ಬೆಂಗಳೂರು, ಡಿಸೆಂಬರ್ 14: ಎಲ್ಲಾ ಕರ್ಮಷಿಯಲ್ ಟ್ರಕ್ ವಾಹನಗಳಲ್ಲಿ 2025ರ ಅಕ್ಟೋಬರ್ನಿಂದ ಎಸಿ ಕ್ಯಾಬಿನ್ (Air Condition System) ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಇಲಾಖೆ ಮೊನ್ನೆ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಲಾರಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಸಿ ಅಳವಡಿಕೆಯಿಂದ ಶೇ. 40ರಷ್ಟು ಡೀಸೆಲ್ ಬಳಕೆ ಆಗುತ್ತದೆ. ಎಂಜಿನ್ ಬೇಗ ಕೆಡುತ್ತದೆ. ಎಸಿ ಅಳವಡಿಕೆಯನ್ನು ಕಡ್ಡಾಯ ಮಾಡುವುದು ಬೇಡ. ಪರ್ಯಾಯ ಮಾರ್ಗ ಕೊಡಿ ಎಂದು ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆ (All India Motor Transport congress) ಅಧ್ಯಕ್ಷ ಷಣ್ಮುಗಪ್ಪ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
ಮೋಟಾರು ವಾಹನ ತೆರಿಗೆ 2023 ರ ವಿಧೇಯಕ ಮಂಡನೆಯಾಗಿತ್ತು. ಈ ಬಗ್ಗೆ ಲಾರಿ ಮಾಲೀಕರ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರ ಜೀವಿತಾವಧಿ ತೆರಿಗೆ ವಿಧಿಸುವುದನ್ನ ಹಿಂಪಡೆದು, ಹಿಂದಿನಂತೆ ತ್ರೈಮಾಸಿಕ ತೆರಿಗೆ ಸಂಗ್ರಹ ಕಲ್ಪಿಸಲು ಅವಕಾಶ ನೀಡಿ 2 ನೇ ವಿಧೇಯಕ ಮೂಲಕ ತಿದ್ದುಪಡಿಗೆ ಮಂಡನೆ ಮಾಡಿತ್ತು. ಇದನ್ನು ಸ್ವಾಗತಿಸಿರುವ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: EV Import: ಎಲೆಕ್ಟ್ರಿಕ್ ಕಾರು ಆಮದಿಗೆ ತೆರಿಗೆ ವಿನಾಯಿತಿ ಇಲ್ಲ: ಸರ್ಕಾರ ಸಂದೇಶ; ಇಲಾನ್ ಮಸ್ಕ್, ಟೆಸ್ಲಾ ಮುಂದಿನ ಹಾದಿ ಏನು?
ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಳದ ಹಿಂದೆ ಇದೆಯಾ ಅಮೆರಿಕದ ಬಡ್ಡಿದರ? ಬಡ್ಡಿಗೂ ಚಿನ್ನಕ್ಕೂ ಏನಿದು ಸಂಬಂಧ?
ಒಟ್ಟಿನಲ್ಲಿ ರಾಜ್ಯ ಸರ್ಕಾರ ಜೀವಿತಾವಧಿ ವಾಹನ ತೆರಿಗೆ ವಿಧಿಸುವುದನ್ನ ಹಿಂಪಡೆದಿರೋದಕ್ಕೆ ಖುಷ್ ಆಗಿದ್ದಾರೆ. ಆದರೆ ಅತ್ತ ಕೇಂದ್ರ ಸರ್ಕಾರ 2025 ರಿಂದ ಬರುವ ಎಲ್ಲಾ ಹೊಸ ಗೂಡ್ಸ್ ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿರೋದು ವಿರೋಧಕ್ಕೆ ಕಾರಣವಾಗಿದೆ. ಈಗಾಗಲೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಎಸಿ ವಾಹನ ಕರಡು ಹಿಂಪಡೆಯುವಂತೆ ಮೋಟಾರ್ ಅಸೋಸಿಯೇಷನ್ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕರುಡು ಹಿಂಪಡೆಯುತ್ತಾ ಇಲ್ಲವಾ ಕಾದು ನೋಡಬೇಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