Ujjivan Small Finance Bank: 560 ದಿನಗಳ ಠೇವಣಿಗೆ ಶೇ 8.20ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್

|

Updated on: Feb 13, 2023 | 1:13 PM

ಪ್ಲಾನಿಟಾ ಎಫ್​ಡಿ ಬಡ್ಡಿ ದರ 1.5 ಲಕ್ಷ ರೂ.ಗಳಿಂದ ಮೇಲ್ಪಟ್ಟ ಹಾಗೂ 2 ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತದ ಠೇವಣಿಗೆ ಮಾತ್ರ ಅನ್ವಯವಾಗಲಿದೆ. ಆದಾಗ್ಯೂ, ಪ್ಲಾಟಿನಾ ಠೇವಣಿಗಳು ಹಿರಿಯ ನಾಗರಿಕರ ಹೆಚ್ಚುವರಿ ಬಡ್ಡಿ ದರ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

Ujjivan Small Finance Bank: 560 ದಿನಗಳ ಠೇವಣಿಗೆ ಶೇ 8.20ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್
ಸಾಂದರ್ಭಿಕ ಚಿತ್ರ
Follow us on

ಇದೀಗ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Ujjivan Small Finance Bank) ಸಾಮಾನ್ಯ ಠೇವಣಿದಾರರಿಗೂ ಶೇ 8.20ರ ವರೆಗೆ ಬಡ್ಡಿ ನೀಡುತ್ತಿದೆ. ದೇಶೀಯ ಪ್ಲಾಟಿನಾ ಎಫ್​ಡಿ, ಎನ್​ಆರ್​​ಒ ಎಫ್​ಡಿಗಳು ಹಾಗೂ ಎನ್​​ಆರ್​​ಇ ಟ್ರಾನ್ಸಾಕ್ಷನ್​​ಗಳ ಮೇಲೆ ಬಡ್ಡಿ ಅನ್ವಯವಾಗಲಿದೆ. ಹಿರಿಯ ನಾಗರಿಕರಲ್ಲದವರಿಗೂ ಬ್ಯಾಂಕ್ ಪ್ಲಾಟಿನಾ ಎಫ್​ಡಿಗಳ (Platina FDs) ಮೂಲಕ ಗರಿಷ್ಠ ಶೇ 8.20ರ ಬಡ್ಡಿ ನೀಡುತ್ತಿದೆ. 12 ತಿಂಗಳುಗಳಿಂದ 60 ತಿಂಗಳ ನಡುವಣ ಮೆಚ್ಯೂರಿಟಿ ಅವಧಿಯ ಠೇವಣಿಗಳಿಗೆ ಬ್ಯಾಂಕ್ ಶೇ 6.70ಯಿಂದ ಶೇ 7.40 ವರೆಗೆ ಬಡ್ಡಿ ನೀಡುತ್ತಿದೆ. 80 ವಾರಗಳ (560) ದಿನಗಳ ಮೆಚ್ಯೂರಿಟಿ ಅವಧಿಯ ಪ್ಲಾನಿಟಾ ಎಫ್​ಡಿಗಳಿಗೆ ಗರಿಷ್ಠ ಶೇ 8.20ರ ಬಡ್ಡಿ ಇದೆ.

ಪ್ಲಾನಿಟಾ ಎಫ್​ಡಿ ಬಡ್ಡಿ ದರ 1.5 ಲಕ್ಷ ರೂ.ಗಳಿಂದ ಮೇಲ್ಪಟ್ಟ ಹಾಗೂ 2 ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತದ ಠೇವಣಿಗೆ ಮಾತ್ರ ಅನ್ವಯವಾಗಲಿದೆ. ಆದಾಗ್ಯೂ, ಪ್ಲಾಟಿನಾ ಠೇವಣಿಗಳು ಹಿರಿಯ ನಾಗರಿಕರ ಹೆಚ್ಚುವರಿ ಬಡ್ಡಿ ದರ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ದೇಶೀಯ ಎನ್​ಆರ್​ಒ ಎಫ್​ಡಿಗಳಿಗೆ ಮತ್ತು ಸಂಪೂರ್ಣ ನಿಧಿ ಠೇವಣಿಗಳಿಗೆ ಬ್ಯಾಂಕ್ ಶೇ 3.75ರಿಂದ ಶೇ 6.50 ವರೆಗೆ ಬಡ್ಡಿ ನೀಡುತ್ತಿದೆ. ಇದು 7ರಿಂದ 120 ತಿಂಗಳ ಅವಧಿಯ ಠೇವಣಿಗಳ ಬಡ್ಡಿ ದರವಾಗಿದೆ. 7 ದಿನಗಳಿಂದ 29 ದಿನಗಳ ಅವಧಿಗೆ ಮೆಚ್ಯೂರ್ ಆಗುವ ಠೇವಣಿಗಳಿಗೆ ಶೇ 3.75 ಹಾಗೂ 30ರಿಂದ 89 ದಿನಗಳ ಅವಧಿಯ ಠೇವಣಿಗಳಿಗೆ ಶೇ 4.25 ರ ಬಡ್ಡಿ ನಿಗದಿಪಡಿಸಲಾಗಿದೆ. 90ರಿಂದ 179 ದಿನಗಳ ಅವಧಿಯ ಠೇವಣಿಗೆ ಶೇ 4.75, 6ರಿಂದ 9 ತಿಂಗಳ ಅವಧಿಯ ಠೇವಣಿಗೆ ಶೇ 5.50 ಬಡ್ಡಿ ದರವಿದೆ. 9 ತಿಂಗಳು 1 ದಿನದ ನಂತರ 12 ತಿಂಗಳ ಒಳಗೆ ಮೆಚ್ಯೂರ್ ಆಗುವ ಠೇವಣಿಗೆ ಶೇ 6.50 ಬಡ್ಡಿ ನೀಡಲಾಗುತ್ತಿದೆ. 12 ತಿಂಗಳು ಮೇಲ್ಪಟ್ಟ, 559 ದಿನಗಳ ಅವಧಿಯ ಠೇವಣಿಗಳಿಗೆ ಶೇ 7.50 ಬಡ್ಡಿ ದರವಿದೆ.

ಇದನ್ನೂ ಓದಿ: FD Interest Rate: ಎಫ್​ಡಿ ಬಡ್ಡಿ ದರ ಹೆಚ್ಚಿಸಿದ ಆ್ಯಕ್ಸಿಸ್ ಬ್ಯಾಂಕ್; ಇಲ್ಲಿದೆ ವಿವರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿ 8ರಂದು ಹಣಕಾಸು ನೀತಿ ಸಮಿತಿ ವರದಿ ಪ್ರಕಟಿಸಿದ್ದು, ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿತ್ತು. ಇದರ ಬೆನ್ನಲ್ಲೇ ಬ್ಯಾಂಕ್​ಗಳು ಸಾಲದ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಲು ಆರಂಭಿಸಿವೆ. ಮೊದಲಾಗಿ ಆ್ಯಕ್ಸಿಸ್ ಬ್ಯಾಂಕ್ ಶುಕ್ರವಾರ ಸ್ಥಿರ ಠೇವಣಿ ಬಡ್ಡಿ ದರ ಹೆಚ್ಚಳ ಮಾಡಿತ್ತು. ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿ ಬಡ್ಡಿ ದರವನ್ನು ಹೆಚ್ಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