SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?

| Updated By: Srinivas Mata

Updated on: Jun 24, 2021 | 7:30 PM

SBI account UPI service: ನೀವು ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ ಗ್ರಾಹಕರಾಗಿದ್ದಲ್ಲಿ ಯುಪಿಐ ಸೇವೆಗೆ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಹೇಗೆ ಎಂಬುದರ ವಿವರ ಇಲ್ಲಿದೆ.

SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಇಂದು ವ್ಯಾಪಕವಾಗಿ ಬಳಕೆ ಆಗುತ್ತಿರುವ ಯೂನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಅನ್ನು ಕಂಡು ಹಿಡಿದಿದ್ದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ). ಇದನ್ನು ನಿಯಂತ್ರಿಸುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಐಎಂಪಿಎಸ್ ತಂತ್ರಜ್ಞಾನ ಬಳಸಿ, ರಿಯಲ್​ಟೈಮ್​ನಲ್ಲಿ ಎರಡು ಬ್ಯಾಂಕ್ ಖಾತೆಗಳ ಮಧ್ಯೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಯುಪಿಐ ವಹಿವಾಟು ಮಾಡುವುದಕ್ಕೆ ಗೊತ್ತಿರಬೇಕಾದದ್ದು ಯುಪಿಐ ಪಾಸ್​ಕೋಡ್ ಅಥವಾ ಯುಪಿಐ- PIN. ಇದು 4ರಿಂದ 6 ಅಂಕಿಯನ್ನು ಒಳಗೊಂಡಿರುತ್ತದೆ. ಇದು ಭದ್ರತೆಯಂತೆ ಸಹಾಯಕ್ಕೆ ಬರಲಿದ್ದು, ಇಬ್ಬರು ವ್ಯಕ್ತಿಗಳ ಮಧ್ಯೆ ತಕ್ಷಣವೇ ಹಣ ವರ್ಗಾವಣೆ ಆಗುತ್ತದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಆನ್​ಲೈನ್​ ಬ್ಯಾಂಕಿಂಗ್ ಮೂಲಕ ತಮ್ಮ ಖಾತೆಗೆ ಸರಳವಾಗಿ ಯುಪಿಐ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಲ್ಲಿ ಖಾತೆ ಮೂಲಕ ಯುಪಿಐ ಸೇವೆ ಪಡೆಯಲು ಬಯಸಿದಲ್ಲಿ ಈ ಲೇಖನದಿಂದ ಅನುಕೂಲ ಆಗಲಿದೆ.

ಎಸ್​ಬಿಐ ಆನ್​ಲೈನ್ ಅಥವಾ YONO SBI ಮೂಲಕ ಎನೇಬಲ್ ಅಥವಾ ಡಿಸೇಬಲ್ ಮಾಡಬಹುದು. ಒಂದು ವೇಳೆ ನೀವು ಎಸ್​ಬಿಐನ ನೆಟ್​ ಬ್ಯಾಂಕಿಂಗ್ ಬಳಕೆದಾರರಾಗಿದ್ದಲ್ಲಿ ಹಂತಹಂತವಾದ ಯುಪಿಐ ಸೌಲಭ್ಯ ಪಡೆಯಲು ಅಥವಾ ಕೊನೆಗೊಳಿಸಲು ಇಲ್ಲಿದೆ ಹಂತಹಂತವಾದ ವಿವರಣೆ ಇಲ್ಲಿದೆ.
– ಮೊದಲಿಗೆ https://www.onlinesbi.com/ ಗೆ ಭೇಟಿ ನೀಡಿ. ಪರ್ಸನಲ್ ಬ್ಯಾಂಕಿಂಗ್ ಸೆಕ್ಷನ್​ ಅಡಿಯಲ್ಲಿ ಲಾಗಿನ್ ಕ್ಲಿಕ್ ಮಾಡಿ.
– “ಕಂಟಿನ್ಯೂ ಟು ಲಾಗಿನ್” ಮೇಲೆ ಕ್ಲಿಕ್ ಮಾಡಿ. ಆ ನಂತರ ಲಾಗಿನ್ ಟು ಆನ್​ಲೈನ್ ಎಸ್​ಬಿಐ ಪುಟಕ್ಕೆ ತೆರಳುತ್ತದೆ. ಅಲ್ಲಿ ಯೂಸರ್​ ನೇಮ್, ಪಾಸ್​ವರ್ಡ್​ ಮತ್ತು ಅಗತ್ಯ ಇರುವ CAPTCHA ಕೋಡ್ ನಮೂದಿಸಬೇಕು.
– ಒಂದು ಸಲ ಅಕೌಂಟ್​ಗೆ ಸೈನ್​ ಇನ್​ ಆದ ಮೇಲೆ ಮೈ ಪ್ರೊಫೈಲ್ ಸೆಕ್ಷನ್​ಗೆ ಹೋಗುತ್ತದೆ. ಯುಪಿಐ ಆಯ್ಕೆಯಲ್ಲಿ ಎನೇಬಲ್/ಡಿಸೇಬಲ್ ಖಾತೆಯ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಖಾತೆಗೆ ಯುಪಿಐ ಸೇವೆ ಎನೇಬಲ್ ಅಥವಾ ಡಿಸೇಬಲ್ ಆದ್ಯತೆಯನ್ನು ಆರಿಸಿಕೊಳ್ಳಿ.

