ಇದೇ ಮೊದಲ ಬಾರಿಗೆ ಭಾರತದಿಂದ ಸರಕುಗಳ ರಫ್ತು 40,000 ಕೋಟಿ ಅಮೆರಿಕನ್ ಡಾಲರ್ನಷ್ಟು ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಬುಧವಾರ ಹೇಳಿದ್ದಾರೆ. ಬಿಜೆಪಿ ನೇತೃತ್ವ ಸರ್ಕಾರದ ಸ್ವಾವಲಂಬಿ ಉತ್ಪಾದನೆಯ ಯೋಜನೆ ಆತ್ಮನಿರ್ಭರ್ ಭಾರತಕ್ಕೆ ಪ್ರಮುಖ ಮೈಲುಗಲ್ಲು ಇದು ಎಂದು ಕರೆದಿದ್ದಾರೆ. 40 ಸಾವಿರ ಕೋಟಿ ಅಮೆರಿಕನ್ ಡಾಲರ್ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 30,44,216 ಕೋಟಿ (30.44 ಲಕ್ಷ ಕೋಟಿ) ಆಗುತ್ತದೆ. ಟ್ವಿಟರ್ನಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಭಾರತದ ಸೇವೆ ಮತ್ತು ತಯಾರಿಕೆ ಚಟುವಟಿಕೆ ಫೆಬ್ರವರಿಯಲ್ಲಿ ಸ್ಥಿರವಾಗಿದ್ದು, ಉಕ್ರೇನ್ ಯುದ್ಧದ ಕಾರ್ಮೋಡದಲ್ಲಿ ಬಳಕೆ ಆಧಾರಿತ ಆರ್ಥಿಕತೆ ದರ ಬೆಳವಣಿಗೆ ಹಾಗೂ ಬೆಲೆಯ ಮಧ್ಯೆ ಈ ಬೆಳವಣಿಗೆ ಆಗಿದೆ.
ಭಾರತವು 400 ಬಿಲಿಯನ್ ಯುಎಸ್ಡಿ ಸರಕುಗಳ ರಫ್ತಿನ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಮತ್ತು ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ ಎಂದು ಅವರು ಗಡುವಿನ ಒಂಬತ್ತು ದಿನಗಳ ಮುಂಚಿತವಾಗಿ ಗುರಿಯನ್ನು ತಲುಪಿರುವ ಗ್ರಾಫಿಕ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ.
India set an ambitious target of $400 Billion of goods exports & achieves this target for the first time ever. I congratulate our farmers, weavers, MSMEs, manufacturers, exporters for this success.
This is a key milestone in our Aatmanirbhar Bharat journey. #LocalGoesGlobal pic.twitter.com/zZIQgJuNeQ
— Narendra Modi (@narendramodi) March 23, 2022
ಬ್ಲೂಮ್‌ಬರ್ಗ್ ನ್ಯೂಸ್ ಸಂಗ್ರಹಿಸಿದ ಎಲ್ಲ ಎಂಟು ಹೈ-ಫ್ರೀಕ್ವೆನ್ಸಿ ಸೂಚಕಗಳು ಕಳೆದ ತಿಂಗಳು ಚಟುವಟಿಕೆಯು ಸ್ಥಿರವಾಗಿದೆ ಎಂದು ತೋರಿಸಿದ್ದು, ಅಳತೆಯ ಮಾಪನದಂತೆ ‘ಅನಿಮಲ್ ಸ್ಪಿರಿಟ್ಸ್’ ಸತತ ಎಂಟನೇ ತಿಂಗಳು 5ರಷ್ಟಿದೆ. ಒಂದು-ತಿಂಗಳ ವಾಚನಗಳಲ್ಲಿ ಏರಿಳಿತವನ್ನು ಸುಗಮಗೊಳಿಸಲು ಅಳತೆಯು ಮೂರು ತಿಂಗಳ ತೂಕದ ಸರಾಸರಿಯನ್ನು ಬಳಸುತ್ತದೆ.
ಇದನ್ನೂ ಓದಿ: Mann ki Baat ಅಮೂಲ್ಯವಾದ ಕಲಾಕೃತಿಗಳನ್ನು ಮರಳಿ ತರುವಲ್ಲಿ ಭಾರತ ಯಶಸ್ವಿಯಾಗಿದೆ: ಪ್ರಧಾನಿ ನರೇಂದ್ರ ಮೋದಿ