Lightyear 0 Electric Car: ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 7 ತಿಂಗಳಿಗೆ ಸಾಕು, ಗಂಟೆಗೆ 100 ಕಿ.ಮೀ. ವೇಗ

| Updated By: Srinivas Mata

Updated on: Jun 13, 2022 | 5:09 PM

ಈ ಎಲೆಕ್ಟ್ರಿಕ್ ವಾಹನವನ್ನು ಒಮ್ಮೆ ಚಾರ್ಜ್​ ಮಾಡಿದರೆ 7 ತಿಂಗಳು ಮತ್ತೆ ರೀಚಾರ್ಜ್ ಮಾಡುವ ಅಗತ್ಯ ಇಲ್ಲ ಎಂದು ಕಾರು ತಯಾರಿಕೆ ಕಂಪೆನಿಯೊಂದು ಹೇಳಿದೆ. ಯಾವುದು ಆ ಕಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Lightyear 0 Electric Car: ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 7 ತಿಂಗಳಿಗೆ ಸಾಕು, ಗಂಟೆಗೆ 100 ಕಿ.ಮೀ. ವೇಗ
ಸಾಂದರ್ಭಿಕಚಿತ್ರ
Image Credit source: moneycontrol.com
Follow us on

ಲೈಟ್​ ಇಯರ್ 0 (Lightyear 0) ಎಲೆಕ್ಟ್ರಿಕ್ ಕಾರು ರಚನೆ, ತಂತ್ರಜ್ಞಾನ ಇವುಗಳ ಕಾರಣಕ್ಕೆ ವಿಶ್ವಾದ್ಯಂತ ಗಮನ ಸೆಳೆದಿರುವುದು ಸುದ್ದಿ ಆಗುತ್ತಿದೆ. ವಾಹನ ತಯಾರಕರು ಹೇಳುವಂತೆ, ಬಿಸಿಲು ಯಥೇಚ್ಛವಾಗಿರುವ ದೇಶಗಳಲ್ಲಿ ಏಳು ತಿಂಗಳ ತನಕ ಬ್ಯಾಟರಿ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ. ಇನ್ನೂ ಅಚ್ಚರಿ ಸಂಗತಿ ಏನೆಂದರೆ, ನೆದರ್​ಲೆಂಡ್ಸ್​ನಲ್ಲೇ ಎರಡು ತಿಂಗಳ ತನಕ ಸಂಚರಿಸುತ್ತದೆ ಎನ್ನಲಾಗಿದೆ. ಇದನ್ನು ಒಂದು ದಿನದ ಸರಾಸರಿ ಲೆಕ್ಕ 35 ಕಿ.ಮೀ. ಅಂದಾಜು ಮಾಡಲಾಗಿದೆ. ಜತೆಗೆ ಮಾಲೀಕರು ತಮ್ಮ ವಾಹನವನ್ನು ಹೊರಭಾಗದಲ್ಲೇ ನಿಲುಗಡೆ ಮಾಡಬೇಕು. ಈ ಮೂಲಕವಾಗಿ ಎಲೆಕ್ಟ್ರಿಕ್ ವಾಹನದಲ್ಲಿ (Electric Vehicle) ಇರುವ ಸೋಲಾರ್​ ಪ್ಯಾನೆಲ್​ಗಳು ಸೂರ್ಯನ ಬೆಳಕಿನಿಂದ ಇಂಧನವು ಚಾರ್ಜ್ ಆಗುತ್ತದೆ. ಲೈಟ್​ ಇಯರ್ 0 ಕ್ಲೇಮ್ ಮಾಡಿಕೊಳ್ಳುವಂತೆ, ಒಂದು ವರ್ಷಕ್ಕೆ 11000 ಕಿಲೋಮೀಟರ್ ತನಕ ಸೋಲಾರ್ ಯೀಲ್ಡ್ ಬರುತ್ತದೆ. ಇದಕ್ಕೆ ಕಾರಣ ಏನು ಅಂತ ನೋಡಿದರೆ, 54 ಚದರಡಿಯ ಪೇಟೆಂಟೆಡ್ ಎರಡು ಬದಿ ಕರ್ವ್ ಸೋಲಾರ್ ಅರೇಸ್. ಈ ಮೂಲಕ ಸೂರ್ಯನಿಂದ ಯಾವಾಗ ಬೇಕಾದರೂ ಶಕ್ತಿ ಪಡೆಯಬಹುದು. ಕಂಪೆನಿ ತಿಳಿಸಿರುವ ಮತ್ತೊಂದು ಮೂಲದ ಪ್ರಕಾರ, ಸೋಲಾರ್ ಮೂಲದ ಶಕ್ತಿಯಿಂದ ಲೈಟ್​ ಇಯರ್ 0 70 ಕಿಲೋಮೀಟರ್ ತನಕ ಚಲಿಸುತ್ತದೆ.

