ಈ ಬಿಎಸ್​ಇ ಎಸ್​ಎಂಇ ಷೇರು 9 ಟ್ರೇಡಿಂಗ್ ಸೆಷನ್​ನಲ್ಲಿ ಶೇ 76ಕ್ಕೂ ಜಾಸ್ತಿ ಹೆಚ್ಚಳ

| Updated By: Srinivas Mata

Updated on: Jan 12, 2022 | 1:23 PM

ಈ ಬಿಎಸ್​ಇ ಎಸ್​ಎಂಇ ಷೇರು 9 ಟ್ರೇಡಿಂಗ್ ಸೆಷನ್​ನಲ್ಲಿ ಶೇ 76ಕ್ಕೂ ಹೆಚ್ಚು ರಿಟರ್ನ್ಸ್ ಅನ್ನು ಹೂಡಿಕೆದಾರರಿಗೆ ನೀಡಿದೆ. ಯಾವುದು ಆ ಷೇರು ಎಂಬ ಮಾಹಿತಿ ಇಲ್ಲಿದೆ.

ಈ ಬಿಎಸ್​ಇ ಎಸ್​ಎಂಇ ಷೇರು 9 ಟ್ರೇಡಿಂಗ್ ಸೆಷನ್​ನಲ್ಲಿ ಶೇ 76ಕ್ಕೂ ಜಾಸ್ತಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಕೊವಿಡ್ -19 ಸಾಂಕ್ರಾಮಿಕದ ತೀಕ್ಷ್ಣ ಪರಿಣಾಮದಿಂದ ಜಾಗತಿಕ ಆರ್ಥಿಕತೆ ತತ್ತರಿಸಿದ್ದರೂ 2021ನೇ ಇಸವಿಯು ಭಾರತೀಯ ಷೇರು ಮಾರುಕಟ್ಟೆಗೆ ಗಮನಾರ್ಹವಾದ ವರ್ಷವಾಗಿದೆ. ಆದ್ದರಿಂದ ಹೊಸ ವರ್ಷವನ್ನು ಪ್ರವೇಶಿಸಿದ ನಂತರ ಷೇರು ಮಾರುಕಟ್ಟೆಯ ಹೂಡಿಕೆದಾರರು 2022ರ ಸಂಭಾವ್ಯ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಅಥವಾ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳನ್ನು ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ. ಹೂಡಿಕೆದಾರರು ತಮ್ಮ ಬದ್ಧತೆಯೊಂದಿಗೆ ಮುಂದುವರಿಯಬೇಕು ಎನ್ನುತ್ತಾರೆ ವಿಶ್ಲೇಷಕರು. ಅಂದಹಾಗೆ ತಮ್ಮ ಪೋರ್ಟ್‌ಫೋಲಿಯೊದಲ್ಲಿ ಹೊಂದಿರುವ ಷೇರುಗಳ ಮೂಲಕ ಹೂಡಿಕೆದಾರರು ಈಗಾಗಲೇ ಭಾರೀ ಲಾಭ ಪಡೆದಿದ್ದಾರೆ. ಕ್ಲಾರಾ ಇಂಡಸ್ಟ್ರೀಸ್ ಅಂತಹ ಷೇರಿನಲ್ಲಿ ಒಂದು. ಈ ಬಿಎಸ್​ಇ ಎಸ್​ಎಂಇ ಲಿಸ್ಟೆಡ್ ಸ್ಟಾಕ್ ಕಳೆದ 9 ವಹಿವಾಟು ಅವಧಿಗಳಲ್ಲಿ ರೂ. 42.80ರಿಂದ ರೂ. 75.40ಕ್ಕೆ ಏರಿದ್ದು, ಹೂಡಿಕೆದಾರರಿಗೆ ಶೇ 76ರಷ್ಟು ಲಾಭವನ್ನು ನೀಡಿದೆ.

