Nirmala Sitharaman: ಸಚಿವ ಪ್ರಲ್ಹಾದ್​ ಜೋಶಿ ಉಡುಗೊರೆ ನೀಡಿದ್ದ ಕೆಂಪು ಸೀರೆ ಉಟ್ಟು ಬಜೆಟ್ ಮಂಡಿಸಲು ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷ ಐದನೇ ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ

Follow us
ನಯನಾ ರಾಜೀವ್
| Updated By: Digi Tech Desk

Updated on:Feb 01, 2023 | 1:57 PM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷ ಐದನೇ ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಇಡೀ ದೇಶವು ಬಜೆಟ್ (ಬಜೆಟ್ 2023) ಮೇಲೆ ಕಣ್ಣಿಟ್ಟಿದೆ. ಆದರೆ ಇದರೊಂದಿಗೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಕೂಡ ಜನರ ಗಮನ ಸೆಳೆದಿದೆ. 2019 ರ ಬಜೆಟ್ ದಿನದಿಂದ 2022 ರವರೆಗೆ ನಿರ್ಮಲಾ ಸೀತಾರಾಮನ್ ಅವರ ಸೀರೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ.  ಹೆಚ್ಚಾಗಿ ಅವರು ಸೀರೆಗಳ ವಿಷಯದಲ್ಲಿ ಕೈಮಗ್ಗವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ, ಅವರು ಯಾವಾಗಲೂ ಸ್ಥಳೀಯ ಕುಶಲಕರ್ಮಿಗಳ ಸುಂದರವಾದ, ಸೀರೆಯನ್ನು ಸಂಸತ್ತಿನಲ್ಲಿ ಧರಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಹೀಗಿರುವಾಗ ಈ ವರ್ಷ ಕೇಂದ್ರ ಬಜೆಟ್ 2023 ಮಂಡಿಸಲು ವಿತ್ತ ಸಚಿವರು ಯಾವ ಸೀರೆ ಉಡುತ್ತಾರೆ ಎಂಬ ಕುತೂಹಲವೂ ಮೂಡಿತ್ತು.

ನಿರ್ಮಲಾ ಸೀತಾಮಾನ್ ಸೀರೆಯು ಕಾಟನ್ ಆಗಿದ್ದು ಅದರಲ್ಲಿ ರೇಷ್ಮೆ ಮಿಶ್ರಿತವಾಗಿದೆ. ಕಪ್ಪು ಬಾರ್ಡರ್ ಇದ್ದು, ಗೋಲ್ಡನ್ ಬಣ್ಣ ಮಿಶ್ರಿತವಾಗಿದೆ. ನಿರ್ಮಲಾ ಸೀತಾರಾಮನ್ ಉಟ್ಟಿದ್ದು ಕರ್ನಾಟಕದ ನವಲಗುಂದ ಕಸೂತಿ ಕಲೆಯ ಸೀರೆ, ಧಾರವಾಡ ಜಿಲ್ಲೆಯ ನವಲಗುಂದದ ಪ್ರಸಿದ್ಧ ಕಸೂತಿ ಕಲೆ ಧಾರವಾಡದ ಆರತಿ ಕ್ರಾಫ್ಟ್ಸ್‌ನಲ್ಲಿ ತಯಾರಾಗಿರುವ ಸೀರೆಯಾಗಿದ್ದು, ಕೈಮಗ್ಗದಲ್ಲಿ ನೇಯ್ದ ಇಳಕಲ್ಲನ ಸೀರೆಗೆ ನವಲಗುಂದ ಕಸೂತಿ ಇದೆ. ಚಿಕ್ಕಪರಾಸ್‌ ದಡಿ, ತೇರು ಗೋಪುರ, ನವಿಲು, ಕಮಲದ ಕಸೂತಿ ಹೊಂದಿರುವ ಸೀರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉಡುಗೊರೆಯಾಗಿ ನೀಡಿದ್ದ ಸೀರೆ ಅದಾಗಿದೆ.

2019 ರಲ್ಲಿ, ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು. ಆ ಸಮಯದಲ್ಲಿ ಅವರು ಕಡು ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು ಮತ್ತು ಈ ಸೀರೆಯ ಮೇಲೆ ಗೋಲ್ಡನ್ ಬಾರ್ಡರ್ ಕೂಡ ಮಾಡಲಾಗಿತ್ತು. ಅದೇ ವರ್ಷದಲ್ಲಿ, ಸೀತಾರಾಮನ್ ಚರ್ಮದ ಚೀಲದ ಬದಲಿಗೆ ಲೆಡ್ಜರ್ ಅನ್ನು ಬಳಸಿದ್ದರು.