ಎಸ್​ಬಿಐ ಖಾತೆ ಮೂಲಕ ಯುಪಿಐ ಸೇವೆ ಆ್ಯಕ್ಟಿವೇಟ್ ಮತ್ತು ಡಿಆ್ಯಕ್ಟಿವೇಟ್ ಹಂತಹಂತವಾದ ವಿಧಾನ
– ಎಸ್​ಬಿಐ Yono ಲೈಟ್ ಮೊಬೈಲ್ ಆ್ಯಪ್ ತೆರೆಯಿರಿ ಮತ್ತು ಎಸ್​ಬಿಐ ಮೊಬೈಲ್​ ಬ್ಯಾಂಕಿಂಗ್​ಗೆ ಅಗತ್ಯ ಕ್ರೆಡೆನ್ಷಿಯಲ್ಸ್​​ನೊಂದಿಗೆ ಸೈನ್​ ಇನ್ ಆಗಿ.
– ಯುಪಿಐ ಆಯ್ಕೆ ಮೇಲೆ ಒತ್ತಿ ಮತ್ತು ಯುಪಿಐ ಡಿಸೇಬಲ್/ಎನೇಬಲ್ ಆಯ್ಕೆಯನ್ನು ಆರಿಸಿಕೊಳ್ಳಿ.
– ಈಗ ನಿಮ್ಮ ಖಾತೆಯನ್ನು ಆರಿಸಿಕೊಳ್ಳಿ ಮತ್ತು ಖಾತೆಗೆ ಯುಪಿಐ ಸೇವೆಯ ಎನೇಬಲ್ ಅಥವಾ ಡಿಆ್ಯಕ್ಟಿವೇಟ್ ಆದ್ಯತೆಯನ್ನು ನಿರ್ಧರಿಸಿ.

ಯುಪಿಐ PIN ಬಳಸಿ ಹಣ ವರ್ಗಾವಣೆ ಮಾಡುವುದು ಹೇಗೆ?
– ಮೊಬೈಲ್​ ಫೋನ್​ನಲ್ಲಿ BHIM SBI ಪೇ ಆ್ಯಪ್ ತೆರೆದು, ಖಾತೆಗೆ ಲಾಗ್ ಇನ್ ಆಗಬೇಕು.
– Pay ಆಯ್ಕೆ ಮೇಲೆ ಒತ್ತಬೇಕು ಮತ್ತು ವಿಪಿಎ ಅಥವಾ ಅಕೌಂಟ್ ಮತ್ತು ಐಎಫ್​ಎಸ್​ಸಿ ಅಥವಾ ಕ್ಯೂಆರ್ ಕೋಡ್ ಆರಿಸಿಕೊಳ್ಳಬೇಕು.
– ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅದನ್ನು ಖಾತ್ರಿಪಡಿಸಬೇಕು.
– ಜೋಡಣೆ ಆಗಿರುವ ಖಾತೆಗಳಿಂದ ಡೆಬಿಟ್ ಆಗಬೇಕಾದ ಖಾತೆಯನ್ನು ಆರಿಸಿಕೊಳ್ಳಬೇಕು ಮತ್ತು ಟಿಕ್ ಗುರುತಿನ ಮೇಲೆ ಕ್ಲಿಕ್ ಮಾಡಬೇಕು.
– ವಹಿವಾಟು ಆರಂಭಿಸುವುದಕ್ಕೆ ಯುಪಿಐ PIN ನಮೂದಿಸಬೇಕು ಮತ್ತು ಅದನ್ನು ಸಂಪೂರ್ಣಗೊಳಿಸಲು ಟಿಕ್ ಗುರುತಿನ ಮೇಲೆ ಕ್ಲಿಕ್ ಮಾಡಬೇಕು.

ಎಸ್​ಬಿಐ ಯುಪಿಐ ಮಿತಿ
ಯುಪಿಐ PIN ನಿಗದಿ ಆದ ಮೇಲೆ ಮೊದಲ ವಹಿವಾಟು ಗರಿಷ್ಠ 5000 ರೂಪಾಯಿ ಇರುತ್ತದೆ. ಮೊದಲ ಇಪ್ಪತ್ನಾಲ್ಕು ಗಂಟೆಯಲ್ಲಿ ಕ್ಯುಮುಲೇಟಿವ್ ಮೊತ್ತ ದಿನಕ್ಕೆ 5 ಸಾವಿರ ರೂಪಾಯಿ. BHIM SBI Payನಲ್ಲಿ ಒಂದು ದಿನಕ್ಕೆ 1 ಲಕ್ಷ ರೂಪಾಯಿಯ ಮಿತಿ ಇದೆ. 1 ಲಕ್ಷ ರೂಪಾಯಿ ಮಿತಿಯಲ್ಲಿ 24 ಗಂಟೆಯಲ್ಲಿ ಒಂದು ಖಾತೆಗೆ ಗರಿಷ್ಠ 10 ವಹಿವಾಟು ಮಾಡಬಹುದು.

ಇದನ್ನೂ ಓದಿ: ಯುಪಿಐ, ಐಎಂಪಿಎಸ್ ಹಣ ವರ್ಗಾವಣೆ ವಿಫಲವಾದರೆ ಬ್ಯಾಂಕ್​ಗಳಿಂದ ದಿನಕ್ಕೆ 100 ರೂ.ನಂತೆ ದಂಡ ಪಾವತಿ

(How to activate and deactivate UPI services in SBI account by customers. Here is an explainer)

Published On - 7:24 pm, Thu, 24 June 21