ಬೆಳೆದಿದದೆ. ಈ ಅವಧಿಯಲ್ಲಿ ಶೇ. 14ರಷ್ಟಿರುವ ರಾಷ್ಟ್ರೀಯ ಸರಾಸರಿಗಿಂತ ತೆಲಂಗಾಣ ಉತ್ತಮ ಬೆಳವಣಿಗೆ ಕಂಡಿದೆ. ತೆಲಂಗಾಣ ರಾಜ್ಯ ನಿರ್ಮಾಣವಾದ ಬಳಿಕ ಐದು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಈ ಇಕೋಸಿಸ್ಟಂ ಅನ್ನು ಇನ್ನಷ್ಟು ಹೆಚ್ಚಿಸಿ, 2030ರಷ್ಟರಲ್ಲಿ ಹೈದರಾಬಾದ್ 250 ಬಿಲಿಯನ್ ಡಾಲರ್ ಮೊತ್ತದ ಉದ್ಯಮ ಹೊಂದುವಂತೆ ಮಾಡುವ ಗುರಿ ನಮ್ಮದಾಗಿದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗ ಕೂಡ ಆಗಿರುವ ಕೆಟಿಆರ್ ತಿಳಿಸಿದ್ದಾರೆ.

ಬೆಂಗಳೂರಿನ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರನ್ನು ಇದೇ ವೇಳೆ ಕೆಟಿಆರ್ ಶ್ಲಾಘಿಸಿದ್ದಾರೆ. ‘ಅವರನ್ನು ಭೇಟಿಯಾಗಿ ಮಾತನಾಡುವಾಗೆಲ್ಲಾ ನನಗೆ ಉತ್ಸಾಹ ಮೂಡುತ್ತದೆ. ಯುವಕ ಮತ್ತು ಯುವತಿಯರಿಗೆ ಅವರು ಮಾದರಿಯಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

ಇನ್ನು ಚುನಾವಣಾ ರಾಜಕೀಯದ ಬಗ್ಗೆ ಮಾತನಾಡಿದ ಕೆಟಿ ರಾಮರಾವ್, ಒಂದು ಚುನಾವಣೆಗೆ ಹಿಂದಿನ 6 ತಿಂಗಳು ರಾಜಕೀಯ ನಡೆಯಬಹುದು. ಅದರೆ, ಉಳಿದ ನಾಲ್ಕೂವರೆ ವರ್ಷ ಉತ್ತಮ ಆರ್ಥಿಕ ನಿರ್ವಹಣೆಯೇ ಉತ್ತಮ ರಾಜಕಾರಣ ಆಗಿರುತ್ತದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್