Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಿಷನ್ ಮಾರ್ಗ ಬಿಟ್ಟ ಊಬರ್ ಆಟೊ; ರಿಕ್ಷಾಚಾಲಕರಿಗೆ ಅನುಕೂಲ; ನಮ್ಮ ಯಾತ್ರಿ ಸ್ಪರ್ಧೆ ಎದುರಿಸಲು ಊಬರ್ ಹೆಜ್ಜೆ

Uber Auto changes its strategy: ಊಬರ್ ಸಂಸ್ಥೆ ತನ್ನ ಆಟೊ ಸರ್ವಿಸ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಿದೆ. ನಮ್ಮ ಯಾತ್ರಿ ಮತ್ತು ರ‍್ಯಾಪಿಡೋ ಆಟೊ ಮಾದರಿಯನ್ನು ಅನುಸರಿಸಲಿದೆ. ಡ್ರೈವರ್​ಗಳಿಂದ ಪ್ರತೀ ಟ್ರಿಪ್​ಗೆ ಕಮಿಷನ್ ಪಡೆಯುವುದರ ಬದಲು ಸಬ್​ಸ್ಕ್ರಿಪ್ಷನ್ ಮಾಡಲ್ ಜಾರಿಗೆ ತರುತ್ತಿದೆ. ಡ್ರೈವರ್​ಗಳು ಕೈತಪ್ಪಿ ಹೋಗುವುದನ್ನು ತಪ್ಪಿಸಲು ಊಬರ್ ಈ ಪ್ಲಾನ್ ಮಾಡಿದೆ.

ಕಮಿಷನ್ ಮಾರ್ಗ ಬಿಟ್ಟ ಊಬರ್ ಆಟೊ; ರಿಕ್ಷಾಚಾಲಕರಿಗೆ ಅನುಕೂಲ; ನಮ್ಮ ಯಾತ್ರಿ ಸ್ಪರ್ಧೆ ಎದುರಿಸಲು ಊಬರ್ ಹೆಜ್ಜೆ
ಆಟೊರಿಕ್ಷಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2025 | 10:56 AM

ಬೆಂಗಳೂರು, ಫೆಬ್ರುವರಿ 19: ರೈಡ್ ಹೈಲಿಂಗ್ ಸರ್ವಿಸ್ ಕ್ಷೇತ್ರದಲ್ಲಿ ಊಬರ್ ಮತ್ತು ಓಲಾ ಕಂಪನಿಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಕಷ್ಟಪಡುವ ರೀತಿಯಲ್ಲಿ ಸ್ಪರ್ಧೆಗಳು ಏರ್ಪಡುತ್ತಿವೆ. ಅದರಲ್ಲೂ ಆಟೊರಿಕ್ಷಾ ರೈಡಿಂಗ್ ಸೇವೆಯಲ್ಲಂತೂ ನಮ್ಮ ಯಾತ್ರಿ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ. ಇದೀಗ ರ‍್ಯಾಪಿಡೋ ಆಟೊ ಅಡಿ ಇಟ್ಟ ಮೇಲಂತೂ ಸ್ಪರ್ಧೆಗೆ ಹೊಸ ಕಳೆ ಪಡೆದಿದೆ. ನಮ್ಮ ಯಾತ್ರಿ ಮತ್ತು ರ‍್ಯಾಪಿಡೋ ಆಟೊ ಹೊಸ ಮಾದರಿ ಆದಾಯ ಹಂಚಿಕೆ ನೀತಿ ತರುವ ಮೂಲಕ ಆಟೊಡ್ರೈವರ್​ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿವೆ. ಓಲಾ ಮತ್ತು ಊಬರ್ ರೀತಿಯ ಕಮಿಷನ್ ಮಾದರಿ ಬಿಟ್ಟು, ಸಬ್​ಸ್ಕ್ರಿಪ್ಷನ್ ಮಾದರಿಯನ್ನು ಇವೆರಡು ಹೊಸ ಸ್ಪರ್ಧಿಗಳು ಅನುಸರಿಸುತ್ತಿವೆ. ಇದೀಗ ಸ್ಪರ್ಧೆಯ ಬಿಸಿ ಪಡೆದಿರುವ ಊಬರ್ ತನ್ನ ಆಟೊ ಸರ್ವಿಸ್​ನಲ್ಲಿ ಸಬ್​​ಸ್ಕ್ರಿಪ್ಷನ್ ಮಾಡಲ್ ಅನ್ನು ಅನುಸರಿಸಲು ನಿರ್ಧರಿಸಿದೆ.

ಏನಿದು ಸಬ್​ಸ್ಕ್ರಿಪ್ಷನ್ ಮಾಡಲ್?

