ಟೆಸ್ಲಾಗೆ ಹೊಸ ಸಿಇಒಗೆ ಹುಡುಕಾಟ; ಹಾಲಿ ಸಿಇಒ ಇಲಾನ್ ಮಸ್ಕ್ ಹೊರಹೋಗ್ತಾರಾ?

Tesla board searching for new CEO: ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿಯ ಆಡಳಿತ ಮಂಡಳಿಯು ಹೊಸ ಸಿಇಒಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇಲಾನ್ ಮಸ್ಕ್ ಹಾಲಿ ಸಿಇಒ ಆಗಿ ಇದ್ದರೂ ಹೊಸ ಸಿಇಒಗೆ ಹುಡುಕಲಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಅಮೆರಿಕದ ಸರ್ಕಾರದ ಆಡಳಿತದೊಂದಿಗೆ ಇಲಾನ್ ಮಸ್ಕ್ ಜೋಡಿಸಿಕೊಂಡಿರುವುದು, ಬೇರೆ ಬೇರೆ ಕಂಪನಿಗಳಲ್ಲಿ ಗಮನ ಹಂಚಿಹೋಗಿರುವುದು ಹೊಸ ಸಿಇಒ ಶೋಧಕ್ಕೆ ಕಾರಣ ಎನ್ನಲಾಗಿದೆ.

ಟೆಸ್ಲಾಗೆ ಹೊಸ ಸಿಇಒಗೆ ಹುಡುಕಾಟ; ಹಾಲಿ ಸಿಇಒ ಇಲಾನ್ ಮಸ್ಕ್ ಹೊರಹೋಗ್ತಾರಾ?
ಟೆಸ್ಲಾ

Updated on: May 01, 2025 | 12:45 PM

ಟೆಕ್ಸಾಸ್, ಅಮೆರಿಕ: ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾದಲ್ಲಿ ಸಿಇಒ ಸ್ಥಾನಕ್ಕೆ (Tesla CEO) ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ. ಹಾಲಿ ಸಿಇಒ ಆಗಿ ಇಲಾನ್ ಮಸ್ಕ್ (Elon Musk) ಇದ್ದಾಗ್ಯೂ ಹೊಸ ಸಿಇಒಗೆ ಶೋಧ ನಡೆಯುತ್ತಿರುವುದು ಅಚ್ಚರಿಯ ಹುಬ್ಬೇರಿಸಿದೆ. ಇಲಾನ್ ಮಸ್ಕ್ ಎಲ್ಲಿಯೂ ಕೂಡ ಟೆಸ್ಲಾದಿಂದ ಹೊರಹೋಗುತ್ತಿರುವುದಾಗಿ ಹೇಳಿಲ್ಲ ಎನ್ನುವುದು ಗಮನಾರ್ಹ. ಮಾರ್ಚ್ ತಿಂಗಳೊಳಗೆ ಹೊಸ ಚೀಫ್ ಎಕ್ಸಿಕ್ಯೂಟಿವ್ ಅನ್ನು ತಂದು ಕೂರಿಸುವ ಇರಾದೆಯಲ್ಲಿ ಟೆಸ್ಲಾ ಮಂಡಳಿ ಇದೆ ಎನ್ನುವ ಸುದ್ದಿ ಕೇಳಿಬಂದಿದೆ.

ಇಲಾನ್ ಮಸ್ಕ್ ಅವರನ್ನು ಬದಲಿಸಲು ಟೆಸ್ಲಾ ಮುಂದಾಗಿರುವುದು ಯಾಕೆ?

