ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆ ಕೊಡುತ್ತವೆ ಈ 13 ನಗರಗಳು; ಬೆಂಗಳೂರಿಗೆ ಎಷ್ಟನೇ ಸ್ಥಾನ?

India GDP concentrated in 13 districts: ಭಾರತದ ಜಿಡಿಪಿಯಲ್ಲಿ ಶೇ. 50ರಷ್ಟು ಭಾಗವು 13 ನಗರಗಳಿಂದ ಆಗುತ್ತಿದೆ ಎಂದು ಪತ್ರಕರ್ತ ಪಂಕಜ್ ಪಚೋರಿ ಅಂಕಿ ಅಂಶ ಉಲ್ಲೇಖಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಐದು ನಗರಗಳು ಈ 13 ಜಿಲ್ಲೆಗಳ ಪಟ್ಟಿಯಲ್ಲಿವೆ. ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಮತ್ತು ದೆಹಲಿ 200 ಬಿಲಿಯನ್ ಡಾಲರ್​ಗೂ ಹೆಚ್ಚಿನ ಆರ್ಥಿಕತೆ ಹೊಂದಿವೆ. ಕೋಲ್ಕತಾ, ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಅಹ್ಮದಾಬಾದ್ ಜಿಲ್ಲೆಗಳು ನೂರು ಬಿಲಿಯನ್ ಡಾಲರ್​ಗೂ ಹೆಚ್ಚಿನ ಜಿಡಿಪಿ ಹೊಂದಿವೆ.

ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆ ಕೊಡುತ್ತವೆ ಈ 13 ನಗರಗಳು; ಬೆಂಗಳೂರಿಗೆ ಎಷ್ಟನೇ ಸ್ಥಾನ?
ಜಿಲ್ಲಾವಾರು ಜಿಡಿಪಿ
Follow us
|

Updated on:May 26, 2024 | 6:05 PM

ನವದೆಹಲಿ, ಮೇ 26: ವೇಗವಾಗಿ ಪ್ರಗತಿ ಹೊಂದುತ್ತಿರುವ ಭಾರತದ ಆರ್ಥಿಕತೆಯಲ್ಲಿ ಅಸಮಾನ ಬೆಳವಣಿಗೆಯೂ (inequal growth) ಆಗುತ್ತಿದೆ. ಭಾರತ ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕ ದೇಶವಾದರೂ ತಲಾದಾಯದ (per capita income) ವಿಚಾರಕ್ಕೆ ಬಂದರೆ ಪಾಕಿಸ್ತಾನದ ಮಟ್ಟದಲ್ಲೇ ಇದೆ. ಶ್ರೀಮಂತಿಕೆಯ ಪಟ್ಟಿ ಮಾಡಿದರೆ ಮೇಲಿನ ಶೇ. 1ರಷ್ಟು ಜನರ ಬಳಿಯೇ ಬಹುಭಾಗದ ಸಂಪತ್ತು ಇದೆ ಎಂದು ಹಲವು ವರದಿಗಳು ಹೇಳುತ್ತಿವೆ. ಇನ್ನು, ಭಾರತದಲ್ಲಿ ಪ್ರಗತಿಯಲ್ಲಿ ಪ್ರಾದೇಶಿಕವಾರು ಅಸಮಾನತೆ (regional inequality) ಇದೆ. ದಕ್ಷಿಣ ರಾಜ್ಯಗಳು ಸರಾಸರಿಯಾಗಿ ಹೆಚ್ಚು ಆದಾಯ ಹೊಂದಿವೆ. ಇನ್ನು, ನಗರಗಳನ್ನು ಗಣನೆಗೆ ತೆಗೆದುಕೊಂಡಾಗ ದೇಶಾದ್ಯಂತ ಇರುವ 700ಕ್ಕೂ ಹೆಚ್ಚು ಜಿಲ್ಲೆಗಳ ಪೈಕಿ 13 ಜಿಲ್ಲೆ ಅಥವಾ ನಗರಗಳಲ್ಲಿ ಶೇ. 50ರಷ್ಟು ಜಿಡಿಪಿ ನಿಂತಿದೆ ಎನ್ನುವಂತಹ ಅಚ್ಚರಿಯ ಅಂಕಿ ಅಂಶವನ್ನು ಪತ್ರಕರ್ತ ಪಂಕಜ್ ಪಚೋರಿ ತೆರೆದಿಟ್ಟಿದ್ದಾರೆ.

