ಯುಪಿಐ, ವ್ಯಾಲಟ್ ಮತ್ತು ಲೈಟ್​ಗಳ ಮಧ್ಯೆ ಏನು ವ್ಯತ್ಯಾಸ? ಬ್ಯಾಂಕ್ ಖಾತೆಯಿಂದ ಎಷ್ಟು ಯುಪಿಐ ವಹಿವಾಟು ಸಾಧ್ಯ?

UPI Lite benefits: ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್. ಎರಡು ಬ್ಯಾಂಕ್ ಖಾತೆಗಳ ಮಧ್ಯೆ ರಿಯಲ್​ಟೈಮ್​ನಲ್ಲಿ ಹಣದ ವರ್ಗಾವಣೆ ಮಾಡಬಹುದು ಈ ಸಿಸ್ಟಂನಿಂದ. ಪ್ರತಿಯೊಂದು ಬ್ಯಾಂಕ್ ಖಾತೆಗೂ ಪ್ರತ್ಯೇಕ ಯುಪಿಐ ಐಡಿ ನೀಡಲಾಗುತ್ತಿದ್ದು, ಈ ಐಡಿ ಮೂಲಕ ಹಣದ ವರ್ಗಾವಣೆ ಮಾಡಲಾಗುತ್ತದೆ. ಸಣ್ಣ ವಹಿವಾಟುಗಳನ್ನು ನಡೆಸಲು ಅನುಕೂಲವಾಗುವಂತೆ ಯುಪಿಐ ಲೈಟ್ ಅನ್ನು ರೂಪಿಸಲಾಗಿದೆ.

ಯುಪಿಐ, ವ್ಯಾಲಟ್ ಮತ್ತು ಲೈಟ್​ಗಳ ಮಧ್ಯೆ ಏನು ವ್ಯತ್ಯಾಸ? ಬ್ಯಾಂಕ್ ಖಾತೆಯಿಂದ ಎಷ್ಟು ಯುಪಿಐ ವಹಿವಾಟು ಸಾಧ್ಯ?
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 03, 2023 | 5:51 PM

ಯುಪಿಐ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಸಿಸ್ಟಂ (UPI- unified payment interface) ಎನಿಸಿದೆ. ಭಾರತದಲ್ಲಿ ಅತಿಹೆಚ್ಚು ಹಣದ ವಹಿವಾಟು ಆಗುವುದು ಯುಪಿಐ ಮೂಲಕವೇ. ಯುಪಿಐ ರೂಪಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCL) ಆಗಾಗ್ಗೆ ಹೊಸ ಫೀಚರ್​ಗಳನ್ನು ಅನಾವರಣಗೊಳಿಸುತ್ತದೆ. ಇಂಥ ಕೆಲ ವಿಶೇಷ ವ್ಯವಸ್ಥೆ ಯುಪಿಐ ಲೈಟ್. ಸಣ್ಣ ವಹಿವಾಟುಗಳನ್ನು ನಡೆಸಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಇದು ಯುಪಿಐ ಪೇಮೆಂಟ್ ಪ್ಲಾಟ್​ಫಾರ್ಮ್​ನಲ್ಲಿ ಇರುವ ವ್ಯಾಲಟ್ ರೀತಿಯಲ್ಲಿ ಯುಪಿಐ ಲೈಟ್ ಕಾರ್ಯನಿರ್ವಹಿಸುತ್ತದೆ.

ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್. ಎರಡು ಬ್ಯಾಂಕ್ ಖಾತೆಗಳ ಮಧ್ಯೆ ರಿಯಲ್​ಟೈಮ್​ನಲ್ಲಿ ಹಣದ ವರ್ಗಾವಣೆ ಮಾಡಬಹುದು ಈ ಸಿಸ್ಟಂನಿಂದ. ಪ್ರತಿಯೊಂದು ಬ್ಯಾಂಕ್ ಖಾತೆಗೂ ಪ್ರತ್ಯೇಕ ಯುಪಿಐ ಐಡಿ ನೀಡಲಾಗುತ್ತಿದ್ದು, ಈ ಐಡಿ ಮೂಲಕ ಹಣದ ವರ್ಗಾವಣೆ ಮಾಡಲಾಗುತ್ತದೆ.

