AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರು ವರ್ಷದ ಹಿಂದೆ 1 ರುಪಾಯಿಗೆ 10 ಡಾಲರ್; ನಂತರ ಭಾರತ ಎಡವಿದ್ದೆಲ್ಲಿ, ಅಮೆರಿಕ ಗೆದ್ದಿದ್ದೆಲ್ಲಿ?

Historical data of USD vs INR: ಡಾಲರ್ ಎದುರು ಮೌಲ್ಯ ಉಳಿಸಿಕೊಳ್ಳಲು ರುಪಾಯಿ ಕರೆನ್ಸಿ ನಿತ್ಯ ಸರ್ಕಸ್ ಮಾಡಬೇಕಾದ ಸ್ಥಿತಿ ಇದೆ. 1913ರಲ್ಲಿ ಒಂದು ರುಪಾಯಿಗೆ 11.11 ಡಾಲರ್ ಇತ್ತು. 1925ರಲ್ಲಿ 10 ಡಾಲರ್ ಇತ್ತು. ಅದಾದ ಬಳಿಕ ಡಾಲರ್ ಎದುರು ರುಪಾಯಿ ಕರೆನ್ಸಿ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಡಾಲರ್ ಏರಲು ಮತ್ತು ರುಪಾಯಿ ಕುಸಿಯಲು ನಾನಾ ಕಾರಣಗಳಿವೆ. ಅವುಗಳತ್ತ ಒಂದು ನೋಟ...

ನೂರು ವರ್ಷದ ಹಿಂದೆ 1 ರುಪಾಯಿಗೆ 10 ಡಾಲರ್; ನಂತರ ಭಾರತ ಎಡವಿದ್ದೆಲ್ಲಿ, ಅಮೆರಿಕ ಗೆದ್ದಿದ್ದೆಲ್ಲಿ?
ಡಾಲರ್ vs ರುಪಾಯಿ ಮೌಲ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2025 | 5:43 PM

Share

ಡಾಲರ್ ಎದುರು ರುಪಾಯಿ ಮೌಲ್ಯ (Dollar vs Rupee) ಇತ್ತೀಚೆಗೆ ದಾಖಲೆಯ 87.50 ಮಟ್ಟ ಮುಟ್ಟಿಹೋಗಿತ್ತು. ಈಗ ಅದು 85 ಮಟ್ಟಕ್ಕಿಂತ ಕೆಳಗೆಗೆ ಬಂದಿದೆ. ಅಮೆರಿಕದ ಒಂದು ಡಾಲರ್​​ನ ಬೆಲೆ ಬರೋಬ್ಬರಿ 85 ರೂ ಇದೆ. ಅದೇನೇ ಇರಲಿ, ಶತಮಾನದ ಹಿಂದೆ ಭಾರತದ ಕರೆನ್ಸಿ ಮೌಲ್ಯ ಇಷ್ಟು ಕಡಿಮೆ ಇರಲಿಲ್ಲ. ಕುತೂಹಲ ಎಂದರೆ ಅಮೆರಿಕದ ಡಾಲರ್​​ಗಿಂತಲೂ ಭಾರತದ ರುಪಾಯಿ ಮೌಲ್ಯ ಹೆಚ್ಚಿತ್ತು. ಸರಿಯಾಗಿ ನೂರು ವರ್ಷದ ಹಿಂದೆ, ಅಂದರೆ, 1925ರಲ್ಲಿ ಒಂದು ರುಪಾಯಿಗೆ ಡಾಲರ್ ಮೌಲ್ಯ 10 ಇತ್ತು. ಅಂದರೆ, ಒಂದು ರುಪಾಯಿಯು 10 ಡಾಲರ್​​ಗೆ ಸಮ ಇತ್ತು. ನಂತರ ಕ್ರಮೇಣವಾಗಿ ಡಾಲರ್ ಮೌಲ್ಯ ಹೆಚ್ಚುತ್ತಾ ಬಂದಿತು. ಅತ್ತ ಡಾಲರ್ ಬಲಗೊಳ್ಳುತ್ತಾ ಹೋದರೆ, ರುಪಾಯಿ ಮೌಲ್ಯ ಕ್ಷೀಣಗೊಳ್ಳುತ್ತಾ ಹೋಯಿತು. ಹೀಗಾಗಿ, ಡಾಲರ್ ಎದುರು ರುಪಾಯಿ ಮೌಲ್ಯ ಎರಡು ವೇಗದಲ್ಲಿ ಇಳಿಮುಖವಾಗಿದೆ.

