ಒಡಿಶಾದಲ್ಲಿ ಮಹಿಳೆಯರ ಮೇಲೆ ದರ್ಪ, ದೌರ್ಜನ್ಯ; 25 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರ ಕಿತ್ತೊಗೆಯಲಿದ್ದಾರೆ ಜನರು: ಧರ್ಮೇಂದ್ರ ಪ್ರಧಾನ್
Dharmendra Pradhan criticizes Naveen Patnaik's rule in Odisha: ಒಡಿಶಾದಲ್ಲಿ ಕಳೆದ 25 ವರ್ಷಗಳಿಂದ ಇರುವ ಬಿಜೆಡಿ ಸರ್ಕಾರ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಬೆಂಬಲಿಗರಿಂದ ತಮ್ಮ ಮೇಲೆ ದೌರ್ಜನ್ಯ ಆಗಿದ್ದ ಘಟನೆಯನ್ನು ಮಹಿಳೆಯೊಬ್ಬರು ವಿವರಿಸುತ್ತಿರುವ ವಿಡಿಯೋವೊಂದನ್ನು ಧರ್ಮೇಂದ್ರ ಪ್ರಧಾನ್ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರನ್ನು ಅಸಹಾಯಕರನ್ನಾಗಿಸಿದ್ದಾರೆ ಅವರ ಆಪ್ತರು. ರಿಮೋಟ್ ಕಂಟ್ರೋಲ್ ಸರ್ಕಾರದ ಪರಿ ಇದು ಎಂದು ಪ್ರಧಾನ್ ಲೇವಡಿ ಮಾಡಿದ್ದಾರೆ.
ಭುವನೇಶ್ವರ್, ಮೇ 26: ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ (BJD) ಯಾರಾದರೂ ಮತ ಹಾಕಲಿಲ್ಲವೆಂದರೆ ಅವರ ಕುಟುಂಬಗಳ ತಾಯಂದಿರು, ಸೋದರಿಯರು, ಹೆಣ್ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಒಡಿಶಾದ 25 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರದ ಮಾದರಿ ಇದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಟೀಕಿಸಿದ್ದಾರೆ. ಮಹಿಳೆಯೊಬ್ಬರು ಬಿಜೆಡಿ ಕಾರ್ಯಕರ್ತರಿಂದ ನಡೆದ ದೌರ್ಜನ್ಯ ಘಟನೆಯನ್ನು ವಿವರಿಸಿರುವ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರನ್ನು ಅಸಹಾಯಕ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
‘ನವೀನ್ ಬಾಬು ಆಡಳಿತದಲ್ಲಿ ಮಹಿಳೆಯರಿಗೆ ಇರುವ ಸ್ಥಿತಿ, ಗೌರವ ಮತ್ತು ಸನ್ಮಾನದ ಪರಿ ಇದು. ಅವರ ಪರವಾಗಿ ಯಾರಾದರೂ ಮತ ಚಲಾಯಿಸಲಿಲ್ಲವೆಂದು ಗೊತ್ತಾದರೆ, ಬಿಜು ಜನತಾ ದಳದ ಜನರು ತಾಯಂದಿರು, ಹೆಣ್ಮಕ್ಕಳು ಮತ್ತು ಸಹೋದರಿಯರನ್ನು ಬಡಿದು ದರ್ಪ ತೋರುತ್ತಾರೆ. ಪ್ರಜಾತಂತ್ರದ ಹಕ್ಕುಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಾರೆ. ಹೆಣ್ಮಕ್ಕಳ ಮಾನ ಇಲ್ಲಿ ಕೇವಲವಾಗಿದೆ. 25 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರದ ಮಾದರಿ ಆಡಳಿತದ ವೈಫಲ್ಯ ಇದು.
