ಈ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ. 6.3 ಬೆಳೆಯಬಹುದು: ವಿಶ್ವಬ್ಯಾಂಕ್ ಅಂದಾಜು
India GDP Growth Projection: ಕಳೆದ ವರ್ಷ ವಿಶ್ವ ಬ್ಯಾಂಕ್ ಮಾಡಿದ ಅಂದಾಜು ಪ್ರಕಾರ ಭಾರತದ ಜಿಡಿಪಿ 2023-24ರಲ್ಲಿ ಶೇ. 6.6ರಷ್ಟು ಬೆಳೆಯಬಹುದು ಎಂದು ಹೇಳಲಾಗಿತ್ತು. ಆದರೆ, ಕಳೆದ ಏಪ್ರಿಲ್ ತಿಂಗಳಲ್ಲಿ ವರದಿ ಬಿಡುಗಡೆ ಮಾಡಿದ್ದ ವಿಶ್ವಬ್ಯಾಂಕ್, 2023-24ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 6.3ರಷ್ಟಾಬಹುದು ಎಂದು ತನ್ನ ನಿರೀಕ್ಷೆ ಇಳಿಸಿತ್ತು. ಈಗ ಮಾಡಿರುವ ಹೊಸ ಅಂದಾಜಿನಲ್ಲಿ ತನ್ನ ಹಿಂದಿನ ನಿರೀಕ್ಷೆಯನ್ನು ವಿಶ್ವ ಬ್ಯಾಂಕ್ ಉಳಿಸಿಕೊಂಡಿದೆ. ಅಂದರೆ 2023-24ರಲ್ಲಿ ಜಿಡಿಪಿ ಶೇ. 6.4ರ ದರದಲ್ಲಿ ಬೆಳೆಯುವ ನಿರೀಕ್ಷೆ ವ್ಯಕ್ತಪಡಿಸಿದೆ.
ನವದೆಹಲಿ, ಅಕ್ಟೋಬರ್ 3: ಭಾರತದ ಜಿಡಿಪಿ (india gdp) ಈ ಹಣಕಾಸು ವರ್ಷದಲ್ಲಿ (2023-24ರಲ್ಲಿ) ಶೇ. 6.3ರಷ್ಟು ವೃದ್ಧಿಸಬಹುದು ಎಂದು ಈ ಹಿಂದೆ ತಾನು ಮಾಡಿದ್ದ ಅಂದಾಜನ್ನು ವಿಶ್ವಬ್ಯಾಂಕ್ (world bank) ಇದೀಗ ಪುನರುಚ್ಚರಿಸಿದೆ. ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ತುಸು ಕಠಿಣವಾಗಿದ್ದರೂ ಭಾರತದ ಉತ್ತಮ ಓಟ ಮುಂದುವರಿಯಬಹುದು ಎಂದು ಹೇಳಿದೆ. ಕಳೆದ ವರ್ಷ ವಿಶ್ವ ಬ್ಯಾಂಕ್ ಮಾಡಿದ ಅಂದಾಜು ಪ್ರಕಾರ ಭಾರತದ ಜಿಡಿಪಿ 2023-24ರಲ್ಲಿ ಶೇ. 6.6ರಷ್ಟು ಬೆಳೆಯಬಹುದು ಎಂದು ಹೇಳಲಾಗಿತ್ತು. ಆದರೆ, ಕಳೆದ ಏಪ್ರಿಲ್ ತಿಂಗಳಲ್ಲಿ ವರದಿ ಬಿಡುಗಡೆ ಮಾಡಿದ್ದ ವಿಶ್ವಬ್ಯಾಂಕ್, 2023-24ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 6.3ರಷ್ಟಾಬಹುದು ಎಂದು ತನ್ನ ನಿರೀಕ್ಷೆ ಇಳಿಸಿತ್ತು. ಈಗ ಮಾಡಿರುವ ಹೊಸ ಅಂದಾಜಿನಲ್ಲಿ ತನ್ನ ಹಿಂದಿನ ನಿರೀಕ್ಷೆಯನ್ನು ಉಳಿಸಿಕೊಂಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ಹಣಕಾಸು ನೀತಿ ಸಭೆಯಲ್ಲಿ ಮಾಡಿದ ಅಂದಾಜು ಪ್ರಕಾರ 2023-24ರಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದಿದೆ. ನಾಳೆಯಿಂದ (ಅಕ್ಟೋಬರ್ 4) ಮತ್ತೊಂದು ಎಂಪಿಸಿ ಸಭೆ ನಡೆಯಲಿದ್ದು ಅಲ್ಲಿ ಜಿಡಿಪಿ ಬೆಳವಣಿಗೆಯನ್ನು ಅವಲೋಕಿಸಿ ತನ್ನ ಅಂದಾಜು ಪರಿಷ್ಕರಿಸಬಹುದು.
