AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಬೆಲೆಗೆ ಐಫೋನ್ 16 ಖರೀದಿಸಬೇಕಾ? ಹಳೆಯ ಸ್ಮಾರ್ಟ್​ಫೋನ್ ಮರಳಿಸಿದರೆ 67,500 ರೂವರೆಗೂ ಡಿಸ್ಕೌಂಟ್

Apple iPhone 16 series smartphone: ಭಾರತದಲ್ಲಿ ಬಿಡುಗಡೆ ಆಗಿರುವ ಐಫೋನ್ 16 ಸರಣಿಯ ಫೋನ್​ಗಳನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್​ಫೋನ್​ಗೆ ರಿಟರ್ನ್ ಆಫರ್ ಇದೆ. ಆಂಡ್ರಾಯ್ಡ್ ಮತ್ತು ಐಫೋನ್​ನ ವಿವಿಧ ಹಳೆಯ ಫೋನ್​ಗಳಿಗೆ 67,500 ರೂವರೆಗೆ ಹಣ ಸಿಗುತ್ತದೆ. ಐಫೋನ್ 16 ಸರಣಿಯ ಫೋನ್ 79,900 ರೂನಿಂದ ಹಿಡಿದು 1,84,900 ರೂವರೆಗೂ ಲಭ್ಯ ಇದೆ. ಐಫೋನ್ 16 ಕೇವಲ 8,000 ರೂ ಒಳಗೆ ಪಡೆಯಲು ಅವಕಾಶ ಇದೆ.

ಕಡಿಮೆ ಬೆಲೆಗೆ ಐಫೋನ್ 16 ಖರೀದಿಸಬೇಕಾ? ಹಳೆಯ ಸ್ಮಾರ್ಟ್​ಫೋನ್ ಮರಳಿಸಿದರೆ 67,500 ರೂವರೆಗೂ ಡಿಸ್ಕೌಂಟ್
ಐಫೋನ್ 16
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2024 | 4:21 PM

Share

ನವದೆಹಲಿ, ಸೆಪ್ಟೆಂಬರ್ 15: ಆ್ಯಪಲ್​ನ ಐಫೋನ್ 16 ಸರಣಿಯ ಸ್ಮಾರ್ಟ್​ಫೋನ್​ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿವೆ. ಆ್ಯಪಲ್​ನ ಆನ್ಲೈನ್ ಸ್ಟೋರ್​ನಲ್ಲಿ ಈ ಫೋನ್​ಗಳನ್ನು ಪ್ರೀ ಆರ್ಡರ್ ಮೂಲಕ ಬುಕಿಂಗ್ ಮಾಡಬಹುದು. ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೋ ಮತ್ತು ಐಫೋನ್ 16 ಪ್ರೋ ಮ್ಯಾಕ್ಸ್ ಫೋನ್​ಗಳು ಬಿಡುಗಡೆ ಆಗಿವೆ. ಇವು 79,900 ರೂನಿಂದ ಹಿಡಿದು 1,84,900 ರೂವರೆಗೂ ಬೆಲೆ ಹೊಂದಿವೆ. ನಿಮ್ಮ ಬಳಿ ಇರುವ ಯಾವುದಾದರೂ ಹಳೆಯ ಸ್ಮಾರ್ಟ್​ಫೋನ್​ವೊಂದನ್ನು ನೀಡಿದರೆ 67,500 ರೂವರೆಗೂ ರಿಯಾಯಿತಿ ಪಡೆಯುವ ಅವಕಾಶ ಇದೆ. ಅ್ಯಪಲ್​ನ ಆನ್​ಲೈನ್ ಸ್ಟೋರ್​ನಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳ ಎಕ್ಸ್​ಚೇಂಜ್ ರೇಟ್ ಅನ್ನು ನಿಗದಿ ಮಾಡಲಾಗಿದೆ. ಆ್ಯಪಲ್​ನದ್ದೇ ಹಳೆಯ ಐಫೋನ್ ಮತ್ತು ಬೇರೆ ಆಂಡ್ರಾಯ್ಡ್ ಫೋನ್​ಗಳಾದರೂ ಎಕ್ಸ್​ಚೇಂಜ್ ಮಾಡಬಹುದು.