ಕ್ಲಾರಾ ಇಂಡಸ್ಟ್ರೀಸ್ ಷೇರು ಬೆಲೆ ಇತಿಹಾಸ
ಕ್ಲಾರಾ ಇಂಡಸ್ಟ್ರೀಸ್ ಸ್ಟಾಕ್ 30ನೇ ಡಿಸೆಂಬರ್ 2021ರಂದು ರೂ. 42.80ಕ್ಕೆ ಕೊನೆಗೊಂಡಿತು ಮತ್ತು ನಂತರ ಅದು ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಎಸ್​ಎಂಇ ಸ್ಟಾಕ್ ಪ್ರತಿ ಷೇರಿಗೆ ರೂ. 5.95ರ ಮೇಲ್ಮುಖ ಅಂತರದೊಂದಿಗೆ ಪ್ರಾರಂಭವಾಯಿತು ಮತ್ತು ಪ್ರತಿ ಷೇರಿಗೆ ರೂ. 75.40ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಶೇ 20ರ ಅಪ್ಪರ್ ಸರ್ಕ್ಯೂಟ್‌ಗೆ ತಲುಪಿತು. ಹಾಗಾಗಿ ಕಳೆದ 9 ವಹಿವಾಟು ಅವಧಿಗಳಲ್ಲಿ ಕ್ಲಾರಾ ಇಂಡಸ್ಟ್ರೀಸ್ ಷೇರಿನ ಬೆಲೆಯ ಏರಿಕೆಯನ್ನು ನೋಡಿದರೆ, ಇದು ರೂ. 42.80ರಿಂದ ರೂ.75.40ಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 76ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ.

ಕ್ಲಾರಾ ಇಂಡಸ್ಟ್ರೀಸ್ ಐಪಿಒ ವಿವರಗಳು
ಕ್ಲಾರಾ ಇಂಡಸ್ಟ್ರೀಸ್‌ 29ನೇ ಡಿಸೆಂಬರ್ 2021ರಂದು ಬಿಎಸ್​ಇ ಎಸ್​ಎಂಇ ವಿನಿಮಯದಲ್ಲಿ ಲಿಸ್ಟ್ ಮಾಡಲಾಗಿದೆ. ಕ್ಲಾರಾ ಇಂಡಸ್ಟ್ರೀಸ್ ಐಪಿಒ ಡಿಸೆಂಬರ್‌ನಲ್ಲಿ ಪ್ರಾಥಮಿಕ ಮಾರುಕಟ್ಟೆಗಳನ್ನು ಪ್ರತಿ ಈಕ್ವಿಟಿ ಷೇರಿಗೆ ರೂ. 43ರಂತೆ ಬಿಡುಗಡೆ ಮಾಡಲಾಯಿತು. ಐಪಿಒದ ಒಂದು ಲಾಟ್ ಕಂಪೆನಿಯ 3000 ಷೇರುಗಳನ್ನು ಒಳಗೊಂಡಿದೆ. ಅಂದರೆ ಸಾರ್ವಜನಿಕ ವಿತರಣೆಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಕನಿಷ್ಠ ರೂ. 1.29 ಲಕ್ಷ (ರೂ. 43 x 3000) ಹೂಡಿಕೆ ಮಾಡಬೇಕಾಗಿತ್ತು.

29ನೇ ಡಿಸೆಂಬರ್ 2021ರಂದು ಬಿಎಸ್​ಇ ಎಸ್​ಎಂಇ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಮಾಡಲಾದ ಐಪಿಒ ರೂ. 43.20 ಪ್ರತಿ ಹಂತಗಳಲ್ಲಿ ಮತ್ತು ದಿನದ ಗರಿಷ್ಠ ರೂ. 45.30 ಮತ್ತು ದಿನದ ಕನಿಷ್ಠ ರೂ. 43.20 ತಲುಪಿ, ಪ್ರತಿ ಷೇರಿಗೆ ನಂತರ ರೂ. 44ಕ್ಕೆ ಮುಕ್ತಾಯವಾಯಿತು. 30ನೇ ಡಿಸೆಂಬರ್ 2021ರಂದು ಎಸ್‌ಎಂಇ ಸ್ಟಾಕ್ ರೂ. 42.80 ಮಟ್ಟದಲ್ಲಿ ಕೊನೆಗೊಂಡಿತು.

ಹೂಡಿಕೆಯ ಮೇಲೆ ಪರಿಣಾಮ
ಷೇರು ಹಂಚಿಕೆಯ ನಂತರ ಕ್ಲಾರಾ ಇಂಡಸ್ಟ್ರೀಸ್‌ನಲ್ಲಿ ಅಲಾಟ್ ಆದವರು ಇಲ್ಲಿಯವರೆಗೆ ಹೂಡಿಕೆ ಮಾಡಿದ್ದರೆ, ಅದರ ರೂ. 1.29 ಲಕ್ಷ ಇಂದು ರೂ. 2,26,200 ಆಗಿರುತ್ತಿತ್ತು.

ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?