GDP growth: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್ಎ ನಿರೀಕ್ಷೆ
GDP growth rate: 2024-25ರ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ನಲ್ಲಿ ಭಾರತದ ಆರ್ಥಿಕತೆ ಶೇ. 6.4ರಷ್ಟು ಹೆಚ್ಚಬಹುದು ಎಂದು ಐಸಿಆರ್ಎ ಸಂಸ್ಥೆ ಅಂದಾಜು ಮಾಡಿದೆ. ಎರಡನೇ ಕ್ವಾರ್ಟರ್ನಲ್ಲಿ ಶೇ. 5.4ರಷ್ಟು ಮಾತ್ರವೇ ಜಿಡಿಪಿ ಹೆಚ್ಚಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಬೆಳವಣಿಗೆ ಕಾಣಬಹುದು. ಆದರೆ, ಐಸಿಆರ್ಎ ಅಂದಾಜು ಮಾಡಿರುವ ಬೆಳವಣಿಗೆ ದರ, ಆರ್ಬಿಐ ಮತ್ತು ಸರ್ಕಾರ ಮಾಡಿರುವ ಅಂದಾಜಿಗಿಂತ ಕಡಿಮೆ ಇದೆ.

ನವದೆಹಲಿ, ಫೆಬ್ರುವರಿ 18: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ (ಜುಲೈನಿಂದ ಸೆಪ್ಟೆಂಬರ್) ಜಿಡಿಪಿ ಬೆಳವಣಿಗೆ ದರ ಶೇ. 5.4ಕ್ಕೆ ಕುಂಠಿತಗೊಂಡಿತ್ತು. ಆದರೆ, ಮೂರನೇ ಕ್ವಾರ್ಟರ್ನಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಿನ ಮಟ್ಟದಲ್ಲಿ ಆಗುವ ನಿರೀಕ್ಷೆ ಇದೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಆ 3ನೇ ಕ್ವಾರ್ಟರ್ನಲ್ಲಿ ಜಿಡಿಪಿ ವೃದ್ಧಿ ದರ ಶೇ. 6.4ರಷ್ಟಿರಬಹುದು ಎಂದು ಐಸಿಆರ್ಎ ಅಂದಾಜು ಮಾಡಿದೆ. ಆಂತರಿಕ ಅನುಭೋಗ (domestic consumption) ಅನಿಶ್ಚಿತ ಮಟ್ಟದಲ್ಲಿರುವ ಹೊತ್ತಲ್ಲಿ ಜಿಡಿಪಿ ಬೆಳವಣಿಗೆ ಹೆಚ್ಚಲಿರುವುದು ಗಮನಾರ್ಹ ಸಂಗತಿ. ಐಸಿಆರ್ಎ ಪ್ರಕಾರ, ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಿದ್ದು ಇದಕ್ಕೆ ಕಾರಣವಿರಬಹುದು.
ಸರ್ಕಾರದ ಅಂದಾಜು ಪ್ರಕಾರ ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.7ರಷ್ಟು ಬೆಳೆಯಬಹುದು. ಆರ್ಬಿಐ ಮಾಡಿದ ಅಂದಾಜು ಪ್ರಕಾರ ಜಿಡಿಪಿ ದರ ಶೇ. 6.8ರಷ್ಟಿರಬಹುದು. ಆದರೆ, ಐಸಿಆರ್ಎ ವರದಿಯಲ್ಲಿ ಜಿಡಿಪಿ ಬೆಳವಣಿಗೆ ಶೇ. 6.4ರಷ್ಟು ಮಾತ್ರವೇ ಇರಬಹುದು ಎಂದು ಅಭಿಪ್ರಾಯಪಡಲಾಗಿದೆ. ಈ ಅಂದಾಜು ಸರಿಯಾಗಿದ್ದಲ್ಲಿ, ಅನುಭೋಗ ಕೊರತೆಯು ಬೆಳವಣಿಗೆಯನ್ನು ಕುಂಠಿತಗೊಳಿಸಿದ್ದಿರಬಹುದು. ಅಲ್ಲದೇ ಮೂರನೇ ಕ್ವಾರ್ಟರ್ ಅವಧಿಯಲ್ಲಿ ಚುನಾವಣೆಗಳು, ನೀತಿ ಸಂಹಿತೆ, ಬೇಸಿಗೆಯ ರಣ ಬಿಸಿಲು (heat wave) ಇವೆಲ್ಲವೂ ಕೆಲ ವಲಯಗಳ ಬೆಳವಣಿಗೆಗೆ ಹಿನ್ನಡೆ ತಂದಿರಬಹುದು ಎಂದು ಹೇಳಲಾಗುತ್ತಿದೆ.
ಐಸಿಆರ್ಎ ಕೂಡ ಇದೇ ಅಭಿಪ್ರಾಯ ಅನುಮೋದಿಸಿದೆ. ಈ ಮೂರನೇ ಕ್ವಾರ್ಟರ್ನಲ್ಲಿ ಪರೋಕ್ಷ ತೆರಿಗೆಗಳ (ಜಿಎಸ್ಟಿ ಇತ್ಯಾದಿ Indirect taxes) ಏರಿಕೆ ಪ್ರಮಾಣ ಕಡಿಮೆ ಆಗಿರುವುದು, ಸರ್ಕಾರದಿಂದ ಸಬ್ಸಿಡಿ ಹೆಚ್ಚಿದ್ದು ಇವೆಲ್ಲವೂ ಜಿಡಿಪಿ ಬೆಳವಣಿಗೆಗೆ ತಡೆಯಾಗಿರಬಹುದು ಎಂದು ಇದು ಹೇಳುತ್ತಿದೆ.
ಇದನ್ನೂ ಓದಿ: ಭಾರತ-ಅಮೆರಿಕದಿಂದ ಸದ್ಯದಲ್ಲೇ ದೊಡ್ಡ ನಡೆ..? ಚೀನಾ ಸ್ಥಾನಕ್ಕೆ ಭಾರತವನ್ನು ಕೂರಿಸುವ ಪ್ರಯತ್ನವಾ?
ಇದೇ ವೇಳೆ, ಸರ್ಕಾರದಿಂದ ಬಂಡವಾಳ ವೆಚ್ಚ (govt expenditure) ಹೆಚ್ಚಾಗಿರುವುದು, ಸರ್ವಿಸ್ ಸೆಕ್ಟರ್ನ ರಫ್ತು ಹೆಚ್ಚಾಗಿರುವುದು, ಪ್ರಮುಖ ಮುಂಗಾರು ಬೆಳೆಗಳು ಉತ್ತಮ ಫಸಲು ಕಂಡಿದ್ದು, ಸರಕು ರಫ್ತಿನಲ್ಲೂ ಹೆಚ್ಚಳ ಆಗಿದ್ದು ಈ ಅಂಶಗಳು ಆರ್ಥಿಕತೆಗೆ ಹೆಚ್ಚಿನ ಹಿನ್ನಡೆಯಾಗಲು ಬಿಟ್ಟಿಲ್ಲದೇ ಇರಬಹುದು ಎಂದು ಐಸಿಆರ್ಎನ ಆರ್ಥಿಕ ತಜ್ಞರಾದ ಅದಿತಿ ನಾಯರ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