ಯಾವ್ಯಾವ ಕಾಲಘಟ್ಟದಲ್ಲಿ ಡಾಲರ್ ವರ್ಸಸ್ ರುಪಾಯಿ ಮೌಲ್ಯ ಎಷ್ಟಿತ್ತು ನೋಡಿ…

  • 1913: ಒಂದು ಡಾಲರ್​​​ಗೆ 9 ಪೈಸೆ
  • 1925: ಒಂದು ಡಾಲರ್​​​ಗೆ 10 ಪೈಸೆ
  • 1947: ಒಂದು ಡಾಲರ್​​ಗೆ 3.30 ರುಪಾಯಿ
  • 50ರ ದಶಕ: ಒಂದು ಡಾಲರ್​​ಗೆ 4.75 ರೂ
  • 60ರ ದಶಕ: 7.50 ರು
  • 70ರ ದಶಕ: 17.50 ರು
  • 80ರ ದಶಕ: 20.60 ರು
  • 90ರ ದಶಕ: 44.95 ರು
  • 2000ರ ದಶಕ: 47 ರು
  • 10ರ ದಶಕ: 71 ರು
  • 20ರ ದಶಕ: 84.50 ರು

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆಲ್ಟೋ ಕಾರಿನ ಬೆಲೆಗೆ ಭಾರತದಲ್ಲಿ ದೊಡ್ಡ ಕಾರು ಲಭ್ಯ; ಎರಡು ದೇಶಗಳಲ್ಲಿ ಈ ಕಾರಿನಲ್ಲಿ ವ್ಯತ್ಯಾಸಗಳೇನು?

ಸ್ವಾತಂತ್ರ್ಯಪೂರ್ವದಲ್ಲಿ ಡಾಲರ್​​ಗಿಂತ ರುಪಾಯಿ ಮೌಲ್ಯ ಹೆಚ್ಚು ಇದ್ದದ್ದು ಹೇಗೆ?

ಸ್ವಾತಂತ್ರ್ಯಪೂರ್ವದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. 19ನೇ ಶತಮಾನದವರೆಗೂ ಬ್ರಿಟನ್ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಎನಿಸಿತ್ತು. ಭಾರತದ ರುಪಾಯಿಯು ಬ್ರಿಟಿಷ್ ಪೌಂಡ್ ಕರೆನ್ಸಿಗೆ ಜೋಡಿತವಾಗಿತ್ತು. ಈ ಕಾರಣದಿಂದ ಡಾಲರ್ ಎದುರು ರುಪಾಯಿ ಬಲವಾಗಿಯೇ ಇತ್ತು.

ಇದನ್ನೂ ಓದಿ
Image
ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದ್ದೆಷ್ಟು?
Image
ಗ್ರೀನ್ ಹೈಡ್ರೋನ್ ಸರ್ಟಿಫಿಕೇಶನ್ ಸ್ಕೀಮ್​​ಗೆ ಚಾಲನೆ
Image
ಇಂಡಸ್​​ಇಂಡ್ ಬ್ಯಾಂಕ್: ಹಂಗಾಮಿ ನಾಯಕತ್ವಕ್ಕೆ ಆರ್​​ಬಿಐ ಒಪ್ಪಿಗೆ
Image
ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್

