ಆಧಾರ್ ಡೆಡ್​ಲೈನ್ ವಿಸ್ತರಣೆ: 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆ ಅಪ್​ಡೇಟ್ ಮಾಡಲು ಅವಕಾಶ

|

Updated on: Dec 13, 2023 | 11:52 AM

Aadhaar Card Free document update: ಮೈ ಆಧಾರ್ ಪೋರ್ಟಲ್​ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆಗಳನ್ನು ಅಪ್​ಡೇಟ್ ಮಾಡುವ ಗಡುವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ.

ಆಧಾರ್ ಡೆಡ್​ಲೈನ್ ವಿಸ್ತರಣೆ: 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆ ಅಪ್​ಡೇಟ್ ಮಾಡಲು ಅವಕಾಶ
ಆಧಾರ್​
Follow us on

ನವದೆಹಲಿ, ಡಿಸೆಂಬರ್ 13: ಆಧಾರ್ ಕಾರ್ಡ್ ದಾಖಲೆಗಳನ್ನು ಉಚಿತವಾಗಿ ಅಪ್​ಡೇಟ್ ಮಾಡಲು (Free Aadhaar update) ಡಿಸೆಂಬರ್ 14ರವರೆಗೆ ಇದ್ದ ಅವಕಾಶವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ದಾಖಲೆ ಅಪ್​ಡೇಟ್ ಮಾಡಬಹುದು ಎಂದು ಯುಐಡಿಎಐ ಸಂಸ್ಥೆ (UIDAI) ತಿಳಿಸಿದೆ. ಇದರೊಂದಿಗೆ ಎರಡು ಬಾರಿ ಅವಧಿ ವಿಸ್ತರಣೆ (Deadline extension) ಮಾಡಿದಂತಾಗಿದೆ. ಈ ಹಿಂದೆ 2023ರ ಸೆಪ್ಟೆಂಬರ್ 14ಕ್ಕೆ ಡೆಡ್​ಲೈನ್ ಇತ್ತು. ಅದನ್ನು ಡಿಸೆಂಬರ್ 14ಕ್ಕೆ ವಿಸ್ತರಿಸಲಾಯಿತು. ಈಗ ಡಿಸೆಂಬರ್ 15ರಿಂದ ಮಾರ್ಚ್ 14ರವರೆಗೆ ಗಡುವು ಹೆಚ್ಚಿಸಲಾಗಿದೆ.

‘ಹೆಚ್ಚೆಚ್ಚು ಜನರು ತಮ್ಮ ಆಧಾರ್​ನಲ್ಲಿರುವ ದಾಖಲೆಗಳನ್ನು ಅಪ್​ಡೇಟ್ ಮಾಡಲು ಉತ್ತೇಜಿಸುವ ಸಲುವಾಗಿ ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ದಾಖಲೆ ಅಪ್​ಡೇಟ್ ಮಾಡಲು 2023ರ ಡಿಸೆಂಬರ್ 14ರವರೆಗೆ ಅವಕಾಶ ನೀಡಲಾಗಿತ್ತು. ಜನರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಮೂರು ತಿಂಗಳು ಇದನ್ನು ವಿಸ್ತರಿಸಲಾಗಿದೆ. 2023ರ ಡಿಸೆಂಬರ್ 15ರಿಂದ 2024ರ ಮಾರ್ಚ್ 14ರವರೆಗೆ ಈ ಸೌಲಭ್ಯ ಇರುತ್ತದೆ,’ ಎಂದು ಯುಐಡಿಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Garlic Price: ದುಬಾರಿ ದುನಿಯಾ…! ಟೊಮೆಟೋ, ಈರುಳ್ಳಿ ಆಯ್ತು ಈಗ ಜನರ ಕಣ್ಣೀರು ಸುರಿಸುವ ಸರದಿ ಬೆಳ್ಳುಳ್ಳಿಯದ್ದು

ಮೈ ಅಧಾರ್​ನ ಅಧಿಕೃತ ಪೋರ್ಟಲ್​ನಲ್ಲಿ ಮಾತ್ರ ಈ ಉಚಿತ ಸೇವೆ ಲಭ್ಯ ಇರುತ್ತದೆ. ವಿವಿಧ ಕಡೆ ಇರುವ ಆಧಾರ್ ಕೇಂದ್ರಗಳಲ್ಲೂ ಆಧಾರ್ ಅಪ್​ಡೇಟ್ ಮಾಡಬಹುದು. ಆದರೆ, ಅದಕ್ಕೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಮೈ ಆಧಾರ್​ನಲ್ಲಿ ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಬಹುದು. ಆ ಬಳಿಕ ಪೋರ್ಟಲ್​ನಲ್ಲೂ ಕೂಡ ಶುಲ್ಕ ಪಾವತಿಸಿಯೇ ಅಪ್​ಡೇಟ್ ಮಾಡಬೇಕಾಗುತ್ತದೆ.

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅಪ್​ಡೇಟ್ ಮಾಡದೇ ಇರುವ ನಿವಾಸಿಗಳು ತಮ್ಮ ಹೊಸ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್​ನಲ್ಲಿ ಅಪ್​ಡೇಟ್ ಮಾಡಬೇಕೆಂದು ಯುಐಡಿಎಐ ಶಿಫಾರಸು ಮಾಡಿದೆ. ಇದರಿಂದ ಆಧಾರ್ ಅಥೆಂಟಿಕೇಶನ್ ಕಾರ್ಯ ಸುಲಭವಾಗುತ್ತದೆ.

ಇದನ್ನೂ ಓದಿ: ಎಫ್​ಡಿಯಿಂದ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯವೇ? ನಿಶ್ಚಿತ ಠೇವಣಿ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಆಧಾರ್ ದಾಖಲೆ ಅಪ್​ಡೇಟ್ ಮಾಡುವುದು ಹೇಗೆ?

  • ಮೈ ಆಧಾರ್ ಪೋರ್ಟಲ್​ಗೆ ಲಾಗಿನ್ ಆಗಿ: myaadhaar.uidai.gov.in/
  • ಡಾಕ್ಯುಮೆಂಟ್ ಅಪ್​ಡೇಟ್ ಎಂಬ ಆಯ್ಕೆ ಆರಿಸಿ. ಅದರಲ್ಲಿ ನಿಮ್ಮ ಈಗಿನ ವಿವರ ಕಾಣಬಹುದು.
  • ಈ ವಿವರವನ್ನು ಪರಿಶೀಲಿಸಿರಿ. ಬಳಿಕ ಪಕ್ಕದಲ್ಲಿರುವ ಹೈಪರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಡ್ರಾಪ್​ಡೌನ್ ಲಿಸ್ಟ್​ನಲ್ಲಿ ಪ್ರೂಫ್ ಆಫ್ ಐಡೆಂಟಿಟಿ ಅಂಡ್ ಪ್ರೂಫ್ ಆಫ್ ಅಡ್ರೆಸ್ ಡಾಕ್ಯುಮೆಂಟ್ ಅನ್ನು ಆಯ್ಕೆಮಾಡಿ.
  • ಸ್ಕ್ಯಾನ್ ಮಾಡಿದ ದಾಖಲೆ ಪ್ರತಿಗಳನ್ನು ಅಪ್​ಲೋಡ್ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