‘ಕೆಲವು ಅನುಮಾನ ಇತ್ತು, ಕೇಳಿದ್ದೇನೆ’: ದರ್ಶನ್ ಭೇಟಿ ಬಳಿಕ ಲಾಯರ್ ಪ್ರತಿಕ್ರಿಯೆ
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಕೀಲರು ಭೇಟಿ ಮಾಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಆಗಿರುವುದರಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ದರ್ಶನ್ ಭೇಟಿ ಬಳಿಕ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ದರ್ಶನ್ ಜೊತೆ ನಡೆದ ಮಾತುಕಥೆಯ ವಿವರ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
‘ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಇನ್ನೂ ಸಮಯ ಇದೆ. ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳ ಬಗ್ಗೆ ದರ್ಶನ್ ಜೊತೆ ಚರ್ಚೆ ಮಾತಾಡಿದ್ದೇವೆ. ಕೆಲವು ಅನುಮಾನಗಳು ಇದ್ದವು. ಅದಕ್ಕೆ ಸ್ಪಷ್ಟನೆ ತೆಗೆದುಕೊಂಡಿದ್ದೇವೆ. ಅದು ಏನು ಎಂಬುದನ್ನು ಇಲ್ಲಿ ಹೇಳೋಕೆ ಆಗಲ್ಲ. ನಾವೆಲ್ಲ ಇನ್ನೂ ಜಾರ್ಜ್ಶೀಟ್ ಓದುತ್ತಿದ್ದೇವೆ. ಹಿರಿಯರು ಇದ್ದಾರೆ. ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ದರ್ಶನ್ ಪರ ವಕೀಲರು ಬಳ್ಳಾರಿಯಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್ ನೀಡಿದ್ದ ಭರವಸೆ ಬಗ್ಗೆ ಬೈಕ್ ಟ್ಯಾಕ್ಸಿ ರೈಡರ್ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