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಈಗ ಕಠಿಣ ಸ್ಪರ್ಧೆ ನಡೆಯುತ್ತಿದೆ. ಹಲವು ಪ್ರಮುಖ ಕಂಪನಿಗಳು ಇವಿ ಸೆಕ್ಟರ್​​​ಗೆ ಬಂದಿವೆ. ಚೀನಾದ ಕಂಪನಿಗಳು ಸಖತ್ ವೇಗವಾಗಿ ಸಾಗುತ್ತಿವೆ. ಸೃಜನಶೀಲತೆಗೆ ಹೆಸರಾದ ಇಲಾನ್ ಮಸ್ಕ್ ಅವರು ಈ ಸಂದರ್ಭದಲ್ಲಿ ಟೆಸ್ಲಾ ಕಂಪನಿಯತ್ತ ಪೂರ್ಣ ಗಮನ ಕೊಡುತ್ತಿಲ್ಲ ಎನ್ನುವ ಆಕ್ಷೇಪ ಇದೆ.

ಇಲಾನ್ ಮಸ್ಕ್ ಅವರು ಅಮೆರಿಕ ಸರ್ಕಾರದಲ್ಲಿ ಡೋಜೆ (DOGE- Department of Government Efficiency) ಇಲಾಖೆಯನ್ನು ನಿಭಾಯಿಸುವ ಹೊಣೆ ಪಡೆದಿದ್ದರು. ಈಗ ಆ ಹೊಣೆಯಿಂದ ಅವರನ್ನು ಬಹುತೇಕ ಮುಕ್ತಗೊಳಿಸಲಾಗಿದೆಯಾದರೂ ಅವರಿನ್ನೂ ಸರ್ಕಾರಕ್ಕೆ ಅಂಟಿಕೊಂಡಂತೆ ಇದ್ದಾರೆ. ಹೀಗಾಗಿ, ಟೆಸ್ಲಾದ ದೈನಂದಿನ ಆಗುಹೋಗುಗಳತ್ತ ಅವರು ಗಮನ ಕೊಡುಲು ಸಾಧ್ಯವಾಗುತ್ತಿಲ್ಲ. ಇದು ಕಂಪನಿಯ ಹೂಡಿಕೆದಾರರ ವಿಶ್ವಾಸ ತಗ್ಗಿಸಿರಬಹುದು. ಪರಿಣಾಮವಾಗಿ, ಟೆಸ್ಲಾ ಷೇರುಬೆಲೆ ಗಣನೀಯವಾಗಿ ತಗ್ಗಿದೆ.

ಇದನ್ನೂ ಓದಿ
ಮೈನಸ್​​ಗೆ ಕುಸಿದ ಅಮೆರಿಕದ ಆರ್ಥಿಕತೆ; ಏನು ಕಾರಣ?
ಪಾಕ್ ಸೇನೆ ಮಾಡದ ಕೆಲಸ ಇಲ್ಲ, ಯುದ್ಧವಂತೂ ಗೆಲ್ಲಲ್ಲ
1913ರಲ್ಲಿ 1 ರುಪಾಯಿಗೆ 11.11 ಡಾಲರ್? ಇಲ್ಲಿದೆ ಕುಸಿತದ ಕಥೆ
ಇಂಡಸ್​​ಇಂಡ್ ಬ್ಯಾಂಕ್: ಹಂಗಾಮಿ ನಾಯಕತ್ವಕ್ಕೆ ಆರ್​​ಬಿಐ ಒಪ್ಪಿಗೆ

ಇದನ್ನೂ ಓದಿ: 36 ತಿಂಗಳಲ್ಲಿ ಮೊದಲ ಬಾರಿಗೆ ಅಮೆರಿಕದ ಜಿಡಿಪಿ ಕುಸಿತ; ಇದು ಜಾಗತಿಕ ರಿಸಿಶನ್​ನ ಮುನ್ಸೂಚನೆಯಾ?

