ಹಿರಿಯ ನಾಗರಿಕರಿಗೆ ತಮ್ಮ ಹೂಡಿಕೆಗೆ ನಿಶ್ಚಿತ ಆದಾಯ ಬರಬೇಕು ಎಂಬ ನಿರೀಕ್ಷೆ ಇರುತ್ತದೆ. ಅದರ ಜತೆಗೇ ಏನೋ ತುರ್ತು ಅಗತ್ಯ ಅಂದರೆ ಅದಕ್ಕೆ ತಕ್ಷಣವೇ ಹಣ (ನಗದು) ಸಿಗುವಂತಿರಬೇಕು ಎಂದಿರುತ್ತದೆ. ಈ ಎರಡೂ ಕಾರಣಗಳಿಂದಲೋ ಏನೋ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿ ದರವು ಬೀಳುತ್ತಾ ಇದ್ದರೂ ಸಣ್ಣ ಖಾಸಗಿ ಹಾಗೂ ಸಣ್ಣ ಹಣಕಾಸು ಬ್ಯಾಂಕ್ಗಳು ಮೂರು ವರ್ಷದ ಅವಧಿಯ ಎಫ್.ಡಿ.ಗೆ ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರವನ್ನು ನೀಡುತ್ತಾ ಬಂದಿವೆ. ಈ ಬಡ್ಡಿ ದರಗಳ ಲೆಕ್ಕಾಚಾರದ ಮಾಹಿತಿಯನ್ನು ಬ್ಯಾಂಕ್ಬಜಾರ್ನಿಂದ ಒಟ್ಟು ಮಾಡಿದ್ದು, ಉತ್ತಮ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್ಗಳ ವಿವರ ಇಲ್ಲಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಮೂರು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ ಈ ಬ್ಯಾಂಕ್ನಿಂದ ವಾರ್ಷಿಕ ಶೇ 7.25ರ ಬಡ್ಡಿ ದರ ದೊರೆಯುತ್ತದೆ. ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿಯೇ ಈ ಬ್ಯಾಂಕ್ ಅತ್ಯುತ್ತಮ ಬಡ್ಡಿ ದರವನ್ನು ಆಫರ್ ಮಾಡುತ್ತದೆ. 1 ಲಕ್ಷ ರೂಪಾಯಿ ಇಟ್ಟಲ್ಲಿ ಮೂರು ವರ್ಷಕ್ಕೆ 1.24 ಲಕ್ಷ ರೂಪಾಯಿ ಆಗುತ್ತದೆ. ಕನಿಷ್ಠ ಹೂಡಿಕೆ 1000 ರೂಪಾಯಿ.
ಡಿಸಿಬಿ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್
ಈ ಎರಡೂ ಬ್ಯಾಂಕ್ನಿಂದ ಹಿರಿಯ ನಾಗರಿಕರಿಗೆ ಮೂರು ವರ್ಷದ ಅವಧಿಗೆ ಶೇ 7ರಷ್ಟು ಬಡ್ಡಿ ದೊರೆಯುತ್ತದೆ. ರೂ. 1 ಲಕ್ಷ ಹೂಡಿಕೆ ಮಾಡಿದಲ್ಲಿ ಮೂರು ವರ್ಷದ ನಂತರ 1.23 ಲಕ್ಷ ರೂಪಾಯಿ ಸಿಗುತ್ತದೆ. ಕನಿಷ್ಠ ಹೂಡಿಕೆ 10,000 ರೂಪಾಯಿ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಹಿರಿಯ ನಾಗರಿಕರಿಗೆ 3 ವರ್ಷದ ಅವಧಿಗೆ ಶೇ 6.85ರಷ್ಟು ಬಡ್ಡಿ ದರ ನೀಡುತ್ತದೆ. ಇದರಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದಲ್ಲಿ ಮೂರು ವರ್ಷದ ನಂತರ ರೂ. 1.22 ಲಕ್ಷ ಸಿಗುತ್ತದೆ.
ಆರ್ಬಿಎಲ್ ಬ್ಯಾಂಕ್
ಆರ್ಬಿಎಲ್ ಬ್ಯಾಂಕ್ನಿಂದ ಶೇ 6.80 ನೀಡಲಾಗುತ್ತದೆ. ಹಿರಿಯ ನಾಗರಿಕರು ಇದರಲ್ಲಿ 1 ಲಕ್ಷ ರೂಪಾಯಿ ಹೂಡಿದಲ್ಲಿ ಮೂರು ವರ್ಷದಲ್ಲಿ ರೂ. 1.22 ಲಕ್ಷ ಆಗುತ್ತದೆ.
ಸಣ್ಣ ಖಾಸಗಿ ಬ್ಯಾಂಕ್ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್ಗಳು ಹೊಸದಾಗಿ ಠೇವಣಿದಾರರನ್ನು ಸೆಳೆಯಲು ಹೆಚ್ಚಿನ ಬಡ್ಡಿದರ ಆಫರ್ ಮಾಡಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) 5 ಲಕ್ಷ ರೂಪಾಯಿ ತನಕದ ಫಿಕ್ಸೆಡ್ ಡೆಪಾಸಿಟ್ಸ್ಗೆ ಗ್ಯಾರಂಟಿ ಒದಗಿಸುತ್ತದೆ.
ಇದನ್ನೂ ಓದಿ: Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್ಗಳಿವು
(Top 5 Banks Which Are Providing Up to 7.25 Percent Interest On Fixed Deposits For Senior Citizens)