‘ಪರಮ ಮಿತ್ರ, ಬ್ರಾಂಡ್ ಅಂಬಾಸಿಡರ್’; ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
PM Modi: ಭಾರತದ ಪ್ಯಾರಾ ಅಥ್ಲೀಟ್‌ಗಳು ತಮಗೆ ಸಿಕ್ಕ ಸಹಕಾರ ಹಾಗೂ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರನ್ನು ಹೊಗಳಿದರು. ಈ ವೇಳೆ ಒಬ್ಬ ಅಥ್ಲೀಟ್, ‘ಪಿಎಮ್ ಎಂದರೆ ಪ್ರಧಾನ ಮಂತ್ರಿ ಎಂದರ್ಥ. ಆದರೆ ನಮ್ಮ ಪಾಲಿಗೆ ಪಿಎಮ್ ಎಂದರೆ ಪ್ರಧಾನ ಮಿತ್ರ’ ಎಂದರು. ಮತ್ತೊಬ್ಬ ಕೋಚ್ ಮಾತನಾಡಿ, ‘ನಮಗೆ ಬೇರೆ ಯಾರು ಬ್ರಾಂಡ್ ಅಂಬಾಸಿಡರ್ ಇಲ್ಲ. ನಮ್ಮ ಮೋದಿಯೇ ನಮಗೆ ಬ್ರಾಂಡ್ ಅಂಬಾಸಿಡರ್’ ಎಂದರು.
ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 29 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಐತಿಹಾಸಿಕ ಸಾಧನೆಯೊಂದಿಗೆ ಪ್ಯಾರಾಲಿಂಪಿಕ್ಸ್ಗೆ ವಿದಾಯ ಹೇಳಿದ್ದ ಭಾರತದ ಎಲ್ಲಾ ಕ್ರೀಡಾಪಟುಗಳು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇದೀಗ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದರು. ವಾಸ್ತವವಾಗಿ ಕಳೆದ ಕೆಲವು ವರ್ಷಗಳಿಂದ ಆಟಗಾರರನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರಂತೆ ಈ ಹಿಂದೆ ನಡೆದಿದ್ದ ಟೊಕಿಯೋ ಒಲಿಂಪಿಕ್ಸ್ ಬಳಿಕವೂ ಮೋದಿ ಅವರು ಭಾರತದ ಕ್ರೀಡಾಪಟುಗಳನ್ನು ಭೇಟಿಯಾಗಿದ್ದರು.
ಇತ್ತೀಚೆಗಷ್ಟೇ ಮುಗಿದಿದ್ದ ಟಿ20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವನ್ನು ಮೋದಿ ಭೇಟಿಯಾಗಿದ್ದರು. ಆ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನ ಕ್ರೀಡಾಪಟುಗಳೊಂದಿಗೆಯೂ ಮೋದಿ ಸಂವಾದ ನಡೆಸಿದ್ದರು. ಇದೀಗ ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಆಟಗಾರರೊಂದಿಗೆ ಸಂವಾದ ನಡೆಸಿದರು. ಪಂದ್ಯಾವಳಿಯ ಅನುಭವಗಳನ್ನು ಆಟಗಾರರು ಅವರೊಂದಿಗೆ ಹಂಚಿಕೊಂಡರು.
ಇದೇ ವೇಳೆ ಭಾರತದ ಪ್ಯಾರಾ ಅಥ್ಲೀಟ್‌ಗಳು ತಮಗೆ ಸಿಕ್ಕ ಸಹಕಾರ ಹಾಗೂ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರನ್ನು ಹೊಗಳಿದರು. ಈ ವೇಳೆ ಒಬ್ಬ ಅಥ್ಲೀಟ್, ‘ಪಿಎಮ್ ಎಂದರೆ ಪ್ರಧಾನ ಮಂತ್ರಿ ಎಂದರ್ಥ. ಆದರೆ ನಮ್ಮ ಪಾಲಿಗೆ ಪಿಎಮ್ ಎಂದರೆ ಪ್ರಧಾನ ಮಿತ್ರ’ ಎಂದರು. ಮತ್ತೊಬ್ಬ ಕೋಚ್ ಮಾತನಾಡಿ, ‘ನಮಗೆ ಬೇರೆ ಯಾರು ಬ್ರಾಂಡ್ ಅಂಬಾಸಿಡರ್ ಇಲ್ಲ. ನಮ್ಮ ಮೋದಿಯೇ ನಮಗೆ ಬ್ರಾಂಡ್ ಅಂಬಾಸಿಡರ್’ ಎಂದರು.