iPhone 15 : ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಆ್ಯಪಲ್ ಐಫೋನ್ 14 ಮತ್ತು ಐಫೋನ್ 15 ಖರೀದಿಗೆ ಆ್ಯಪಲ್ ಭಾರಿ ಡಿಸ್ಕೌಂಟ್ ಘೋಷಿಸಿದ್ದು, ಮಾರುಕಟ್ಟೆ ದರದಲ್ಲಿ ₹10,000 ಇಳಿಕೆ ಮಾಡಿದೆ. ನೂತನ ದರ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಹೊಸ ಐಫೋನ್ ಖರೀದಿಸುವವರಿಗೆ ಅನುಕೂಲವಾಗಲಿದೆ. ಅದರ ಜತೆಗೆ ಎಕ್ಸ್ಚೇಂಜ್ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್ಬ್ಯಾಕ್ ಆಫರ್ ಕೂಡ ಲಭ್ಯವಾಗುತ್ತಿದ್ದು, ಹಬ್ಬದ ಕೊಡುಗೆಯ ಪ್ರಯೋಜನವೂ ದೊರೆಯಲಿದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಆ್ಯಪಲ್ ಐಫೋನ್ 16 ಸರಣಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಐಫೋನ್ ಬಿಡುಗಡೆಯಾಗುತ್ತಲೇ ಹಳೆಯ ಮಾದರಿಗಳ ಮೇಲೆ ಆ್ಯಪಲ್ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಆ್ಯಪಲ್ ಐಫೋನ್ 14 ಮತ್ತು ಐಫೋನ್ 15 ಖರೀದಿಗೆ ಆ್ಯಪಲ್ ಭಾರಿ ಡಿಸ್ಕೌಂಟ್ ಘೋಷಿಸಿದ್ದು, ಮಾರುಕಟ್ಟೆ ದರದಲ್ಲಿ ₹10,000 ಇಳಿಕೆ ಮಾಡಿದೆ. ನೂತನ ದರ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಹೊಸ ಐಫೋನ್ ಖರೀದಿಸುವವರಿಗೆ ಅನುಕೂಲವಾಗಲಿದೆ. ಅದರ ಜತೆಗೆ ಎಕ್ಸ್ಚೇಂಜ್ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್ಬ್ಯಾಕ್ ಆಫರ್ ಕೂಡ ಲಭ್ಯವಾಗುತ್ತಿದ್ದು, ಹಬ್ಬದ ಕೊಡುಗೆಯ ಪ್ರಯೋಜನವೂ ದೊರೆಯಲಿದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.