ಟೆಸ್ಲಾ ಷೇರುಬೆಲೆ ಹೀಗೆ ಕುಸಿಯುತ್ತಾ ಹೋದರೆ, ಕಂಪನಿಯ ಭವಿಷ್ಯ ಮಸುಕಾಗಬಹುದು ಎನ್ನುವ ಭಯ ಟೆಸ್ಲಾ ಮಂಡಳಿಯದ್ದು. ಹೀಗಾಗಿ, ಶೀಘ್ರದಲ್ಲೇ ಬೇರೆ ಸಿಇಒ ಅವರನ್ನು ತಂದು ಕೂರಿಸಲು ಹೊರಟಿದೆ. ಈ ಬಗ್ಗೆ ಸಿಎನ್​​​ಎನ್​, ವಾಲ್ ಸ್ಟ್ರೀಟ್ ಜರ್ನಲ್ ಮೊದಲಾದ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ, ಟೆಸ್ಲಾ ಮಂಡಳಿಯಾಗಲೀ, ಇಲಾನ್ ಮಸ್ಕ್ ಅವರಾಗಲೀ ಈ ವಿಚಾರದ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯನ್ನೂ ನೀಡಿಲ್ಲ.

ಟೆಸ್ಲಾ ಸಿಇಒ ಪಟ್ಟ ಹೋದರೆ ಇಲಾನ್ ಮಸ್ಕ್ ಕಥೆ?

ಇಲಾನ್ ಮಸ್ಕ್ ಅವರು ಟೆಸ್ಲಾ ಮಾತ್ರವಲ್ಲ, ಇನ್ನೂ ಹಲವು ಕಂಪನಿಗಳನ್ನು ನಡೆಸುತ್ತಿದ್ದಾರೆ. ಎಕ್ಸ್ (ಟ್ವಿಟ್ಟರ್), ಟೆಸ್ಲಾ, ಸ್ಪೇಸ್ ಎಕ್ಸ್, ಎಕ್ಸ್​ ಎಐ ಕಂಪನಿಗಳನ್ನು ಅವರು ಮುನ್ನಡೆಸುತ್ತಿದ್ದಾರೆ. ಟೆಸ್ಲಾ ಮಂಡಳಿಯನ್ನು ನಿರಾಸೆಗೊಳಿಸಲು ಇದೂ ಒಂದು ಕಾರಣ. ಒಂದು ಕಂಪನಿ ಬದಲು ಹಲವು ಕಂಪನಿಗಳಿಗೆ ಗಮನ ಹಂಚಿಕೆ ಆಗುತ್ತಿದೆ ಎಂಬುದು ಆರೋಪ.

ಇದನ್ನೂ ಓದಿ: ನೂರು ವರ್ಷದ ಹಿಂದೆ 1 ರುಪಾಯಿಗೆ 10 ಡಾಲರ್; ನಂತರ ಭಾರತ ಎಡವಿದ್ದೆಲ್ಲಿ, ಅಮೆರಿಕ ಗೆದ್ದಿದ್ದೆಲ್ಲಿ?

ಇಲಾನ್ ಮಸ್ಕ್ ಅವರು ತಮಗೆ ಅಗತ್ಯವೇ ಇಲ್ಲದ ಟ್ವಿಟ್ಟರ್ ಎನ್ನುವ ಸೋಷಿಯಲ್ ಮೀಡಿಯಾ ಕಂಪನಿಯ ಸಹವಾಸಕ್ಕೆ ಕೈಹಾಕಿದ್ದರು. ಆ ಕಂಪನಿಯ ಖರೀದಿ ಮಾಡಿದ್ದು ತಮ್ಮ ತಪ್ಪು ನಡೆ ಎಂಬುದನ್ನು ಮಸ್ಕ್ ಈ ಹಿಂದೆ ಒಪ್ಪಿಕೊಂಡಿದ್ದು ಹೌದು. ಅದು ಬಿಟ್ಟರೆ ಮಸ್ಕ್ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬ್ಯುಸಿನೆಸ್ ಬೆಳೆಸುತ್ತಿರುವುದು ಹೌದು. ಆದರೆ, ಟ್ರಂಪ್ ಸರ್ಕಾರದ ಆಡಳಿತದ ಭಾಗವಾಗಿ ಅವರು ಜೋಡಿಸಿಕೊಂಡಿದ್ದು ಟೆಸ್ಲಾ ಆಡಳಿತ ಮಂಡಳಿಗೆ ನಿರಾಸೆ ತಂದಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Thu, 1 May 25