ಇದನ್ನೂ ಓದಿ: Lok Sabha Election: ಬಿಜೆಪಿಗೆ ಜೂನ್ 4ರಂದೇ ಅಂತಿಮ ಬೀಳ್ಕೊಡುಗೆ: ಅಖಿಲೇಶ್ ಯಾದವ್
‘ನವೀನ್ ಪಾಟ್ನಾಯಕ್ ಅವರನ್ನು ಅವರ ಆಪ್ತರು ಅಸಹಾಯಕರನ್ನಾಗಿ ಮಾಡಿದ್ದಾರೆ. ಈಗ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಸಹಾಯಕತೆಗೆ ದೂಡಲು ಯತ್ನಿಸುತ್ತಿದ್ದಾರೆ. ಸ್ತ್ರೀಶಕ್ತಿಯ ಕಡೆಗಣನೆ, ಈ ಆಟಾಟೋಪ, ಅನೈತಿಕ ವರ್ತನೆ ಇವ್ಯಾವುವನ್ನೂ ಒಡಿಶಾ ಜನರು ಒಪ್ಪುವುದಿಲ್ಲ. ನವೀನ್ ಬಾಬು ಮತ್ತು ಬಿಜು ಜನತಾ ದಳಕ್ಕೆ ಜನತೆ ತಕ್ಕ ಪಾಠ ಕಲಿಸಲಿದೆ,’ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
नवीन बाबू के राज में ओड़िशा की महिलाओं की सुरक्षा, सम्मान और गरिमा की यह दुर्दशा है। अपने पक्ष में वोट नहीं पड़ने पर बीजू जनता दल के लोग माँ-बेटियों और बहनों के साथ मारपीट और गुंडागर्दी पर उतर आए हैं। लोकतांत्रिक अधिकारों को बलपूर्वक छीनना एवं महिला सम्मान के प्रति ऐसी उदासीनता,… pic.twitter.com/bSUm1MW8Pv
— Dharmendra Pradhan (मोदी का परिवार) (@dpradhanbjp) May 26, 2024
ಈ ಪ್ರಕರಣದಲ್ಲಿ ಒಡಿಶಾ ಡಿಜಿಪಿಯವರು ಕಠಿಣ ಕ್ರಮ ಕೈಗೊಂಡು ಬಿಜು ಜನತಾ ದಳದ ರೌಡಿಗಳನ್ನು ಬಂಧಿಸಬೇಕು ಎಂದೂ ಧರ್ಮೇಂದ್ರ ಪ್ರಧಾನ್ ಆಗ್ರಹಿಸಿದ್ದಾರೆ.
ಒಡಿಶಾದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜು ಜನತಾ ದಳ ಅಧಿಕಾರದಲ್ಲಿದೆ. ಈಗ ಲೋಕಸಭಾ ಚುನಾವಣೆಯ ಜೊತೆಜೊತೆಗೆ ಆ ರಾಜದ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. 21 ಲೋಕಸಭಾ ಕ್ಷೇತ್ರಗಳಿದ್ದು ಅಷ್ಟನ್ನೂ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಇದೆ.
ಇದನ್ನೂ ಓದಿ: ಧ್ವನಿ ಬದಲಿಸುವ ಆ್ಯಪ್ ಮೂಲಕ ಮಹಿಳಾ ಪ್ರೊಫೆಸರ್ ಎಂದು ಹೇಳಿ ಕರೆಸಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಸಂಬಲಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಿಂದೊಮ್ಮೆ ಅವರು ಇಲ್ಲಿ ಗೆದ್ದಿದ್ದರು. ಕಳೆದ ಬಾರಿ ಅವರು ರಾಜ್ಯಸಭೆ ಮೂಲಕ ಸಂಸತ್ ಪ್ರವೇಶ ಮಾಡಿದ್ದರು. ಈ ಬಾರಿ ಮತ್ತೊಮ್ಮೆ ನೇರವಾಗಿ ಜನರಿಂದ ಆಯ್ಕೆಯಾಗಿ ಸಂಸತ್ಗೆ ಹೋಗಲು ಯತ್ನಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Sun, 26 May 24