Tesla in India: ಭಾರತದಲ್ಲಿ ಕಾರು ತಯಾರಿಸಲು ಟೆಸ್ಲಾ ಉತ್ಸಾಹ; 20 ಲಕ್ಷ ರೂಗೆ ಬರಲಿದೆ ಗುಣಮಟ್ಟದ ಎಲೆಕ್ಟ್ರಿಕ್ ಗಾಡಿ

Elon Musk's Company: ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕೆ ಘಟಕ ಸ್ಥಾಪಿಸಲು ಸಿದ್ಧವಾಗಿರುವ ಟೆಸ್ಲಾ ಸಂಸ್ಥೆ ಶೀಘ್ರದಲ್ಲೇ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

Tesla in India: ಭಾರತದಲ್ಲಿ ಕಾರು ತಯಾರಿಸಲು ಟೆಸ್ಲಾ ಉತ್ಸಾಹ; 20 ಲಕ್ಷ ರೂಗೆ ಬರಲಿದೆ ಗುಣಮಟ್ಟದ ಎಲೆಕ್ಟ್ರಿಕ್ ಗಾಡಿ
ಟೆಸ್ಲಾ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 7:03 PM

ನವದೆಹಲಿ, ಜುಲೈ 25: ವಿಶ್ವ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರಗಣ್ಯ ಎನಿಸಿರುವ ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ (Tesla) ಇದೀಗ ಭಾರತದ ಮಾರುಕಟ್ಟೆ ಆಕ್ರಮಿಸಲು ಅಣಿಯಾಗುತ್ತಿದೆ. ವರದಿಗಳ ಪ್ರಕಾರ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರೊಂದನ್ನು ತಯಾರಿಸಲು ಟೆಸ್ಲಾ ನಿರ್ಧರಿಸಿದೆ. ಅದಕ್ಕಿಂತ ಹೆಚ್ಚಾಗಿ, ಭಾರತದಲ್ಲೇ ಘಟಕ (Car Manufacturing Unit) ಸ್ಥಾಪಿಸಿ ಅಲ್ಲಿಯೇ ಕಾರಿನ ಉತ್ಪಾದನೆ ಮಾಡುವುದು ಟೆಸ್ಲಾ ಉದ್ದೇಶ ಇದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ ಟೆಸ್ಲಾದ ನಿಯೋಗವೊಂದು ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆ ಇದೆ.

ವರದಿಯ ಪ್ರಕಾರ ಟೆಸ್ಲಾ ಭಾರತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾರಿನ ಬೆಲೆ ಅಂದಾಜು 20 ಲಕ್ಷ ರೂ ಇರುತ್ತದೆ. ಟೆಸ್ಲಾದ ಉದ್ದೇಶಿತ ಘಟಕದಲ್ಲಿ ತಯಾರಾಗುವ ಕಾರುಗಳು ಭಾರತದಲ್ಲಿ ಈಗ ಟ್ರೆಂಡಿಂಗ್​ನಲ್ಲಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಮಾತ್ರವಲ್ಲ, ವಿದೇಶಗಳಿಗೆ ರಫ್ತು ಮಾಡುವ ಉದ್ದೇಶ ಇದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳು ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಇದರ ಅತ್ಯಂತ ಕಡಿಮೆ ಬೆಲೆಯ ಕಾರೆಂದರೆ ಅದು ಮಾಡೆಲ್ 3 ರೇರ್ ವೀಲ್ ಡ್ರೈವ್. ಇದರ ಬೆಲೆ ಸುಮಾರು 35ರಿಂದ 40 ಲಕ್ಷ ರೂನಿಂದ ಆರಂಭವಾಗುತ್ತದೆ. ಭಾರತದಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಗೆ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಿಸುವ ಗುರಿ ಟೆಸ್ಲಾದ್ದು.

ಇದನ್ನೂ ಓದಿIndian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ

ಟೆಸ್ಲಾಗೆ ಭಾರತದಲ್ಲಿ ಉತ್ಪಾದನಾ ಘಟಕ ನಿರ್ಮಿಸುವುದು ಅನಿವಾರ್ಯವಾ?

ಕಾರನ್ನು ಭಾರತಕ್ಕೆ ರಫ್ತು ಮಾಡಿ ಆ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲು ಟೆಸ್ಲಾ ಈ ಹಿಂದೆ ಬಹಳ ಪ್ರಯತ್ನಿಸಿದ್ದಿದೆ. ಆದರೆ, ಕಾರುಗಳ ಆಮದಿಗೆ ಸರ್ಕಾರ ಸಾಕಷ್ಟು ಸುಂಕ ವಿಧಿಸುತ್ತಿರುವುದರಿಂದ ಟೆಸ್ಲಾಗೆ ನೆಲೆ ಕಾಣಲು ಸಾಧ್ಯವಾಗಿಲ್ಲ. ಆಮದು ತೆರಿಗೆ ಕಡಿಮೆಗೊಳಿಸಬೇಕೆಂಬ ಟೆಸ್ಲಾ ಬೇಡಿಕೆಗೆ ಸರ್ಕಾರ ಬಗ್ಗಿಲ್ಲ. ಸ್ಥಳೀಯವಾಗಿ ಕಾರು ತಯಾರಿಕೆ ಮಾಡಬೇಕೆನ್ನುವುದು ಸರಕಾರದ ಷರತ್ತು. ಕೊನೆಗೂ ಸರ್ಕಾರದ ಮಾತಿಗೆ ಟೆಸ್ಲಾ ತಲೆಬಾಗುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿYoutube Income: ಫೇಸ್ಬುಕ್, ಇನ್​ಸ್ಟಾ ರೀಲ್ಸ್, ಯೂಟ್ಯೂಬ್​ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು? ಹೇಗೆ ಸಲ್ಲಿಸುವುದು?

20 ಲಕ್ಷ ರೂ ಬೆಲೆಯ ಟೆಸ್ಲಾ ಕಾರು ನಿಜಕ್ಕೂ ಮಾರುಕಟ್ಟೆಗೆ ಬಂದರೆ ಗೇಮ್ ಚೇಂಜರ್ ಎನಿಸಬಹುದು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವಿಗಳು ಇಲ್ಲ. ಅದರಲ್ಲೂ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಕಡಿಮೆ ಇದೆ. ಈ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಕಡಿಮೆ ಬೆಲೆಯ ಟೆಸ್ಲಾ ಕಾರು ಮಾರುಕಟ್ಟೆಗೆ ಬಂದರೆ ಹಿಟ್ ಆಗುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!