ಬೆಂಗಳೂರು, ಫೆಬ್ರುವರಿ 19: ರೈಡ್ ಹೈಲಿಂಗ್ ಸರ್ವಿಸ್ ಕ್ಷೇತ್ರದಲ್ಲಿ ಊಬರ್ ಮತ್ತು ಓಲಾ ಕಂಪನಿಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಕಷ್ಟಪಡುವ ರೀತಿಯಲ್ಲಿ ಸ್ಪರ್ಧೆಗಳು ಏರ್ಪಡುತ್ತಿವೆ. ಅದರಲ್ಲೂ ಆಟೊರಿಕ್ಷಾ ರೈಡಿಂಗ್ ಸೇವೆಯಲ್ಲಂತೂ ನಮ್ಮ ಯಾತ್ರಿ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ. ಇದೀಗ ರ‍್ಯಾಪಿಡೋ ಆಟೊ ಅಡಿ ಇಟ್ಟ ಮೇಲಂತೂ ಸ್ಪರ್ಧೆಗೆ ಹೊಸ ಕಳೆ ಪಡೆದಿದೆ. ನಮ್ಮ ಯಾತ್ರಿ ಮತ್ತು ರ‍್ಯಾಪಿಡೋ ಆಟೊ ಹೊಸ ಮಾದರಿ ಆದಾಯ ಹಂಚಿಕೆ ನೀತಿ ತರುವ ಮೂಲಕ ಆಟೊಡ್ರೈವರ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಓಲಾ ಮತ್ತು ಊಬರ್ ರೀತಿಯ ಕಮಿಷನ್ ಮಾದರಿ ಬಿಟ್ಟು, ಸಬ್ಸ್ಕ್ರಿಪ್ಷನ್ ಮಾದರಿಯನ್ನು ಇವೆರಡು ಹೊಸ ಸ್ಪರ್ಧಿಗಳು ಅನುಸರಿಸುತ್ತಿವೆ. ಇದೀಗ ಸ್ಪರ್ಧೆಯ ಬಿಸಿ ಪಡೆದಿರುವ ಊಬರ್ ತನ್ನ ಆಟೊ ಸರ್ವಿಸ್ನಲ್ಲಿ ಸಬ್ಸ್ಕ್ರಿಪ್ಷನ್ ಮಾಡಲ್ ಅನ್ನು ಅನುಸರಿಸಲು ನಿರ್ಧರಿಸಿದೆ.
ಓಲಾ ಮತ್ತು ಊಬರ್ ಕಂಪನಿಗಳು ಆಟೊ ಡ್ರೈವರ್ಗಳಿಂದ ಕಮಿಷನ್ ಪಡೆಯುತ್ತವೆ. ಪ್ರತೀ ಟ್ರಿಪ್ಗೆ ಆ ಟ್ರಿಪ್ನ ಮೊತ್ತಕ್ಕೆ ಅನುಗುಣವಾಗಿ ಕಮಿಷನ್ ಪಡೆಯುತ್ತವೆ. ಈ ವಿಚಾರದಲ್ಲಿ ಬಹುತೇಕ ಎಲ್ಲಾ ಆಟೊರಿಕ್ಷಾ ಚಾಲಕರು ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕವಾಗಿ ಚಾಲಕರು ಆಕ್ರೋಶ ಹೊರಹಾಕಿರುವುದುಂಟು.
ಇನ್ನೊಂದೆಡೆ ನಮ್ಮ ಯಾತ್ರಿ ಸಂಸ್ಥೆ ಈ ಕಮಿಷನ್ ಮಾರ್ಗ ಅನುಸರಿಸಲಿಲ್ಲ. ತನ್ನ ಪ್ಲಾಟ್ಫಾರ್ಮ್ ಬಳಸಲು ರಿಕ್ಷಾ ಚಾಲಕರಿಂದ ಶುಲ್ಕ ಮಾತ್ರವೇ ಪಡೆಯುತ್ತದೆ. ರೈಡ್ನಿಂದ ಸಿಗುವ ಎಲ್ಲಾ ಹಣವೂ ಡ್ರೈವರ್ಗೆಯೇ ಸಲ್ಲುತ್ತದೆ. ರ‍್ಯಾಪಿಡೋ ಆಟೊ ಕೂಡ ಇದೇ ನೀತಿ ಅನುಸರಿಸುತ್ತದೆ. ಇದರಿಂದ ಚಾಲಕರಿಗೆ ಹೆಚ್ಚು ಉತ್ತೇಜನ ಸಿಕ್ಕಂತಾಗುತ್ತದೆ. ಬಹಳಷ್ಟು ಆಟೊಚಾಲಕರು ಓಲಾ ಮತ್ತು ಊಬರ್ ಬಿಟ್ಟು ಹೋಗಲು ಕಾರಣವಾಗಿದೆ.
ಇದನ್ನೂ ಓದಿ: ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