ಐಫೋನ್ 6ಎಸ್ ಪ್ಲಸ್ ಅನ್ನು ಎಕ್ಸ್​ಚೇಂಜ್ ಮಾಡಿದರೆ 4,650 ರೂ ಸಿಗುತ್ತದೆ. ಐಫೋನ್ 15 ಪ್ರೋ ಮ್ಯಾಕ್ಸ್ ಫೋನ್ ಮರಳಿಸಿದರೆ 67,500 ರೂ ಸಿಗುತ್ತದೆ. ಇದರ ನಡುವಿನ ವಿವಿಧ ಶ್ರೇಣಿಯ ಐಫೋನ್​ಗಳಿಗೆ ಬೇರೆ ಬೇರೆ ದರ ಪಟ್ಟಿ ಇದೆ.

ಆಂಡ್ರಾಯ್ಡ್ ಫೋನ್​ಗಳ ಪೈಕಿ ಸ್ಯಾಮ್ಸುಂಗ್ ಗೆಲಾಕ್ಸಿ ಝಡ್ ಫೋಲ್ಡ್5ಗೆ ಗರಿಷ್ಠ ಎಕ್ಸ್​ಚೇಂಜ್ ರೇಟ್ ಇದೆ. 46,800 ರೂವರೆಗೂ ಹಣ ಸಿಗುತ್ತದೆ. ಸ್ಯಾಮ್ಸುಂಗ್ ಗೆಲಾಕ್ಸಿ ಎಸ್23 ಅಲ್​ಟ್ರಾಗೆ 41,000 ರೂವರೆಗೂ ಹಣ ಸಿಗುತ್ತದೆ. ಸ್ಯಾಮ್ಸುಂಗ್ ಗೆಲಾಕ್ಸಿ ಎಂ31 ಫೋನ್​ಗೆ 2,110 ರೂವರೆಗೂ ಎಕ್ಸ್​ಚೇಂಜ್ ಆಫರ್ ಇದೆ. ರೆಡ್​ಮಿ ನೋಟ್ 11ಗೆ 3,100 ರೂ.

ಇದನ್ನೂ ಓದಿ: iPhone 15 : ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!

ಒಟ್ಟಾರೆ ನಿಮ್ಮ ಹಳೆಯ ಸ್ಮಾರ್ಟ್​ಫೋನ್​ನ ವರ್ಕಿಂಗ್ ಕಂಡಿಶನ್ ಹೇಗಿದೆ, ಎಷ್ಟು ಮೆಮೋರಿಯ ಫೋನ್ ಇತ್ಯಾದಿ ಅಂಶಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗಿದೆ.

ಐಫೋನ್ 16 ಸರಣಿಯ ಫೋನ್​ಗಳ ಬೆಲೆ ಎಷ್ಟು?

ಐಫೋನ್ 16: 128ಜಿಬಿ, 256ಜಿಬಿ ಮತ್ತು 512 ಜಿಬಿ ಶ್ರೇಣಿಯಲ್ಲಿ ಲಭ್ಯ ಇದೆ. 79,900 ರೂ, 89,900 ರೂ, ಮತ್ತು 1,09,900 ರೂ ಬೆಲೆ ಇದೆ.

