ನವದೆಹಲಿ, ಜೂನ್ 2: ಷೇರುಗಳ ಮೇಲೆ ಹೂಡಿಕೆ ಮಾಡುವುದು ಬಹಳ ರಿಸ್ಕಿಯೂ ಹೌದು ಲಾಭಕಾರಿಯೂ ಹೌದು. ಇದು ಷೇರುಗಳ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುವ ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೂ (Equity mutual funds) ಅನ್ವಯ ಆಗುತ್ತದೆ. ಷೇರಿನ ಮೇಲೆ ಹೂಡಿಕೆ ಮಾಡಿದಾಕ್ಷಣ ಸಖತ್ ಲಾಭ ಬರುತ್ತೆ ಎಂದು ನಿರೀಕ್ಷಿಸಲು ಆಗುವುದಿಲ್ಲ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ಗಳು ವರ್ಷದಲ್ಲಿ ಸರಾಸರಿಯಾಗಿ ಶೇ 12ರಷ್ಟು ಲಾಭ ಮಾಡುತ್ತದೆ ಎನ್ನಲಾಗುತ್ತದೆ. ಹಾಗಂತ ಅದು ಪ್ರತೀ ವರ್ಷವೂ ಶೇ. 12ರ ಆಸುಪಾಸಿನ ದರದಲ್ಲಿ ಲಾಭ ತರುತ್ತದೆ ಎಂದಲ್ಲ. ದೀರ್ಘಾವಧಿಯಲ್ಲಿ ಸರಾಸರಿ ಪಡೆದಾಗ ಶೇ. 12ರ ದರದಲ್ಲಿ ಬೆಳೆದಿರಬಹುದು.
ಕಳೆದ ಎರಡು ಅಥವಾ ಮೂರು ವರ್ಷದಲ್ಲಿ ಬಹಳಷ್ಟು ಫಂಡ್ಗಳು ವಾರ್ಷಿಕವಾಗಿ ಶೇ. 18ಕ್ಕೂ ಹೆಚ್ಚು ಲಾಭ ತಂದಿವೆ. ಆದರೆ, ಬೇರೆ ವರ್ಷಗಳಲ್ಲಿ ಕೆಲ ಫಂಡ್ಗಳು ಒಂದು ವರ್ಷದಲ್ಲಿ ನಷ್ಟ ಮಾಡಿರಬಹುದು, ಮತ್ತೊಂದು ವರ್ಷದಲ್ಲಿ ಶೇ. 3ರಷ್ಟು ಬೆಳೆದಿರಬಹುದು, ಇನ್ನೊಂದು ವರ್ಷದಲ್ಲಿ ಶೇ. 50ರಷ್ಟು ಲಾಭ ಮಾಡಿರಬಹುದು. ಅದಕ್ಕೆ ಹೇಳುವುದು ಈಕ್ವಿಟಿ ಮೇಲಿನ ಹೂಡಿಕೆ ರಿಸ್ಕಿಯೂ ಹೌದು ಲಾಭಕಾರಿಯೂ ಹೌದು.
ಎಕನಾಮಿಕ್ ಟೈಮ್ಸ್ನ ವರದಿಯೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಒಮ್ಮೆಯೂ ನಷ್ಟ ಕಾಣದ 36 ಮ್ಯೂಚುವಲ್ ಫಂಡ್ಗಳಿವೆಯಂತೆ. ಹತ್ತು ವರ್ಷದಿಂದಲೂ ಮಾರುಕಟ್ಟೆಯಲ್ಲಿ ಇರುವ ಮ್ಯೂಚುವಲ್ ಫಂಡ್ಗಳ ಸಂಖ್ಯೆ 293 ಇದೆ. ಇವುಗಳ ಪೈಕಿ 36 ಫಂಡ್ಗಳು ಮಾತ್ರವೇ ಹತ್ತು ವರ್ಷದಲ್ಲಿ ಒಂದು ವರ್ಷವೂ ನಷ್ಟ ತಂದಿಲ್ಲ. ಹಾಗಂತ ಎಲ್ಲವೂ ಅದ್ಭುತವಾಗಿ ಬೆಳೆದಿವೆ ಎಂದಲ್ಲ. ಕೆಲ ವರ್ಷ ಶೇ. 1ರಷ್ಟು ಬೆಳೆದಿರುವುದುಂಟು. ಕೆಲ ವರ್ಷ ಶೇ. 20ಕ್ಕೂ ಹೆಚ್ಚು ಬೆಳೆದಿರುವುದುಂಟು.
ಇದನ್ನೂ ಓದಿ: ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