AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೋ ಬೆಲೆ ನಿಯಂತ್ರಣ; ಶೇ. 22ರಷ್ಟು ಅಗ್ಗಗೊಂಡ ಟೊಮೆಟೋ; ಸಕಾಲಕ್ಕೆ ಬಂದ ಹೊಸ ಮಾಲುಗಳು

Tomato price update: ಟೊಮೆಟೋ ಬೆಲೆ ಈ ವಾರ ನಿಯಂತ್ರಣಕ್ಕೆ ಬಂದಿದೆ. ಕಳೆದ ತಿಂಗಳು 67 ರೂ ಇದ್ದ ಟೊಮೆಟೋ ಬೆಲೆ ನವೆಂಬರ್ 14ಕ್ಕೆ 52 ರೂಗೆ ಇಳಿದಿದೆ. ದೆಹಲಿಯ ಆಜಾದ್​ಪುರ್ ಮಂಡಿಯಲ್ಲಿ ಟೊಮೆಟೋ ಬೆಲೆ ಅರ್ಧದಷ್ಟು ಕಡಿಮೆ ಆಗಿದೆ. ಕರ್ನಾಟಕದಲ್ಲೂ ಬೆಲೆ ನಿಯಂತ್ರಣಕ್ಕೆ ಬಂದಿದೆ. ಗುಜರಾತ್ ಮೊದಲಾದ ಕೆಲ ರಾಜ್ಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ಟೊಮೆಟೋ ಸರಬರಾಜು ದೇಶದ ವಿವಿಧೆಡೆಗೆ ಆಗುತ್ತಿದೆ.

ಟೊಮೆಟೋ ಬೆಲೆ ನಿಯಂತ್ರಣ; ಶೇ. 22ರಷ್ಟು ಅಗ್ಗಗೊಂಡ  ಟೊಮೆಟೋ; ಸಕಾಲಕ್ಕೆ ಬಂದ ಹೊಸ ಮಾಲುಗಳು
ಟೊಮೆಟೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2024 | 5:02 PM

Share

ನವದೆಹಲಿ, ನವೆಂಬರ್ 17: ಈರುಳ್ಳಿಯಂತೆ ಭಾರತದಲ್ಲಿ ಅತೀ ಸಾಮಾನ್ಯ ಬಳಕೆಯ ತರಕಾರಿಗಳಲ್ಲಿ ಒಂದಾದ ಟೊಮೆಟೋದ ಬೆಲೆ ಹತೋಟಿ ಮೀರದಂತೆ ಸರ್ಕಾರ ಈ ಬಾರಿ ಎಚ್ಚರ ವಹಿಸಿದೆ. ಟೊಮೆಟೊ ಬೆಲೆ ಈ ವಾರ ಕಿಲೋಗೆ 52 ರೂಗೆ ಇಳಿಕೆ ಆಗಿದೆ. ಕಳೆದ ತಿಂಗಳ ಇದೇ ಅವಧಿಗೆ ಹೋಲಿಸಿದರೆ ಟೊಮೆಟೊ ಬೆಲೆಯಲ್ಲಿ ಶೇ. 22ರಷ್ಟು ಇಳಿಕೆ ಆಗಿದೆ. ಅಕ್ಟೋಬರ್ 14ರಂದು 67.50 ರೂ ಇದ್ದ ದರ ನವೆಂಬರ್ 14ರಂದು 52.35 ರೂಗೆ ಬಂದಿದೆ. ಇದು ಸರಾಸರಿ ದರವಾಗಿದ್ದು, ಬೆಂಗಳೂರು ಹಾಗೂ ಕರ್ನಾಟಕ ಹಲವೆಡೆ ಟೊಮೆಟೋ ಬೆಲೆ ಇನ್ನೂ ಕಡಿಮೆ ಇದೆ.