ಎರಡು ವಿಶ್ವ ಮಹಾಯುದ್ಧಗಳಾದ ಮೇಲೆ ಬ್ರಿಟನ್ ಸೇರಿದಂತೆ ಐರೋಪ್ಯ ದೇಶಗಳ ಆರ್ಥಿಕತೆ ಮಂದಗೊಂಡಿತು. ಇನ್ನೊಂದೆಡೆ ಅಮೆರಿಕ ದೊಡ್ಡ ಆರ್ಥಿಕತೆಯಾಗಿ ನಿಂತುಕೊಂಡಿತು. 20ನೇ ಶತಮಾನದಲ್ಲಿ ಅಮೆರಿಕ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿತು. ರಷ್ಯಾ ಬಿಟ್ಟರೆ ಬೇರಾವ ದೇಶವೂ ಅಮೆರಿಕದ ಸಾಟಿಗೆ ಬರಲಾಗಲಿಲ್ಲ. ಅಮೆರಿಕದ ಡಾಲರ್ ವಿಶ್ವದ ರಿಸರ್ವ್ ಕರೆನ್ಸಿಯಾಯಿತು.

ಮತ್ತೊಂದು ಸಂಗತಿ ಎಂದರೆ, ಆಗ ಬ್ರಿಟನ್ ಪೌಂಡ್ ಬೆಳ್ಳಿ ಜೊತೆ ಜೋಡಿತವಾಗಿತ್ತು. ಅಮೆರಿಕದ ಡಾಲರ್ ಕರೆನ್ಸಿಯು ಚಿನ್ನದ ಜೊತೆಗೆ ಜೋಡಿತವಾಗಿತ್ತು. ಇದು ಡಾಲರ್ ಮೌಲ್ಯ ವರ್ಧನೆಗೆ ಮತ್ತೊಂದು ಕಾರಣ ಎನಿಸಿದೆ.

ಇದನ್ನೂ ಓದಿ: ಇಂಡಸ್​​ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್​​ಬಿಐ ಅನುಮತಿ

ಭಾರತದ ರುಪಾಯಿ ಮೌಲ್ಯ ಕುಸಿಯಲು ಏನು ಕಾರಣ?

ಸ್ವಾತಂತ್ರ್ಯಾನಂತರ ಕೆಲ ವರ್ಷ ಕಾಲ ಭಾರತದ ರುಪಾಯಿ ಕರೆನ್ಸಿ ಬ್ರಿಟಿಷ್ ಪೌಂಡ್ ಜೊತೆ ಲಿಂಕ್ ಆಗಿತ್ತಾದರೂ ನಂತರ ಪೂರ್ಣವಾಗಿ ಬೇರ್ಪಟ್ಟಿತು. ಆದರೂ ಕೂಡ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ನಿಲ್ಲಲಿಲ್ಲ. ಇದಕ್ಕೆ ಕಾರಣ ಭಾರತದ ವ್ಯಾಪಾರ ಕೊರತೆ. ಸತತವಾಗಿ ರಫ್ತಿಗಿಂತ ಆಮದು ಹೆಚ್ಚಾಗಿತ್ತು. ಹಣದುಬ್ಬರವೂ ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲೇ ಇತ್ತು.

1991ರಲ್ಲಿ ಭಾರತದ ಆರ್ಥಿಕತೆಯನ್ನು ಜಾಗತೀಕರಣಕ್ಕೆ ತೆರೆಯಲಾಯಿತು. ಈ ವೇಳೆ ರುಪಾಯಿಯನ್ನು ಮತ್ತಷ್ಟು ಅಪಮೌಲ್ಯಗೊಳಿಸಬೇಕಾಯಿತು. ಇವೆಲ್ಲಾ ಕಾರಣದಿಂದ ಡಾಲರ್ ಎದುರು ರುಪಾಯಿ ಮೌಲ್ಯ ನಿರಂತರ ಇಳಿಕೆ ಕಾಣುತ್ತಾ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!