Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich companies: ಈ 500 ಭಾರತೀಯ ಖಾಸಗಿ ಕಂಪನಿಗಳ ಒಟ್ಟು ಮೌಲ್ಯ ದೇಶದ ಜಿಡಿಪಿಗಿಂತ ಹೆಚ್ಚು

Axis Bank's Burgundy Private Hurun India 500: ಎಕ್ಸಿಸ್ ಬ್ಯಾಂಕ್ ಬುರ್ಗುಂಡಿ ಪ್ರೈವೇಟ್ ಅಂಡ್ ಹುರುನ್ ಇಂಡಿಯಾ 500ನಲ್ಲಿ ಭಾರತದ ಅತ್ಯಂತ ಮೌಲ್ಯಯುತ 500 ಖಾಸಗಿ ಕಂಪನಿಗಳ ಪಟ್ಟಿ ಮಾಡಲಾಗಿದೆ. ಇದರಲ್ಲಿರುವ ಟಾಪ್ 500 ಕಂಪನಿಗಳ ಒಟ್ಟು ಮೌಲ್ಯ 3.8 ಟ್ರಿಲಿಯನ್ ಡಾಲರ್​ನಷ್ಟಿದೆ. ಇದು ಭಾರತದ 2023ರಲ್ಲಿದ್ದ ಜಿಡಿಪಿಗಿಂತಲೂ ದೊಡ್ಡದು.

Rich companies: ಈ 500 ಭಾರತೀಯ ಖಾಸಗಿ ಕಂಪನಿಗಳ ಒಟ್ಟು ಮೌಲ್ಯ ದೇಶದ ಜಿಡಿಪಿಗಿಂತ ಹೆಚ್ಚು
ರಿಲಾಯನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2025 | 7:02 PM

ನವದೆಹಲಿ, ಫೆಬ್ರುವರಿ 18: ಭಾರತದಲ್ಲಿರುವ ಅತೀ ಮೌಲ್ಯಯುತ ಖಾಸಗಿ ಕಂಪನಿಗಳ ಒಟ್ಟು ಮೌಲ್ಯ 324 ಲಕ್ಷ ಕೋಟಿ ರೂ ಆಗುತ್ತದಂತೆ. ಅಂದರೆ, 3.8 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿವೆ ಈ 500 ಟಾಪ್ ಕಂಪನಿಗಳು. ಎಕ್ಸಿಸ್ ಬ್ಯಾಂಕ್​ನ ಬುರ್ಗುಂಡಿ ಪ್ರೈವೇಟ್ ಮತ್ತು ಹುರುನ್ ಇಂಡಿಯಾ ಜಂಟಿಯಾಗಿ ಮಾಡಿದ ಅಂದಾಜು ಇದು. ಇದು ನಿಜವೇ ಆದಲ್ಲಿ ಭಾರತದ ಜಿಡಿಪಿಗಿಂತ ಅದರ 500 ಖಾಸಗಿ ಕಂಪನಿಗಳ ಮೌಲ್ಯವೇ ಹೆಚ್ಚಿದೆ.

2023ರ ವರ್ಷದಲ್ಲಿ ಭಾರತದ ಜಿಡಿಪಿ 3.4 ಟ್ರಿಲಿಯನ್ ಡಾಲರ್​ನಷ್ಟು ಇದೆ. ಈ 500 ಕಂಪನಿಗಳ ಮೌಲ್ಯವು ಈ ಜಿಡಿಪಿಯನ್ನೇ ಮೀರಿಸುತ್ತದೆ. ಅಷ್ಟೇ ಅಲ್ಲ, ಯುಎಇ, ಇಂಡೋನೇಷ್ಯ ಮತ್ತು ಸ್ಪೇನ್ ದೇಶದ ಜಿಡಿಪಿಗಳನ್ನು ಸೇರಿಸಿದರೂ ಈ ಮಟ್ಟಕ್ಕೆ ಬರಲಾಗದು. ಪಾಕಿಸ್ತಾನದ ಜಿಡಿಪಿಗಿಂತ ಹತ್ತು ಪಟ್ಟು ಮೌಲ್ಯ ಭಾರತದ ಬೆರಳೆಣಿಕೆಯ ಖಾಸಗಿ ಕಂಪನಿಗಳಿಗೆ ಇದೆ.

ಇದನ್ನೂ ಓದಿ: Unemployment: ಅಕ್ಟೋಬರ್-ಡಿಸೆಂಬರ್​ನಲ್ಲಿ ನಿರುದ್ಯೋಗ ದರ ಶೇ. 6.4ಕ್ಕೆ ಇಳಿಕೆ: ಎನ್​ಎಸ್​ಎಸ್​ಒ ಸಮೀಕ್ಷಾ ವರದಿ

2024ರ ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿಯಲ್ಲಿ ಇರುವ ಕಂಪನಿಗಳು ಅಸಾಧಾರಣದ್ದಾಗಿವೆ. 84 ಲಕ್ಷ ಜನರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆಯ ಕೀಲಿ ಕೈ ಈ ಟಾಪ್ ಕಂಪನಿಗಳಲ್ಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಈ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.

ಮುಕೇಶ್ ಅಂಬಾನಿ ಮಾಲಕತ್ವದ ಆರ್​ಐಎಲ್​ನ ಮೌಲ್ಯ 17 ಲಕ್ಷ ಕೋಟಿ ರೂಗೂ ಅಧಿಕ ಇದೆ. ಟಿಸಿಎಸ್ ಮತ್ತು ಎಚ್​​ಡಿಎಫ್​ಸಿ ಬ್ಯಾಂಕ್ ಮೌಲ್ಯ 10 ಲಕ್ಷ ಕೋಟಿ ರೂ ಗಡಿ ದಾಟುತ್ತದೆ. ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮೊದಲಾದ ಕಂಪನಿಗಳು ಟಾಪ್-10ನಲ್ಲಿ ಇವೆ.

ಇದನ್ನೂ ಓದಿ: GDP growth: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್​ಎ ನಿರೀಕ್ಷೆ

ಈ ಬುರ್ಗುಂಡಿ ಪ್ರೈವೇಟ್ 500 ಪಟ್ಟಿಯೊಳಗೆ, 2024ರಲ್ಲಿ ಅತಿವೇಗವಾಗಿ ಮೌಲ್ಯ ಹೆಚ್ಚಿಸಿಕೊಂಡ ಕಂಪನಿಗಳಲ್ಲಿ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಮೊದಲು ಬರುತ್ತದೆ. ಹಿಂದಿನ ಪಟ್ಟಿಗೆ ಹೋಲಿಸಿದರೆ ಇದರ ಮೌಲ್ಯ ಶೇ. 297ರಷ್ಟು ಹೆಚ್ಚಾಗಿದೆ. ಐನಾಕ್ಸ್ ವಿಂಡ್, ಮತ್ತು ಜೆಪ್ಟೋ ಕೂಡ ತಮ್ಮ ಮೌಲ್ಯವನ್ನು ಬಹುತೇಕ ಮೂರು ಪಟ್ಟು ಹೆಚ್ಚಿಸಿಕೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