ದೆಹಲಿಯ ಆಜಾದ್​ಪುರ್ ಮಂಡಿಯಲ್ಲಿ ಟೊಮೆಟೋ ಬೆಲೆ ಅರ್ಧಕರ್ಧ ಕಡಿಮೆ ಆಗಿದೆ. ಕ್ವಿಂಟಾಲ್​ಗೆ 5,883 ರೂ ಇದ್ದ ಹೋಲ್​ಸೇಲ್ ಬೆಲೆ ಈಗ 2,969 ರೂಗೆ ಇಳಿದಿದೆ. ಟೊಮೆಟೋ ಬೆಲೆಗಳ ಇಳಿಕೆಗೆ ಪ್ರಮುಖ ಕಾರಣವೆಂದರೆ, ಈ ತರಕಾರಿ ಇಳಿವರಿ ಹೆಚ್ಚಾಗಿರುವುದು, ಮತ್ತು ಎಲ್ಲೆಡೆ ಸರಾಗವಾಗಿ ಸರಬರಾಜು ಆಗಿರುವುದು.

ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ

ಮಹಾರಾಷ್ಟ್ರದ ಪಿಂಪಲಗಾಂವ್, ಆಂಧ್ರದ ಮದನಪಲ್ಲೆ ಮತ್ತು ಕರ್ನಾಟಕದ ಕೋಲಾರದಂತಹ ಪ್ರಮುಖ ಟೊಮೆಟೋ ಮಾರುಕಟ್ಟೆಗಳಲ್ಲೂ ಬೆಲೆ ಇಳಿಕೆ ಗಣನೀಯವಾಗಿ ಆಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ಟೊಮೆಟೋಗಳು ಎಲ್ಲೆಡೆ ಸಮರ್ಪಕವಾಗಿ ಸರಬರಾಜು ಆಗುತ್ತಿದೆ. ಹೀಗಾಗಿ ಈ ಮಾರುಕಟ್ಟೆಗಳಲ್ಲಿ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಬಂದಿದೆ.

ಟೊಮೆಟೋ ಸರ್ವ ಋತು ಬೆಳೆಯಾಗಿದೆ. ವರ್ಷದ ಎಲ್ಲಾ ದಿನಗಳಲ್ಲೂ ಟೊಮೆಟೋ ಬೆಳೆಯಲಾಗುತ್ತದೆ. ಆದರೆ, ಪ್ರತಿಕೂಲ ಹವಾಮಾನ ಇದ್ದಾಗ ಸಹಜವಾಗಿ ಇಳುವರಿ ತಗ್ಗುತ್ತದೆ. ಬರ, ಮಳೆ, ಪ್ರವಾಹಗಳಿಗೆ ಟೊಮೆಟೋ ಬೇಗ ಈಡಾಗಿ ಹೋಗುತ್ತದೆ. ಆಂಧ್ರ ಮತ್ತು ಕರ್ನಾಟಕದ ಹಲವೆಡೆ ತೀವ್ರ ಮಳೆಯಾದ್ದರಿಂದ ಸಾಕಷ್ಟು ಬೆಳೆನಾಶವಾಗಿ ಟೊಮೆಟೋ ದಾಸ್ತಾನು ಕಡಿಮೆ ಆಗಿತ್ತು. ಹೀಗಾಗಿ ಬೆಲೆ ಹೆಚ್ಚಳವಾಗಿತ್ತು.

ಇದನ್ನೂ ಓದಿ: ಬಜೆಟ್​ನಲ್ಲಿ ಟ್ಯಾಕ್ಸ್ ದರ ಕಡಿಮೆ ಆಗುತ್ತಾ? ಮಧ್ಯಮವರ್ಗದವರಿಗೆ ರಿಲೀಫ್ ಕೊಡಿ ಎಂದ ವ್ಯಕ್ತಿಯೊಬ್ಬರಿಗೆ ನಿರ್ಮಲಾ ಮೇಡಂ ಸಕಾರಾತ್ಮಕ ಸ್ಪಂದನೆ

ಈಗ ಬೇರೆ ಪ್ರಮುಖ ರಾಜ್ಯಗಳಲ್ಲಿ ನಿಯಂತ್ರಿತ ರೀತಿಯಲ್ಲಿ ಮಳೆಯಾದ್ದರಿಂದ ಟೊಮೆಟೋ ಬೆಲೆ ಉತ್ತಮವಾಗಿ ಬಂದಿದೆ. ಒಂದು ಅಂದಾಜು ಪ್ರಕಾರ 2023-24ರಲ್ಲಿ ಭಾರತದಲ್ಲಿ ಟೊಮೆಟೋ ಉತ್ಪಾದನೆ 213.20 ಲಕ್ಷ ಟನ್​ಗೆ (ಶೇ. 4ರಷ್ಟು ಹೆಚ್ಚಳ) ಏರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