AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ಗೆ ಸತತ ಮೂರನೇ ವರ್ಷ ಗಣಿಗಾರಿಕೆ ಕ್ಷೇತ್ರದ ಸಾಧಕ ಪ್ರಶಸ್ತಿ

ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ಜುಪಲ್ಲಿ ರಂಜಿತ್ ರಾವ್ ಅವರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸನ್ಮಾನಿಸಿದ್ದಾರೆ.

ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ಗೆ ಸತತ ಮೂರನೇ ವರ್ಷ ಗಣಿಗಾರಿಕೆ ಕ್ಷೇತ್ರದ ಸಾಧಕ ಪ್ರಶಸ್ತಿ
ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ಜುಪಲ್ಲಿ ರಂಜಿತ್ ರಾವ್
TV9 Web
| Updated By: Srinivas Mata|

Updated on:Jul 12, 2022 | 6:12 PM

Share

ಗಣಿಗಾರಿಕೆ (Mining) ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ, ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ಜುಪಲ್ಲಿ ರಂಜಿತ್ ರಾವ್ ಅವರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸನ್ಮಾನಿಸಿದ್ದಾರೆ. ಇದು ಸತತವಾಗಿ ಮೂರನೇ ವರ್ಷ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಈ ಪ್ರಶಸ್ತಿಯನ್ನು ಮಂಗಳವಾರದಂದು (ಜುಲೈ 12, 2022) ಪಡೆದಿದೆ. ಹೈದರಾಬಾದ್ ಮೂಲದ ಮೈ ಹೋಮ್‌ ಗ್ರೂಪ್‌ಗೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ 5 ಸ್ಟಾರ್ ರೇಟಿಂಗ್ ಪ್ರಶಸ್ತಿ ಬಂದಿದೆ. ದೆಹಲಿಯಲ್ಲಿ ನಡೆದ ಗಣಿ ಮತ್ತು ಖನಿಜ ಸಂಪತ್ತಿನ 6ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಇದು ನೀಡಲಾಯಿತು.

ಮೈ ಹೋಮ್‌ ಗ್ರೂಪ್‌ಗೂ ಪ್ರಶಸ್ತಿ ಈ ಹಿಂದೆ 2018-19 ಹಾಗೂ 2019-20ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜುಲೈ 12ನೇ ತಾರೀಕಿನಂದು 2020-21ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿದೆ. ಐಬಿಎಂ 2021ರಲ್ಲಿ (2019-20) ಐದನೇ ಫೈವ್ ಸ್ಟಾರ್ ರೇಟಿಂಗ್ ಎಂಎಲ್​ಎಂಗಾಗಿ ಭಾರತ ಸರ್ಕಾರದ ಗಣಿಗಾರಿಕೆ ಸಚಿವಾಲಯದಿಂದ ಮೈ ಹೋಮ್ ಇಂಡಸ್ಟ್ರೀಸ್ ಪ್ರಶಸ್ತಿ ಪಡೆದುಕೊಂಡಿದೆ. ಐದನೇ ಫೈವ್​ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ವೈಎಲ್​ಎಂಗಾಗಿ ಕೇಂದ್ರ ಸರ್ಕಾರದ ಗಣಿಗಾರಿಕೆ ಸಚಿವಾಲಯಿಂದ ಐಬಿಎಂ 2021 (2018-19)ರಲ್ಲಿ ನೀಡಲಾಗಿದೆ.

ಪ್ರಶಸ್ತಿ ವಿವರ ಇಲ್ಲಿದೆ: 

ಕ್ರಶರ್ ಮತ್ತು ಎಲೆಕ್ಟ್ರಿಕಲ್ ಅಳವಡಿಕೆ- ಮೊದಲ ಬಹುಮಾನ

ಗುತ್ತಿಗೆ ಕೆಲಸದ ಸುರಕ್ಷತೆ ಮತ್ತು ಸುರಕ್ಷತೆ ನನ್ನ ಜವಾಬ್ದಾರಿ ರಿಪೋರ್ಟ್ ಕಾರ್ಡ್- ಎರಡನೇ ಬಹುಮಾನ