ಇದನ್ನೂ ಓದಿ: ಅತ್ತ ವಾಹನಗಳ ಮಾರಾಟ ಹೆಚ್ಚಳ; ಇತ್ತ ಪೆಟ್ರೋಲ್ ಡೀಸೆಲ್ ಬಳಕೆಯಲ್ಲಿ ಹೆಚ್ಚಳ
ಹಿಂದಿನ ಹಣಕಾಸು ವರ್ಷದಲ್ಲಿ (2022-23ರಲ್ಲಿ) ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆದಿತ್ತು. ವಿಶ್ವದ ಪ್ರಮುಖ ಆರ್ಥಿಕ ದೇಶಗಳ ಪೈಕಿ ಭಾರತದ್ದು ಅತಿವೇಗದ ಬೆಳವಣಿಗೆ ಎನಿಸಿದೆ. ಚೀನಾದ ಆರ್ಥಿಕ ವೃದ್ಧಿಯನ್ನೂ ಮೀರಿಸಿ ಭಾರತ ಸಾಧನೆ ಮಾಡಿತ್ತು. ಅದೇ ಮಟ್ಟದ ಬೆಳವಣಿಗೆಯನ್ನು ಈ ಹಣಕಾಸು ವರ್ಷದಲ್ಲಿ ಭಾರತ ನಿರೀಕ್ಷಿಸುತ್ತಿಲ್ಲ. ಆದರೆ, ವಿಶ್ವದ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಬೆಳವಣಿಗೆ ದರ ಹೆಚ್ಚಿರಲಿದೆ.
ಜಾಗತಿಕವಾಗಿ ಆರ್ಥಿಕತೆಯ ಡೋಲಾಯಮಾನ ಸ್ಥಿತಿ ಮುಂದುವರಿಯುತ್ತದಾದರೂ ಭಾರತ ಆರ್ಥಿಕ ಸಮತೋಲನ ಸಾಧಿಸುವ ಸಾಧ್ಯತೆ ಇದೆ. ಇದಕ್ಕೆ ತಜ್ಞರು ವಿವಿಧ ಕಾರಣಗಳನ್ನು ಮುಂದಿಡುತ್ತಾರೆ. ಹೂಡಿಕೆಗಳು ಹೆಚ್ಚಿರುವುದು, ಸರ್ವಿಸ್ ಸೆಕ್ಟರ್ ಉತ್ತಮ ಸ್ಥಿತಿಯಲ್ಲಿರುವುದು, ಬ್ಯಾಂಕಿಂಗ್ ವಲಯ ಬಲಿಷ್ಠಗೊಂಡಿರುವುದು ಮತ್ತು ಉತ್ಪಾದನಾ ಕ್ಷೇತ್ರ ಪುಷ್ಟಿ ಪಡೆಯುತ್ತಿರುವುದು ಭಾರತದ ಆರ್ಥಿಕತೆಯ ಓಟಕ್ಕೆ ಚುರುಕು ಮುಟ್ಟಲು ಕಾರಣವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