UPI Transaction Limit: ಕೆಲ ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇವತ್ತಿನಿಂದ ಅಪ್​ಡೇಟೆಡ್ ಸೌಲಭ್ಯ ಜಾರಿ

|

Updated on: Sep 16, 2024 | 12:06 PM

Increase of UPI transaction limit: ಮೂರು ವಿಭಾಗಗಳಿಗೆ ಯುಪಿಐ ಪಾವತಿ ಮಿತಿಯನ್ನು ಏರಿಸಲಾಗಿದೆ. ಒಂದು ವಹಿವಾಟಿಗೆ ಇದ್ದ 1 ಲಕ್ಷ ರೂ ಪಾವತಿ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಇಂದು ಸೆ. 16ರಿಂದ ಇದು ಜಾರಿಗೆ ಬರುತ್ತದೆ. ತೆರಿಗೆ ಪಾವತಿಗಳಿಗೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ, ಹಾಗು ಐಪಿಒ ಮತ್ತು ಆರ್​ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್​ಗಳಿಗೆ ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಲಾಗಿದೆ.

UPI Transaction Limit: ಕೆಲ ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇವತ್ತಿನಿಂದ ಅಪ್​ಡೇಟೆಡ್ ಸೌಲಭ್ಯ ಜಾರಿ
ಯುಪಿಐ
Follow us on

ನವದೆಹಲಿ, ಸೆಪ್ಟೆಂಬರ್ 16: ಮೂರು ರೀತಿಯ ಪಾವತಿಗಳಿಗೆ ಯುಪಿಐ ವಹಿವಾಟು ಮಿತಿಯನ್ನು 5 ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಯುಪಿಐ ಮೂಲಕ ಹಣ ಪಾವತಿಸಬೇಕಾದರೆ ಒಂದು ಟ್ರಾನ್ಸಾಕ್ಷನ್​ನಲ್ಲಿ ಒಂದು ಲಕ್ಷ ರೂವರೆಗೆ ಮಾತ್ರ ಹಣ ಕಳುಹಿಸಲು ಸಾಧ್ಯ. ಇನ್ಷೂರೆನ್ಸ್, ಫಾರೀನ್ ರೆಮಿಟೆನ್ಸ್, ಕ್ಯಾಪಿಟಲ್ ಮಾರ್ಕೆಟ್​ಗೆ ಸಂಬಂಧಿಸಿದ ಪಾವತಿಗೆ ಯುಪಿಐ ವಹಿವಾಟು ಮಿತಿ 2 ಲಕ್ಷ ರೂ ಇದೆ. ಇದೀಗ ತೆರಿಗೆ ಪಾವತಿ ಸೇರಿದಂತೆ ಕೆಲ ನಿರ್ದಿಷ್ಟ ಪಾವತಿಗಳಿಗೆ ಯುಪಿಐ ಮಿತಿಯನ್ನು 5 ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಎನ್​ಪಿಸಿಐ ತಂದಿರುವ ಈ ಬದಲಾವಣೆ ಇಂದಿನಿಂದ ಜಾರಿಗೆ ಬರಲಿದೆ.

ಐದು ಲಕ್ಷ ಪಾತಿ ಮಿತಿ ಇರುವ ಯುಪಿಐ ಟ್ರಾನ್ಸಾಕ್ಷನ್​ಗಳಿವು…

  1. ತೆರಿಗೆ ಪಾವತಿ
  2. ಆಸ್ಪತ್ರೆ
  3. ಶಿಕ್ಷಣ ಸಂಸ್ಥೆ
  4. ಐಪಿಒ
  5. ಆರ್​ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್

ಈ ಮೇಲಿನ ಕಾರ್ಯಗಳಿಗೆ ಮತ್ತು ಸಂಸ್ಥೆಗಳಿಗೆ ಒಂದೇ ಟ್ರಾನ್ಸಾಕ್ಷನ್​ನಲ್ಲಿ 5 ಲಕ್ಷ ರೂವರೆಗೂ ಯುಪಿಐ ಮೂಲಕ ಹಣ ಕಳುಹಿಸಬಹುದು. ಬ್ಯಾಂಕುಗಳು, ಪೇಮೆಂಟ್ ಸರ್ವಿಸ್ ನೀಡುಗರು, ಯುಪಿಐ ಆ್ಯಪ್​ಗಳು ಸೇರಿದಂತೆ ಪೇಮೆಂಟ್ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಭಾಗಿಯಾಗಿರುವ ಎಲ್ಲಾ ಸದಸ್ಯರಿಗೂ ಎನ್​ಪಿಸಿಐ ಹೊಸ ಯುಪಿಐ ಟ್ರಾನ್ಸಾಕ್ಷನ್ ಅಪ್ಪರ್ ಲಿಮಿಟ್ ಬಗ್ಗೆ ಮೊದಲೇ ಸೂಚನೆ ನೀಡಿದೆ. ವೆರಿಫೈ ಆಗಿರುವ ವರ್ತಕರ ಎಂಸಿಸಿ 9311 ಕೆಟಗರಿಗೆ ಈ ಟ್ರಾನ್ಸಾಕ್ಷನ್ ಲಿಮಿಟ್ ಹೆಚ್ಚಳ ಆಗಿರುವುದನ್ನು ಇವು ಖಾತ್ರಿಪಡಿಸಬೇಕಾಗುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಐಫೋನ್ 16 ಖರೀದಿಸಬೇಕಾ? ಹಳೆಯ ಸ್ಮಾರ್ಟ್​ಫೋನ್ ಮರಳಿಸಿದರೆ 67,500 ರೂವರೆಗೂ ಡಿಸ್ಕೌಂಟ್