ಐಫೋನ್ 16 ಪ್ಲಸ್ ಫೋನ್ ಬೆಲೆ

128 ಜಿಬಿ: 89,900 ರೂ

256 ಜಿಬಿ: 99,900 ರೂ

512 ಜಿಬಿ: 1,11,900 ರೂ

ಐಫೋನ್ 16 ಪ್ರೋ

128 ಜಿಬಿ: 1,19,900 ರೂ

256 ಜಿಬಿ: 1,29,900 ರೂ

512 ಜಿಬಿ: 1,49,900 ರೂ

1 ಟಿಬಿ: 1,69,900 ರೂ

ಐಫೋನ್ 16 ಪ್ರೋ ಮ್ಯಾಕ್ಸ್

256 ಜಿಬಿ: 1,44,900 ರೂ

512 ಜಿಬಿ: 1,64,900 ರೂ

1 ಟಿಬಿ: 1,84,900 ರೂ

ಆ್ಯಪಲ್ ಆನ್​ಲೈನ್ ಸ್ಟೋರ್​ನಲ್ಲಿ ನೀವು ಪ್ರೀ ಆರ್ಡರ್ ಮಾಡಬಹುದು. ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ಗಳಾದ ಅಮೇಜಾನ್, ಫ್ಲಿಪ್​ಕಾರ್ಟ್, ವಿಜಯ್ ಸೇಲ್ಸ್ ಇತ್ಯಾದಿಯಲ್ಲೂ ಐಫೋನ್ ಬುಕ್ ಮಾಡಬಹುದು. ಫ್ಲಿಪ್​ಕಾರ್ಟ್​​ನಲ್ಲಿ ನೀವು ಎಕ್ಸಿಸ್ ಅಥವಾ ಐಸಿಐಸಿಐ ಕಾರ್ಡ್ ಮೂಲಕ ಐಫೋನ್ 16 ಫೋನ್ ಖರೀದಿಸಿದರೆ ನೇರ 5,000 ರೂ ರಿಯಾಯಿತಿ ಲಭ್ಯ ಇದೆ.

ಇದನ್ನೂ ಓದಿ: iPhone 16: ಆ್ಯಪಲ್ ಲೇಟೆಸ್ಟ್ ಐಫೋನ್ 16 ರಿಲೀಸ್ ಆಯ್ತು, ರೇಟ್ ಎಷ್ಟು ಗೊತ್ತಾ?

8,000 ರೂ ಒಳಗೆ ಐಫೋನ್ 16 ಸಿಗುತ್ತಾ?

ನೀವು ಹಳೆಯ ಸ್ಮಾರ್ಟ್​ಫೋನ್ ಎಕ್ಸ್​ಚೇಂಜ್ ಮತ್ತು ಫ್ಲಿಪ್​ಕಾರ್ಟ್ ಡಿಸ್ಕೌಂಟ್ ಬಳಸಿದರೆ ಹೊಸ ಐಫೋನ್ 16 ಅನ್ನು 8,000 ರೂಗೆ ಖರೀದಿಸಬಹುದು. ಫ್ಲಿಪ್​ಕಾರ್ಟ್​ನಲ್ಲಿ ಎಕ್ಸಿಸ್ ಮತ್ತು ಐಸಿಐಸಿಐ ಕಾರ್ಡ್​ನಿಂದ ಫೋನ್ ಖರೀದಿಸಿದರೆ 5,000 ರೂ ಡಿಸ್ಕೌಂಟ್ ಸಿಗುತ್ತದೆ. ಐಫೋನ್ 15 ಪ್ರೋ ಮ್ಯಾಕ್ಸ್ ಫೋನ್ ನಿಮ್ಮಲ್ಲಿದ್ದು ಅದನ್ನು ಮರಳಿಸಿದರೆ 67,500 ರೂ ಡಿಸ್ಕೌಂಟ್ ಸಿಗುತ್ತದೆ. ಒಟ್ಟು 72,500 ರೂ ಡಿಸ್ಕೌಂಟ್ ಆಗುತ್ತದೆ. ಐಫೋನ್ 16ನ ಬೆಲೆ 79,900 ರೂನಿಂದ ಆರಂಭವಾಗುತ್ತದೆ. ಈ ಡಿಸ್ಕೌಂಟ್ ಸಿಕ್ಕರೆ ಅದು 7,400 ರೂಗೆ ಲಭ್ಯ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