2020 ರಲ್ಲಿ, ಹಣಕಾಸು ಸಚಿವರ ಸೀರೆಯು ಉತ್ತಮ ಚರ್ಚೆಯಲ್ಲಿತ್ತು. ಅವಳು ಹಳದಿ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಅದರ ಅಂಚಿನಲ್ಲಿ ಚಿನ್ನದ ಬಣ್ಣದ ಬಾರ್ಡರ್ ಇತ್ತು. ಆ ವರ್ಷ ಜನವರಿ 29 ರಂದು ಬಸಂತ್ ಪಂಚಮಿಯನ್ನು ಆಚರಿಸಲಾಗಿತ್ತು. ಬಸಂತ್ ಪಂಚಮಿಯ ಎರಡು ದಿನಗಳ ನಂತರ, ಹಣಕಾಸು ಸಚಿವರು ಹಳದಿ ಸೀರೆಯಲ್ಲಿ ಬಜೆಟ್ ಮಂಡಿಸಿದಾಗ, ಅವರ ನೋಟವು ಗಮನ ಹೆಚ್ಚು ಗಮನಸೆಳೆದಿತ್ತು. ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅದೃಷ್ಟದ ಬಣ್ಣವಾಗಿರುತ್ತದೆ. ನಿರ್ಮಮಾ ಸೀತಾರಾಮನ್‌ ಅವರಿಗೆ ಕೆಂಪು ಅದೃಷ್ಟದ ಬಣ್ಣವೆಂದು ಕಾಣುತ್ತದೆ. ಅವರು ಬಜೆಟ್‌ ಮಂಡಿಸಿದಾಗೆಲ್ಲಾ ಕೆಂಪು ಹೈಲೈಟ್‌ ಆಗಿರುವುದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ ಕೆಲವೊಂದು ಮಹತ್ವದ ದಿನಗಳಲ್ಲಿ ಅವರು ಕೆಂಪು ಬಣ್ಣ ಇರುವ ಸೀರೆ ಧರಿಸಿರುತ್ತಾರೆ.

2021 ರಲ್ಲಿ, ನಿರ್ಮಲಾ ಸೀತಾರಾಮನ್ ಅವರು ಬಂಗಾಳದ ಪ್ರಸಿದ್ಧ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಬಿಳಿ ಬಣ್ಣದ್ದಾಗಿತ್ತು ಮತ್ತು ಕೆಂಪು ಮುದ್ರಿತ ಅಂಚುಗಳನ್ನು ಹೊಂದಿತ್ತು. ಬಂಗಾಳದ ಲಾಲ್ ಪಾಡ್ ಸೀರೆಯು ವಿಶೇಷವಾದ ಸೀರೆಯಾಗಿದೆ.

ಸಾಮಾನ್ಯವಾಗಿ ಈ ಸೀರೆಯು ಬಿಳಿ ಬಣ್ಣದಲ್ಲಿರುತ್ತದೆ, ಅದರ ಮೇಲೆ ಅಗಲವಾದ ಕೆಂಪು ಅಂಚುಗಳು ವಿಭಿನ್ನ ಲುಕ್ ನೀಡುತ್ತದೆ. 2022 ರ ಬಜೆಟ್ ಅನ್ನು ಮಂಡಿಸುವಾಗ, ಅವರು ಕಾಫಿ ಬಣ್ಣದ ಸೀರೆಯನ್ನು ಅದರ ಮೇಲೆ ಚಿನ್ನದ ಗೆರೆಗಳನ್ನು ಧರಿಸಿದ್ದರು. ಈ ಸೀರೆಯನ್ನು ಬೊಮ್ಕೈ ಅಥವಾ ಸೋನ್ಪುರಿ ಸೀರೆ ಎಂದೂ ಕರೆಯುತ್ತಾರೆ. ಅದು ಕೈಮಗ್ಗದ ರೇಷ್ಮೆ ಸೀರೆಯಾಗಿದ್ದು, ಕಡು ಮೆರೂನ್ ಬಣ್ಣದ ಪಲ್ಲ ಮತ್ತು ಕುಪ್ಪಸ. ಈ ಸೀರೆ ಡಿಸೆಂಟ್ ಲುಕ್ ನೀಡುತ್ತಿತ್ತು.

ಕೇಂದ್ರ ಬಜೆಟ್ 2023 ರ ದಿನದಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಸೀರೆಯನ್ನು ಧರಿಸಿದ್ದಾರೆ. ಕಪ್ಪು ಬಾರ್ಡರ್ ಹೊಂದಿದೆ. ಸೀತಾರಾಮನ್ ಕೈಯಲ್ಲಿ ಬಜೆಟ್ ಬ್ಯಾಗ್ ಅಥವಾ ಡಿಜಿಟಲ್ ಲೆಡ್ಜರ್ ಇತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:55 am, Wed, 1 February 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್