ತೆರಿಗೆ ಪಾವತಿಗಳನ್ನು ಸ್ವೀಕರಿಸುವ ವರ್ತಕರು ಆ ನಿಯಮಕ್ಕೆ ಸಂಬದ್ಧವಾಗಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ವೆರಿಫೈಡ್ ಮರ್ಚೆಂಟ್​ಗಳ ಪಟ್ಟಿಗೆ ಸೇರಿಸಬೇಕು. ಈ ವೆರಿಫೈಡ್ ವರ್ತಕರು ಯುಪಿಐ ಅನ್ನು ಪೇಮೆಂಟ್ ಮೋಡ್ ಆಗಿ ಆಯ್ಕೆ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಟ್ಯಾಕ್ಸ್ ಪೇಮೆಂಟ್ ವಿಭಾಗದಲ್ಲಿ ಟ್ರಾನ್ಸಾಕ್ಷನ್ ಮಿತಿ ಏರಿಕೆ ಆಗಿರುವುದಿಲ್ಲ. ಅಂದರೆ, ಗ್ರಾಹಕರು ಒಂದು ಲಕ್ಷ ರೂ ಹಣವನ್ನು ಒಂದು ವಹಿವಾಟಿನಲ್ಲಿ ಪಾವತಿಸಲು ಆಗುವುದಿಲ್ಲ.

ಹಾಗೆಯೇ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀವು ಐದು ಲಕ್ಷ ರೂವರೆಗೆ ಹಣ ಪಾವತಿಸಬಹುದಾಗಿದೆ. ಚೆಕ್ ಬಳಕೆ ಅಥವಾ ಕಾರ್ಡ್ ಬಳಕೆಯ ಅವಶ್ಯಕತೆ ಇಲ್ಲದೇ ಯುಪಿಐ ಮೂಲಕ ಹಣ ಪಾವತಿಸಬಹುದು.

ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆಯ ಅವಶ್ಯಕತೆ ಇರುವ ಐಪಿಒ ಮತ್ತು ಆರ್​ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್​ಗಳಲ್ಲಿ ನೀವು ಯುಪಿಐ ಮೂಲಕ ಹಣ ಪಾವತಿಸಬಹುದು. ಇಲ್ಲೂ ಕೂಡ ಒಂದು ವಹಿವಾಟಿನಲ್ಲಿ 5 ಲಕ್ಷ ರೂವರೆಗೂ ಪಾವತಿ ಮಾಡಬಹುದು.

ಇದನ್ನೂ ಓದಿ: ಭಾರತದ ಚಿಪ್ ತಯಾರಕ ಪಾಲಿಮಾಟೆಕ್ ಸಂಸ್ಥೆಯಿಂದ ಬಹರೇನ್​ನಲ್ಲಿ ಹೊಸ ಘಟಕ; 3 ವರ್ಷದಲ್ಲಿ 850 ಕೋಟಿ ರೂ ಹೂಡಿಕೆ

ಗಮನಿಸಬೇಕಾದ ಸಂಗತಿ ಎಂದರೆ, ಮೂರು ಕೆಟಗರಿಯ ವಹಿವಾಟುಗಳಿಗೆ ಪಾವತಿ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಆದಾಗ್ಯೂ ಎಲ್ಲಾ ಬ್ಯಾಂಕುಗಳು ಅಥವಾ ಯುಪಿಐ ಪ್ಲಾಟ್​ಫಾರ್ಮ್​ಗಳು ಮಿತಿ ಹೆಚ್ಚಿಸುತ್ತವೆ ಎಂಬುದು ಖಾತ್ರಿ ಇಲ್ಲ. ಒಂದೊಂದು ಬ್ಯಾಂಕುಗಳೂ ಕೂಡ ಬೇರೆ ಬೇರೆ ವಹಿವಾಟು ಮಿತಿ ನಿಗದಿ ಮಾಡಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