ಭಾರತದ ಅರ್ಧದಷ್ಟು ಜಿಡಿಪಿ 13 ನಗರಗಳಲ್ಲಿ ಕೇಂದ್ರಿತವಾಗಿದೆ. ಭವಿಷ್ಯದ ಸಂಪತ್ತಿನ ಸೃಷ್ಟಿ ಅಥವಾ ಮರುಹಂಚಿಕೆ ಹೆಚ್ಚು ವ್ಯಾಪಕವಾಗಿರಬೇಕು. ಇದರಿಂದ ವಲಸೆ ತಪ್ಪಿಸಬಹುದು, ಪ್ರಾದೇಶಿಕ ಅತ್ಮವಿಶ್ವಾಸ ಹೆಚ್ಚುತ್ತದೆ. ರಾಷ್ಟ್ರೀಯ ಐಕ್ಯತೆಗೆ ಉತ್ತೇಜನ ಸಿಗುತ್ತದೆ ಎಂದು ಪಂಕಜ್ ಪಚೋರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಒಡಿಶಾದಲ್ಲಿ ಮಹಿಳೆಯರ ಮೇಲೆ ದರ್ಪ, ದೌರ್ಜನ್ಯ; 25 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರ ಕಿತ್ತೊಗೆಯಲಿದ್ದಾರೆ ಜನರು: ಧರ್ಮೇಂದ್ರ ಪ್ರಧಾನ್

2020-21ರಲ್ಲಿ ಸರ್ಕಾರ ಅಂದಾಜು ಮಾಡಿದ ಜಿಲ್ಲಾ ಜಿಡಿಪಿ ಅಂಕಿ ಅಂಶ ಪ್ರಕಾರ ಮುಂಬೈ, ದೆಹಲಿ, ಕೋಲ್ಕತಾ ಟಾಪ್ 3 ರಾಜ್ಯಗಳಾಗಿವೆ. ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.

ಅತಿಹೆಚ್ಚು ಡಿಡಿಪಿ ಇರುವ 13 ಜಿಲ್ಲೆಗಳು

  1. ಮುಂಬೈ: 273 ಬಿಲಿಯನ್ ಡಾಲರ್
  2. ದೆಹಲಿ: 262 ಬಿಲಿಯನ್ ಡಾಲರ್
  3. ಕೋಲ್ಕತಾ: 151 ಬಿಲಿಯನ್ ಡಾಲರ್
  4. ಬೆಂಗಳೂರು: 120 ಬಿಲಿಯನ್ ಡಾಲರ್
  5. ಪುಣೆ: 117 ಬಿಲಿಯನ್ ಡಾಲರ್
  6. ಹೈದರಾಬಾದ್: 115 ಬಿಲಿಯನ್ ಡಾಲರ್
  7. ಅಹ್ಮದಾಬಾದ್: 114 ಬಿಲಿಯನ್ ಡಾಲರ್
  8. ಚೆನ್ನೈ: 109 ಬಿಲಿಯನ್ ಡಾಲರ್
  9. ಸೂರತ್: 80 ಬಿಲಿಯನ್ ಡಾಲರ್
  10. ಥಾಣೆ: 80 ಬಿಲಿಯನ್ ಡಾಲರ್
  11. ಜೈಪುರ್: 66 ಬಿಲಿಯನ್ ಡಾಲರ್
  12. ನಾಗಪುರ್: 62 ಬಿಲಿಯನ್ ಡಾಲರ್
  13. ನಾಶಿಕ್: 56 ಬಿಲಿಯನ್ ಡಾಲರ್

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆಯ ಈ ಸ್ಫೋಟಕ ಬೆಳವಣಿಗೆ ಯಾಕಾಗುತ್ತಿದೆ, ಹೇಗಾಗುತ್ತಿದೆ?

ಪಂಕಜ್ ಪಚೋರಿ ಅವರ ಈ ಎಕ್ಸ್ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಈ ಅಂಕಿ ಅಂಶವನ್ನು ವಿರೋಧಿಸಿದ್ದಾರೆ. ವಿಶ್ವದ ಯಾವುದೇ ದೇಶ ನೋಡಿದರೂ ಈ ರೀತಿಯ ಅಸಮಾನ ಚಿತ್ರಣ ಕಾಣಬಹುದು. ಅಮೆರಿಕದ 50 ರಾಜ್ಯಗಳಲ್ಲಿ ಏಳು ರಾಜ್ಯಗಳು ಜಿಡಿಪಿಗೆ ಕೊಡುತ್ತಿರುವ ಕೊಡುಗೆ ಶೇ. 50ರಷ್ಟಿದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.

ಜಾಗತಿಕವಾಗಿ ಶೇ. 60ರಷ್ಟು ಸಂಪತ್ತು ಒಂದು ಸಾವಿರ ನಗರಗಳಲ್ಲಿ ಕೇಂದ್ರಿತವಾಗಿದೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Sun, 26 May 24

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?