ಸುರಕ್ಷತಾ ನಿರ್ವಹಣೆ ವ್ಯವಸ್ಥೆ- ಎರಡನೇ ಬಹುಮಾನ

ಮಿನರಲ್ ಬೆನಿಫಿಕೇಷನ್- ಮೂರನೇ ಬಹುಮಾನ

2021ನೇ ಸಾಲಿಗೆ 22ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಇಂಧನ ನಿರ್ವಹಣೆಯಲ್ಲಿನ ಸಾಧನೆ ಗುರುತಿಸಿ, ಹೋಮ್ ಇಂಡಸ್ಸ್ರೀಸ್ ಲಿಮಿಟೆಡ್​ (ಮೆಲ್ಲಚೆರುವು)ಗಾಗಿ ನೀಡಲಾಗಿದೆ. ಇದೊಂದು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಆಗಿದೆ. ಟಿಎಸ್​ ಎನರ್ಜಿ ಕನ್ಸರ್ವೇಷನ್ ಪ್ರಶಸ್ತಿ- 2019 ಅನ್ನು ತೆಲಂಗಾಣ ಸರ್ಕಾರ ನೀಡಿದೆ. ಟಿಎಸ್ ಎನರ್ಜಿ ಕನ್ಸರ್ವೇಷನ್ ಪ್ರಶಸ್ತಿಯನ್ನು ಅಲ್ಲಿನ ಸಚಿವರಿಂದ ಪಡೆಯಲಾಗಿದೆ. 2018ರ ಅಕ್ಟೋಬರ್​ ತಿಂಗಳಲ್ಲಿ ಹೈದರಾಬಾದ್​ನಲ್ಲಿ ನಡೆದ​ ಕ್ಯೂಸಿಎಫ್​ಐ ಹಾಗೂ ಸಿಎಂಎ ಎರಡನೇ ಸಿಮೆಂಟ್ ಸಮಾವೇಶದಲ್ಲಿ ಎರಡನೇ ಅತ್ಯುತ್ತಮ ಸುರಕ್ಷತಾ ಎಕ್ಸಲೆನ್ಸ್, ಎರಡನೇ ಅತ್ಯುತ್ತಮ ಎನರ್ಜಿ ಎಕ್ಸಲೆನ್ಸ್ ಮತ್ತು ಪ್ರಥಮ ಅತ್ಯುತ್ತಮ ಜೀವ ವೈವಿಧ್ಯ ಮತ್ತು ಸುಸ್ಥಿರ ಗಣಿಗಾರಿಕೆ ಪ್ರಶಸ್ತಿಯನ್ನು ಹೋಮ್ ಇಂಡಸ್ಟ್ರೀಸ್ ಪಡೆದಿತ್ತು.

2017ರ ಸೆಪ್ಟೆಂಬರ್ 13ಕ್ಕೆ ಹೈದರಾಬಾದ್​ ಚಾಪ್ಟರ್​ನಿಂದ ಕ್ವಾಲಿಟಿ ಸರ್ಕಲ್ ಅವಾರ್ಡ್ಸ್ 4 ಗೋಲ್ಡ್ ರೇಟಿಂಗ್ ಪಡೆದಿದೆ. 2017ರ ಸೆಪ್ಟೆಂಬರ್ 1ರಂದು ಸಿಐಐನಿಂದ ರಾಷ್ಟ್ರೀಯ ಎನರ್ಜಿ ಮ್ಯಾನೇಜ್​ಮೆಂಟ್ ಪ್ರಶಸ್ತಿ ಪಡೆದಿದೆ. ಅಕ್ಟೋಬರ್ 26ರ 2017ರಲ್ಲಿ ಲಂಡನ್ ಜಾಗತಿಕ ಸಮಾವೇಶದಲ್ಲಿ ಸುಸ್ಥಿರತೆಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ ಬಂದಿದೆ. 2016ರಲ್ಲಿ ಮೈ ಡೇ ಅವಾರ್ಡ್- ಅತ್ಯುತ್ತಮ ಮ್ಯಾನೇಜ್​ಮೆಂಟ್ ಪ್ರಶಸ್ತಿ ಬಂದಿದೆ. ತೂತ್ತುಕೂಡಿಯಲ್ಲಿ ಇರುವ ಹೋಮ್ ಇಂಡಸ್ಟ್ರೀಸ್​ನ ಗ್ರೈಡಿಂಗ್ ಘಟಕಕ್ಕೆ ಬಂದಿರುವ 2016-22ರ ಮಧ್ಯದ ಪ್ರಶಸ್ತಿಗಳನ್ನು ಗಮನಿಸುವುದಾದರೆ, ಸಿಐಐ ದಕ್ಷಿಣ ಪ್ರಾದೇಶಿಕ ಇಎಚ್​ಎಸ್ ಎಕ್ಸಲೆನ್ಸ್ ಪ್ರಶಸ್ತಿ 3 ಸ್ಟಾರ್ಸ್ ರೇಟಿಂಗ್ ಅಸೆಸ್​ಮೆಂಟ್ ವರ್ಷ 2020-21ಕ್ಕೆ ಬಂದಿದ್ದು, 25 ಮಾರ್ಚ್ 2021ರಲ್ಲಿ ಅದನ್ನು ನೀಡಲಾಯಿತು. ಇನ್ನು ಸಿಐಐ ದಕ್ಷಿಣ ಪ್ರಾದೇಶಿ ಇಎಚ್​ಎಸ್ ಎಕ್ಸಲೆನ್ಸ್ ಪ್ರಶಸ್ತಿ- ಸಿಲ್ವರ್ (ಬೆಳ್ಳಿ) ಅಸೆಸ್​ಮೆಂಟ್​ ವರ್ಷ 2021-22ನೇ ಸಾಲಿಗೆ ಬಂದಿದ್ದು, ಮಾರ್ಚ್ 29, 2022ರಲ್ಲಿ ನೀಡಲಾಯಿತು.

Published On - 6:12 pm, Tue, 12 July 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್