ಓಲಾ ಮತ್ತು ಊಬರ್ ಕಂಪನಿಗಳು ಆಟೊ ಡ್ರೈವರ್​ಗಳಿಂದ ಕಮಿಷನ್ ಪಡೆಯುತ್ತವೆ. ಪ್ರತೀ ಟ್ರಿಪ್​ಗೆ ಆ ಟ್ರಿಪ್​ನ ಮೊತ್ತಕ್ಕೆ ಅನುಗುಣವಾಗಿ ಕಮಿಷನ್ ಪಡೆಯುತ್ತವೆ. ಈ ವಿಚಾರದಲ್ಲಿ ಬಹುತೇಕ ಎಲ್ಲಾ ಆಟೊರಿಕ್ಷಾ ಚಾಲಕರು ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕವಾಗಿ ಚಾಲಕರು ಆಕ್ರೋಶ ಹೊರಹಾಕಿರುವುದುಂಟು.

ಇನ್ನೊಂದೆಡೆ ನಮ್ಮ ಯಾತ್ರಿ ಸಂಸ್ಥೆ ಈ ಕಮಿಷನ್ ಮಾರ್ಗ ಅನುಸರಿಸಲಿಲ್ಲ. ತನ್ನ ಪ್ಲಾಟ್​ಫಾರ್ಮ್ ಬಳಸಲು ರಿಕ್ಷಾ ಚಾಲಕರಿಂದ ಶುಲ್ಕ ಮಾತ್ರವೇ ಪಡೆಯುತ್ತದೆ. ರೈಡ್​ನಿಂದ ಸಿಗುವ ಎಲ್ಲಾ ಹಣವೂ ಡ್ರೈವರ್​ಗೆಯೇ ಸಲ್ಲುತ್ತದೆ. ರ‍್ಯಾಪಿಡೋ ಆಟೊ ಕೂಡ ಇದೇ ನೀತಿ ಅನುಸರಿಸುತ್ತದೆ. ಇದರಿಂದ ಚಾಲಕರಿಗೆ ಹೆಚ್ಚು ಉತ್ತೇಜನ ಸಿಕ್ಕಂತಾಗುತ್ತದೆ. ಬಹಳಷ್ಟು ಆಟೊಚಾಲಕರು ಓಲಾ ಮತ್ತು ಊಬರ್ ಬಿಟ್ಟು ಹೋಗಲು ಕಾರಣವಾಗಿದೆ.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?

ಊಬರ್​ನ ಹೊಸ ಮಾದರಿಯ ಮುಖ್ಯಾಂಶಗಳಿವು…

  • ಆಟೊಚಾಲಕರಿಂದ ಪ್ರತೀ ರೈಡ್​ಗೆ ಊಬರ್ ಕಮಿಷನ್ ಪಡೆಯುವುದಿಲ್ಲ. ಆಟೊಚಾಲಕರಿಗೆ ಊಬರ್ ಒಂದು ಪ್ಲಾಟ್​ಫಾರ್ಮ್ ರೀತಿ ಕಾರ್ಯನಿರ್ವಹಿಸುತ್ತದೆ. ಈ ಪ್ಲಾಟ್​ಫಾರ್ಮ್ ಬಳಸಲು ಚಾಲಕರಿಂದ ಶುಲ್ಕ ಪಡೆಯಲಾಗುತ್ತದೆ.
  • ಗ್ರಾಹಕರು ಡ್ರೈವರ್​ಗೆ ನೇರವಾಗಿ ಹಣ ಪಾವತಿಸಬೇಕು. ಊಬರ್ ಅಕೌಂಟ್ ಮೂಲಕ ಹಣ ಪಾವತಿ ಸೌಲಭ್ಯ ಇರುವುದಿಲ್ಲ.
  • ಗ್ರಾಹಕರು ತಮ್ಮ ಊಬರ್ ಕ್ರೆಡಿಟ್ ಮತ್ತು ಪ್ರೊಮೋಶನ್​ಗಳನ್ನು ಆಟೊ ಟ್ರಿಪ್​ಗಳಲ್ಲಿ ಬಳಸಲಾಗುವುದಿಲ್ಲ.
  • ಊಬರ್ ಒಂದು ರೈಡ್​ಗೆ ದರ ಶಿಫಾರಸು ಮಾಡುತ್ತದೆ. ಆದರೆ, ಅಂತಿಮ ಮೊತ್ತವನ್ನು ಡ್ರೈವರ್ ಮತ್ತು ಗ್ರಾಹಕರು ನಿರ್ಣಯಿಸಬಹುದು.
  • ಟ್ರಿಪ್ ದರದ ವಿಚಾರದಲ್ಲಿ ವ್ಯಾಜ್ಯವಾದರೆ ಅದರಲ್ಲಿ ಊಬರ್ ಮಧ್ಯಪ್ರವೇಶಿಸುವುದಿಲ್ಲ. ಊಬರ್​ನ ಹೊಣೆ ಕೇವಲ ಸುರಕ್ಷತೆಯದ್ದಾಗಿರುತ್ತದೆ.
  • ಡ್ರೈವರ್​ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ. ಡ್ರೈವರ್ ಮತ್ತು ಗ್ರಾಹಕರಿಗೆ ಕೊಂಡಿಯಾಗಿ ಇರುವ ಪಾತ್ರ ಊಬರ್​ನದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