ಕಂಪೆನಿಯು ಮತ್ತೊಂದು ಸಂಗತಿ ಸಹ ಹೊರಗಿಟ್ಟಿದೆ. ಅದನ್ನೇ ನಂಬುವುದಾದರೆ ಈ ಲೈಟ್​ ಇಯರ್ 0 ಕಾರು ಒಂದು ಸಲ ಪೂರ್ತಿಯಾಗಿ ಬ್ಯಾಟರಿ ಚಾರ್ಜ್ ಆದ ಮೇಲೆ 625 ಕಿಲೋಮೀಟರ್ ಸಂಚರಿಸಬಹುದು. ಹೆದ್ದಾರಿ ವೇಗ ಗಂಟೆಗೆ 110 ಕಿಲೋಮೀಟರ್ ಮುಟ್ಟಬಹುದು. ಇನ್ನು ಲಿಥಿಯಂ-ಐಯಾನ್ ಬ್ಯಾಟರಿ ಇರುವಾಗ ಒಂದು ಸಲ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಲೈಟ್​ ಇಯರ್ 0 ಕಾರು 560 ಕಿಲೋಮೀಟರ್ ಸಂಚರಿಸುತ್ತದೆ.

ಈ ಕಾರಿನ ಏರೋ ಡೈನಮಿಕ್ ರಚನೆ ಇಂಥದ್ದೊಂದು ರೇಂಜ್​ನ ನೀಡಿದೆ ಎಂದು ಕಾರು ಉತ್ಪಾದಕ ಸಂಸ್ಥೆ ಹೇಳಿದೆ. ಸದ್ಯಕ್ಕೆ ವಿಶ್ವದಲ್ಲೇ ಅತ್ಯಂತದಕ್ಷ ಎಲೆಕ್ಟ್ರಿಕ್ ಕಾರು ಎಂಬ ಕೀರ್ತಿ ಈ ಲೈಟ್​ ಇಯರ್ 0 ಕಾರಿನದು. ಕೇವಲ 10.5 kWh ಎನರ್ಜಿಯೊಂದಿಗೆ ಹೆದ್ದಾರಿಯಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಡಚ್ ಎಲೆಕ್ಟ್ರಿಕ್ ವೆಹಕಲ್ ಸ್ಟಾರ್ಟ್​ ಅಪ್ ಕಂಪೆನಿಯಾದ ಇದು ಭವಿಷ್ಯದಲ್ಲಿ ಈ ಸೆಗ್ಮೆಂಟ್​ ಅನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ. ಈ ಕಾರಿನ ಡೆಲವರಿ 2022ರ ನವೆಂಬರ್​ನಿಂದ ಆರಂಭವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Electric Car: ಮನೆಯಲ್ಲೇ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿದ ಕೇರಳದ ವ್ಯಕ್ತಿ; ಕೇವಲ 5 ರೂ.ಗೆ 60 ಕಿ.ಮೀ. ಓಡುತ್ತೆ ಈ ಕಾರು!

Published On - 5:08 pm, Mon, 13 June 22