ಇನ್ನು, ಯುಪಿಐ ಲೈಟ್ ವ್ಯಾಲಟ್ ಆ್ಯಪ್​ಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಪೇಟಿಎಂ, ಫೋನ್ ಪೇನಲ್ಲಿರುವ ವ್ಯಾಲಟ್​ಗಳಲ್ಲಿ ಹಣ ತುಂಬಿಸಿದರೆ ಹಣ ವಹಿವಾಟು ನಡೆಸುವಾಗ ಬ್ಯಾಂಕ್ ಖಾತೆಯನ್ನು ಮುಟ್ಟುವ ಅವಶ್ಯಕತೆ ಇರುವುದಿಲ್ಲ. ವ್ಯಾಲಟ್​ನಲ್ಲಿರುವ ಹಣವನ್ನು ನೇರವಾಗಿ ಬಳಸಬಹುದು. ಪ್ರತ್ಯೇಕವಾಗಿ ಪಿನ್ ನಮೂದಿಸುವ ಅಗತ್ಯ ಇರುವುದಿಲ್ಲ. ಯುಪಿಐ ಲೈಟ್ ಬಹುತೇಕ ಇದೇ ರೀತಿಯಲ್ಲಿ ಕಾರ್ಯವಹಿಸುತ್ತದೆ.

ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಯುಪಿಐ ವ್ಯಾಲಟ್​ಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಆದರೆ, ಯುಪಿಐ ಲೈಟ್​ನಲ್ಲಿ 4,000 ರೂಗಿಂತ ಹೆಚ್ಚು ಇರುವಂತಿಲ್ಲ. 200 ರೂಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ಲೈಟ್ ಮೂಲಕ ಮಾಡಲು ಆಗುವುದಿಲ್ಲ.

ಬ್ಯಾಂಕ್ ಖಾತೆಯಿಂದ ದಿನಕ್ಕೆ ಗರಿಷ್ಠ 20 ಯುಪಿಐ ಟ್ರಾನ್ಸಾಕ್ಷನ್ ಮಾತ್ರ ಸಾಧ್ಯ

ಯುಪಿಐ ಮೂಲಕ ಒಂದು ಬ್ಯಾಂಕ್ ಖಾತೆಯಿಂದ ನೀವು ದಿನಕ್ಕೆ 2 ಲಕ್ಷ ರೂವರೆಗೆ ಮಾತ್ರವೇ ಹಣ ರವಾನೆ ಮಾಡಬಹುದು. 24 ಗಂಟೆಯಲ್ಲಿ ಬ್ಯಾಂಕ್ ಖಾತೆ ಬಳಸಿ 20 ಯುಪಿಐ ಟ್ರಾನ್ಸಾಕ್ಷನ್ ಮಾತ್ರವೇ ನಡೆಸಬಹುದು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಕೊಡುತ್ತಾ ಆರ್​ಬಿಐ?; ಸ್ಟಡಿ ಲೋನ್ ನಿಯಮವೊಂದರ ಬದಲಾವಣೆಗೆ ಬ್ಯಾಂಕುಗಳ ಪ್ರಸ್ತಾಪಕ್ಕೆ ಸಮ್ಮತಿ ಸಿಗುತ್ತಾ?

ಯುಪಿಐ ವ್ಯಾಲಟ್​ನಲ್ಲಿ ವಹಿವಾಟು ಮಿತಿ ಇಲ್ಲ. ನಿಮ್ಮ ವ್ಯಾಲಟ್​​ನಲ್ಲಿ ಹಣ ಇರುವವರೆಗೂ ಎಷ್ಟು ಬೇಕಾದರೂ ಟ್ರಾನ್ಸಾಕ್ಷನ್ ನಡೆಸಬಹುದು. ಯುಪಿಐ ಲೈಟ್ ಆದರೆ ದಿನಕ್ಕೆ 4,000 ರೂವರೆಗೂ ಟ್ರಾನ್ಸಾಕ್ಷನ್ ಲಿಮಿಟ್ ಇರುತ್ತದಾದರೂ ಆ ಹಣ ಖಾಲಿ ಆಗುವವರೆಗೂ ಎಷ್ಟು ಬೇಕಾದರೂ ವಹಿವಾಟು ನಡೆಸಬಹುದು.

ಸಣ್ಣ ಸಣ್ಣ ಮೊತ್ತದ ಪೇಮೆಂಟ್​ಗೆ ಯುಪಿಐ ಲೈಟ್ ಹೇಳಿ ಮಾಡಿಸಿದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್