Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

ಕೇಂದ್ರ ಬಜೆಟ್ 2026 ನೇರ ಪ್ರಸಾರ ಲೈವ್: ಕಳೆದ ಬಾರಿಯ ಬಜೆಟ್​ನಲ್ಲಿ (2025-26) ಸರ್ಕಾರವು ಆದಾಯ ತೆರಿಗೆಯನ್ನು ಸಾಕಷ್ಟು ಇಳಿಕೆ ಮಾಡಿ ಮಧ್ಯಮ ವರ್ಗದವರಿಂದ ದೊಡ್ಡ ಹೊರೆ ಇಳಿಸಿತ್ತು. ನಂತರ ಜಿಎಸ್​ಟಿ ದರಗಳನ್ನೂ ಕಡಿಮೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್​ನಲ್ಲಿ (2026-27) ನಿರೀಕ್ಷೆಗಳು ಬೆಟ್ಟದಷ್ಟು ಹೆಚ್ಚಿವೆ. 2026ರ ಫೆಬ್ರುವರಿ 1ರಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭಿಸುತ್ತಾರೆ. ಇದರ ಲೈವ್ ಪ್ರಸಾರ, ಲೈವ್ ಅಪ್​ಡೇಟ್​ಗಳು ಎಲ್ಲಿ ಸಿಗುತ್ತವೆ ಎನ್ನುವ ಮಾಹಿತಿ ಇಲ್ಲಿದೆ.

Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ
ನಿರ್ಮಲಾ ಸೀತಾರಾಮನ್

Updated on: Jan 30, 2026 | 5:40 PM

ಯೂನಿಯನ್ ಬಜೆಟ್ 2026-27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರುವರಿ 1, ಭಾನುವಾರದಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 11ಗಂಟೆಗೆ ಸಂಸತ್​ನ ಜಂಟಿ ಅಧಿವೇಶನದಲ್ಲಿ ಸಚಿವೆ ಬಜೆಟ್ ಮಂಡನೆ ಆರಂಭಿಸುತ್ತಾರೆ. ಬಜೆಟ್ ಭಾಷಣ ಮುಗಿಯಲು ಮಧ್ಯಾಹ್ನ ಎರಡು ಗಂಟೆ ದಾಟಬಹುದು. ಇದು ಭಾರತದಲ್ಲಿ ಮಂಡಿಲಾಗುವ 88ನೇ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದೂ ಸತತವಾಗಿ. ಸತತ 9 ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಅವರದ್ದಾಗುತ್ತದೆ.

ಈ ಕೆಳಗಿನ ಯೂಟ್ಯೂಬ್​ನಲ್ಲಿ ಫೆಬ್ರುವರಿ 1ರಂದು ಬಜೆಟ್ ಭಾಷಣದ ಲೈವ್ ವೀಕ್ಷಿಸಬಹುದು

ಟ್ರಂಫ್ ಅವರ ಟ್ಯಾರಿಫ್ ಪ್ರತಾಪ, ವಿವಿಧ ದೇಶಗಳ ಮೇಲೆ ಅಮೆರಿಕದ ಧಮಕಿ, ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿರುವುದು, ಇವೇ ಮುಂತಾದ ಜಾಗತಿಕವಾಗಿ ಅನಿಶ್ಚಿತ ವಾತಾವರಣ ಒಂದೆಡೆ ಇದೆ. ಹಾಗೆಯೇ, ಯೂರೋಪ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದು, ಹಣದುಬ್ಬರಕ್ಕೆ ಕಡಿವಾಣ ಬಿದ್ದಿರುವುದು ಇತ್ಯಾದಿ ಸಕಾರಾತ್ಮಕ ಅಂಶಗಳು ಇನ್ನೊಂದೆಡೆ ಇವೆ. ಇಂಥ ಮಿಶ್ರ ಸನ್ನಿವೇಶದಲ್ಲಿ ಬಜೆಟ್ ಮಂಡನೆ ಆಗುತ್ತಿದ್ದು, ನಿರೀಕ್ಷೆಗಳು ಹಲವಿವೆ.

ಬಜೆಟ್ ಭಾಷಣ ಎಲ್ಲಿ ವೀಕ್ಷಿಸುವುದು?

2026ರ ಫೆಬ್ರುವರಿ 1, ಭಾನುವಾರದಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಆರಂಭವಾಗುತ್ತದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ನೇರ ಪ್ರಸಾರ ಇರುತ್ತದೆ. ಟಿವಿ9 ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಟಿವಿ9 ಕನ್ನಡ ಯೂಟ್ಯೂಬ್ ಮತ್ತು ವೆಬ್​ಸೈಟ್​ಗಳಲ್ಲೂ ಬಜೆಟ್ ಭಾಷಣದ ನೇರ ಪ್ರಸಾರ ವೀಕ್ಷಿಸಬಹುದು. ವೆಬ್​ಸೈಟ್​ನಲ್ಲಿ ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಲೈವ್ ಬ್ಲಾಗ್ ಕೂಡ ಇರುತ್ತದೆ. ಬಜೆಟ್​ನ ಇಂಚಿಂಚೂ ಮಾಹಿತಿಯನ್ನು ಲೈವ್ ಬ್ಲಾಗ್​ನಲ್ಲಿ ಕಾಣಬಹುದು.

ಬಜೆಟ್ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಜೆಟ್ ಪ್ರತಿ ಡೌನ್​ಲೋಡ್ ಮಾಡುವುದು

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ಕೂಡಲೇ ಅದರ ಪ್ರತಿಯು ಆನ್​ಲೈನ್​ನಲ್ಲಿ ಲಭ್ಯವಾಗಿರುತ್ತದೆ. ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್​ವರೆಗೆ ವಿವಿಧ ಸಂಬಂಧಿತ ದಾಖಲೆಗಳು ಆನ್​ಲೈನ್​ನಲ್ಲೇ ದೊರಕುತ್ತವೆ. ಅದಕ್ಕೆಂದೇ ರೂಪಿಸಲಾಗಿರುವ indiabudget.gov.in ವೆಬ್​ಸೈಟ್​ನಲ್ಲಿ ಈ ದಾಖಲೆಗಳನ್ನು ನೋಡಬಹುದು, ಮಾತ್ರವಲ್ಲ, ಡೌನ್​ಲೋಡ್ ಕೂಡ ಮಾಡಬಹುದು. ಬಜೆಟ್ ಪ್ರತಿಯು ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Fri, 30 January 26